Kannada News Lifestyle These secrets women don't reveal to their husbands about their sex life Kannada News
ಮಹಿಳೆಯರು ತನ್ನ ಗಂಡನಿಗೆ ಹೇಳದ ಲೈಂಗಿಕ ಜೀವನದ ರಹಸ್ಯಗಳಿವು
ಗಂಡ ಹೆಂಡತಿ ನಡುವೆ ಯಾವುದೇ ಮುಚ್ಚು ಮರೆ ಇರಬಾರದು. ಎಲ್ಲಾ ವಿಷಯಗಳನ್ನು ಮುಕ್ತವಾಗಿ ಮಾತನಾಡಿಕೊಳ್ಳಬೇಕು.ಆಗ ಸಂಬಂಧವು ಚೆನ್ನಾಗಿರುವುದು ಎಂದು ಹೇಳುವುದನ್ನು ಕೇಳಿದ್ದೇವೆ. ಅದರಲ್ಲಿಯು ಈ ಸೆಕ್ಸ್ ಲೈಫ್ ನ ವಿಚಾರಗಳನ್ನು ತನ್ನ ಪತಿಯ ಮುಂದೆ ಹೇಳಿಕೊಂಡರೆ ತಪ್ಪಾಗಿ ಭಾವಿಸಿಕೊಳ್ಳುತ್ತಾನೆಯೋ ಎನ್ನುವ ಭಯವಿರುತ್ತದೆ. ಹೀಗಾಗಿ ಲೈಂಗಿಕತೆಗೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಮಾತನಾಡುವುದೇ ಇಲ್ಲ. ಹಾಗಾದ್ರೆ ಈ ವಿಷಯಗಳೇನು ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಹೆಣ್ಣು ಸಂಸಾರವನ್ನು ನಿಭಾಯಿಸಿಕೊಂಡು ಹೋಗುವಲ್ಲಿ ಎಷ್ಟು ಪ್ರಾವೀಣ್ಯಳೋ ಅದೇ ರೀತಿ ರಹಸ್ಯಗಳನ್ನು ಅಷ್ಟೇ ಚೆನ್ನಾಗಿ ಬಚ್ಚಿಡುತ್ತಾಳೆ. ಜೀವಕ್ಕಿಂತ ಹೆಚ್ಚು ಎಂದು ಪ್ರೀತಿಸುವ ಪತಿಯ ಎಷ್ಟೇ ಪ್ರೀತಿ ಸಲುಗೆಯಿಂದ ಇದ್ದರೂ ಕೂಡ ಕೆಲವು ವಿಷಯಗಳಲ್ಲಿ ಆಕೆಯ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾಳೆ. ಕೆಲವೊಮ್ಮೆ ಈ ಬಗ್ಗೆ ಪತಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಲ್ಲದೇ, ಬಹುತೇಕ ಹೆಣ್ಣು ಮಕ್ಕಳು ಈ ಸೆಕ್ಸ್ ಲೈಫ್ ಬಗ್ಗೆ ಪತಿಯ ಮುಂದೆ ಬಾಯಿ ಬಿಡುವುದೇ ಇಲ್ಲ. ಈ ವಿಚಾರದಲ್ಲಿ ಕೆಲವು ಸೀಕ್ರೆಟನ್ನು ಇಟ್ಟುಕೊಳ್ಳುತ್ತಾಳಂತೆ.
ಮದುವೆಗೂ ಮೊದಲು ತನ್ನ ಪ್ರಿಯಕರನ ಜೊತೆಗೆ ದೈಹಿಕ ಸಂಪರ್ಕ ನಡೆಸಿದ್ದರೆ ಆ ಬಗ್ಗೆ ಅಪ್ಪಿ ತಪ್ಪಿಯೂ ಗಂಡನೊಂದಿಗೆ ಹೇಳಿಕೊಳ್ಳುವುದಿಲ್ಲ. ಪತಿಗೆ ಈ ವಿಷಯ ತಿಳಿದರೆ ನನ್ನನ್ನು ದೂರ ಮಾಡಿದರೆ ಎನ್ನುವ ಭಯವು ಆಕೆಯನ್ನು ಕಾಡುತ್ತಿರುತ್ತದೆ. ಈ ಗುಟ್ಟು ರಟ್ಟಾದರೆ ತಮ್ಮಿಬ್ಬರ ಸಂಬಂಧವು ಹಾಳಾಗಬಹುದು. ಅದಲ್ಲದೇ ಇದೇ ವಿಚಾರವು ಸಂಬಂಧದಲ್ಲಿ ಜಗಳಗಳನ್ನು ಉಂಟುಮಾಡಬಹುದು ಎನ್ನುವ ಕಾರಣಕ್ಕೆ ರಹಸ್ಯವನ್ನು ಕಾಪಾಡುತ್ತಾಳೆ.
ಪ್ರತಿ ಮಹಿಳೆಯೂ ಹಸ್ತಮೈಥುನದ ಬಗ್ಗೆ ತಮ್ಮ ಪತಿಗೆ ಹೇಳಲು ಹಿಂಜರಿಯುತ್ತಾಳೆ. ಮಹಿಳೆಯರು ಹಸ್ತಮೈಥುನ ಮಾಡುವುದನ್ನು ಸಮಾಜವು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಈ ವಿಷಯ ತಿಳಿದರೆ ಗಂಡನ ಪ್ರತಿಕ್ರಿಯೆ ಹೇಗಿರಬಹುದು ಎನ್ನುವ ಅಳುಕಿರುತ್ತದೆ. ಅದಲ್ಲದೇ, ಗಂಡ ಈ ವಿಚಾರವನ್ನು ಮಾತನಾಡಿದಾಗಲೂ ಮಾತನ್ನು ಬೇರೆಡೆಗೆ ತಿರುಗಿಸುವುದು ಇಲ್ಲವಾದರೆ ಇದನ್ನು ರಹಸ್ಯವಾಗಿಟ್ಟುಕೊಳ್ಳಲು ಬಯಸುತ್ತಾರೆ.
ಪತಿಯು ತನಗೆ ದೈಹಿಕವಾಗಿ ಸುಖ ನೀಡಿದ್ದಾನೆಯೇ ಎನ್ನುವ ಬಗ್ಗೆ ಬಾಯಿಬಿಟ್ಟು ಹೇಳುವುದಿಲ್ಲ. ಕೆಲವೊಮ್ಮೆ ಪುರುಷರು ದೈಹಿಕ ಕ್ರಿಯೆಯಲ್ಲಿ ತೊಡಗಿಕೊಂಡ ವೇಳೆಯಲ್ಲಿ ಅಕಾಲಿಕ ಸ್ಖಲನ ಅಥವಾ ನಿಮಿರುವಿಕೆಯಂತಹ ಸಮಸ್ಯೆಯನ್ನ ಎದುರಿಸಬಹುದು. ಈ ಬಗ್ಗೆ ಪತ್ನಿಗೆ ಅರಿವಿಗೆ ಬಂದರೂ ಸುಮ್ಮನಿರುತ್ತಾಳೆ. ತನಗೆ ದೈಹಿಕವಾದ ಸುಖ ಸಿಕ್ಕಿಲ್ಲ ಎಂದು ಹೇಳಿಕೊಂಡರೆ ಪತಿಯು ಅದರ ಬಗ್ಗೆಯೇ ಯೋಚಿಸಿ ಕೊರಗುತ್ತಾರೆ ಎಂದು ಅಲೋಚಿಸುತ್ತಾಳೆ. ಹೀಗಾಗಿ ಇಂತಹ ಸಮಸ್ಯೆಗಳು ಆಗದಂತೆ ತಡೆಯಲು ಈ ಬಗ್ಗೆ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ.
ಸೆಕ್ಸ್ ಲೈಫ್ ನಲ್ಲಿ ತಮಗಿರುವ ಆಸೆಗಳ ಬಗ್ಗೆ ಬಾಯಿಬಿಟ್ಟು ಪತಿಯ ಮುಂದೆ ಹೇಳಿಕೊಳ್ಳುವುದಿಲ್ಲ. ಹೆಣ್ಣು ತಮ್ಮ ಲೈಂಗಿಕ ಆಸೆಗಳನ್ನು ಮತ್ತು ಲೈಂಗಿಕ ಡ್ರೈವ್ ಅನ್ನು ರಹಸ್ಯವಾಗಿಟ್ಟುಕೊಳ್ಳುತ್ತಾಳೆ. ಹಾಸಿಗೆಯಲ್ಲಿ ತನ್ನ ಪತಿಯು ತನ್ನ ಜೊತೆಗೆ ಹೇಗೆ ಇರಬೇಕೆಂದು ನೇರವಾಗಿ ಹೇಳಿದರೆ ಅಂತಹ ಮಹಿಳೆಯರನ್ನು ಸಮಾಜವು ಕೆಟ್ಟದಾಗಿ ತಿಳಿದುಕೊಂಡು ಬಿಡುತ್ತದೆ ಎನ್ನುವುದಿರುತ್ತದೆ. ಹೀಗಾಗಿ ಲೈಂಗಿಕ ಜೀವನದ ಈ ವಿಷಯಗಳನ್ನು ತನ್ನ ಸಂಗಾತಿಯ ಜೊತೆಗೆ ಹಂಚಿಕೊಳ್ಳುವುದೇ ಇಲ್ಲ.