AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೋನಾ ಹರಡುವ ಅಪಾಯ ತಡೆಯಲು ಯಾವ ರೀತಿಯ ಮಾಸ್ಕ್​ ಬಳಕೆ ಉತ್ತಮ ? ಇಲ್ಲಿದೆ ಮಾಹಿತಿ

ಕೊರೋನ ಆರಂಭದ ದಿನಗಳಲ್ಲಿ ಫೇಸ್​ ಮಾಸ್ಕ್​ ರೋಗ ಹರಡುವ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಎಂದು ಯುಎಸ್​ ನ ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ ಆ್ಯಂಡ್​ ಪ್ರಿವೆನ್ಶನ್​ ಸಂಸ್ಥೆ ಶಿಫಾರಸ್ಸು ಮಾಡಿತ್ತು. ಅದೇ ಇಂದಿಗೂ ರೋಗ ನಿಯಂತ್ರಣಕ್ಕೆ ಪ್ರಾಥಮಿಕ ಪರಿಹಾರವಾಗಿದೆ.

ಕೊರೋನಾ ಹರಡುವ ಅಪಾಯ ತಡೆಯಲು ಯಾವ ರೀತಿಯ ಮಾಸ್ಕ್​ ಬಳಕೆ ಉತ್ತಮ ? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Dec 17, 2021 | 1:49 PM

Share

ಕೊರೋನಾ ಆರಂಭವಾದ ಬಳಿಕ ಮಾಸ್ಕ್​ನ ಬಳಕೆ ಹೆಚ್ಚಾಗಿದೆ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್​ ಅನಿವಾರ್ಯವಾಗಿದೆ. ಹೀಗಾಗಿ ಮಾಸ್ಕ್​ ದಿನನಿತ್ಯದ ಜೀವನದ ಭಾಗವಾಗಿದೆ. ರೋಗ ಹರಡುವುದನ್ನು ತಡೆಯಲು ಫೇಸ್​ ಮಾಸ್ಕ್​ ಅವಶ್ಯಕವಾಗಿದೆ. ಈ ಮಾಸ್ಕ್​ಗಳು ಏರೋಸಾಲ್​ಗಳು ಮತ್ತು ಮೂಗು ಹಾಗೂ ಬಾಯಿಯಿಂದ ಹೊರಬರುವ ಹನಿಗಳಿಂದ ಹರಡುವ ಕೊರೋನಾದಂತಹ ರೋಗಗಳನ್ನು ತಡೆಯುತ್ತದೆ. ಕೊರೋನ ಆರಂಭದ ದಿನಗಳಲ್ಲಿ ಫೇಸ್​ ಮಾಸ್ಕ್​ ರೋಗ ಹರಡುವ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಎಂದು ಯುಎಸ್​ ನ ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ ಆ್ಯಂಡ್​ ಪ್ರಿವೆನ್ಶನ್​ ಸಂಸ್ಥೆ ಶಿಫಾರಸ್ಸು ಮಾಡಿತ್ತು. ಅದೇ ಇಂದಿಗೂ ರೋಗ ನಿಯಂತ್ರಣಕ್ಕೆ ಪ್ರಾಥಮಿಕ ಪರಿಹಾರವಾಗಿದೆ.

ಕೆಲವರಿಗೆ ಉಸಿರಾಟದ ಸಮಸ್ಯೆಯಿರುವುದರಿಂದ ಮುಖವನ್ನು ಬಿಗಿಯಾಗಿ ಮುಚ್ಚುವ ಮಾಸ್ಕ್​ಗಳು ಹೆಚ್ಚು ತೊಂದರೆ ಉಂಟು ಮಾಡಬಹುದು. ಹೀಗಾಗಿ ನಿಮ್ಮ ಮುಖಕ್ಕೆ ಹೊಂದುವ ಉಸಿರಾಟಕ್ಕೂ ಅನುಕೂಲವಾಗುವಂತಹ ಮಾಸ್ಕ್​ ಬಳಸಿ. ಕೆಲವು ದಿನಗಳ ಹಿಂದೆ ಕೊರೋನಾ ರೂಪಾಂತರಿ ಒಮಿಕ್ರಾನ್​ ವೈರಸ್​ಕೂಡ ವೇಗವಾಗಿ ಹರಡುತ್ತದೆ. ಹೀಗಾಗಿ ಆರೋಗ್ಯವನ್ನು ಕಾಪಡಿಕೊಳ್ಳುವುದು ಅಗತ್ಯವಾಗಿದೆ. ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್​ ಧರಿಸುವುದು ಕಡ್ಡಾಯವಾಗಬೇಕು. ಹಾಗಾದರೆ ಯಾವ ರೀತಿಯ ಮಾಸ್ಕ್​ಗಳು ಹೆಚ್ಚು ಸುರಕ್ಷಿತ ಎನ್ನುವ ಪ್ರಶ್ನೆ ಮೂಡುತ್ತದೆ.

ಈ ಕುರಿತು ಅಮೆರಿಕನ್​ ಜರ್ನಲ್​ ಆಫ್​ ಇನ್ಫೆಕ್ಷನ್​ ಕಂಟ್ರೋಲ್​ ಅಧ್ಯಯನ ನಡೆಸಿದ್ದು, ವರದಿಯನ್ನು ಪ್ರಕಟಿಸಿದೆ. ಅದರ ಪ್ರಕಾರ , ಕಿವಿಯ ಹಿಂದೆ ಕೊಂಚ ಬಿಗಿಯಾಗಿ ಸಿಲುಕಿಸುವ ಹಾಗೂ ಬಾಯಿ ಮತ್ತು ಮೂಗನ್ನು ಸಂಪೂರ್ಣವಾಗಿ ಮುಚ್ಚುವ ಮಾಸ್ಕ್​ಗಳು ಹೆಚ್ಚು ಸುರಕ್ಷಿತ ಎಂದು ಹೇಳಲಾಗಿದೆ. ಅದರ ಜತೆಗೆ ವೈದ್ಯಕೀಯ ಮಾಸ್ಕ್​ಗಳು ಅಥವಾ ಎನ್​95 ಮಾಸ್ಕ್​ಗಳು ಬಳಕೆಗೆ ಉತ್ತಮ ಎನ್ನಲಾಗಿದೆ. ಅದರಲ್ಲೂ ವೈದ್ಯರು ಬಳಸುವ ಡಬಲ್​ ಕವರ್​ ಮಾಸ್ಕ್​ಗಳು ಮೂರು ಪದರಗಳನ್ನು ಹೊಂದಿದ್ದು, ಮೂಗು ಮತ್ತು ಬಾಯಿಯನ್ನು ಸರಿಯಾದ ರೀತಿಯಲ್ಲಿ ಕವರ್​ ಮಾಡಿ ಹೆಚ್ಚಿನ ರಕ್ಷಣೆ ನೀಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆದರೆ ನೆನಪಿಡಿ ನೀವು ಧರಿಸುವ ಬಟ್ಟೆಯ ಮಾಸ್ಕ್​ಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ತೆಳ್ಳನೆಯ ಬಟ್ಟೆಯ ಮಾಸ್ಕ್​ಗಳು ನಿಮ್ಮ ಬಾಯಿ ಹಾಗೂ ಮೂಗಿನಿಂದ ಹೊರಬರುವ ಹನಿಗಳನ್ನು ತಡೆಯಲಾರದು. ಹೀಗಾಗಿ ಡಬಲ್​ ಕವರ್​ ಮಾಸ್ಕ್​ ಧರಿಸುವುದು ಅಥವಾ ವೈದ್ಯಕೀಯ ಮಾಸ್ಕ್ ಧರಿಸುವುದು ಉತ್ತಮ. ಅಲ್ಲದೆ ಯಾವುದೇ ಮಾಸ್ಕ್​ಅನ್ನು ಸರಿಯಾದ ಕ್ರಮದಲ್ಲಿ ಧರಿಸುವುದು ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಹಾಗೂ ಕೊರೋನಾ ಸಾಂಕ್ರಾಮಿಕ ರೋಗದ ಅಪಾಯದಿಂದ ದೂರವಿರಬಹುದು ಎನ್ನುತ್ತಾರೆ ಸಂಶೋಧಕರು.

ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!