ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಸೇವಿಸಿ ಈ ಪಾನೀಯ
ಚಳಿಗಾಲದಲ್ಲಿ ವಾತಾವರಣವು ತುಂಬಾನೇ ತಂಪಾಗಿರುತ್ತದೆ. ಇಂತಹ ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಶೀತ, ನೆಗಡಿ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ಈ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡುವ ಮೂಲಕ ದೇಹವನ್ನು ಬೆಚ್ಚಗಿರಿಸುವ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಚಳಿಗಾಲದ (winter) ಶೀತ ವಾತಾವರಣದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ಶೀತ ಹವಾಮಾನವು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಶೀತ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಕೆಲವೊಂದು ಪಾನೀಯಗಳನ್ನು ಸೇವನೆ ಮಾಡುವ ಮೂಲಕ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದರ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಆ ಪಾನೀಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಸಹಕಾರಿ ಈ ಪಾನೀಯಗಳು:
ಶುಂಠಿ ಮತ್ತು ಅರಿಶಿನ ಚಹಾ: ಶುಂಠಿ ಮತ್ತು ಅರಿಶಿನವು ದೇಹವನ್ನು ಒಳಗಿನಿಂದ ಬೆಚ್ಚಗಾಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಶೀತ ಮತ್ತು ಕೆಮ್ಮನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗಾಗಿ ಈ ಚಳಿಗಾಲದಲ್ಲಿ ಈ ಚಹಾ ಸೇವಿಸಿ.
ಅರಿಶಿನ ಹಾಲು: ಅರಶಿನ ಹಾಲು ದೇಹವನ್ನು ಬೆಚ್ಚಗಿಡುವುದಲ್ಲದೆ, ಕೆಮ್ಮು ಮತ್ತು ನೆಗಡಿಯಂತಹ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ ಮತ್ತು ಶೀತದಿಂದ ಉಂಟಾಗುವ ಎದೆ ನೋವನ್ನು ಸಹ ನಿವಾರಿಸುತ್ತದೆ.
ಜೀರಿಗೆ ನೀರು: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಜೀರಿಗೆ ನೀರನ್ನು ಸೇವಿಸಬಹುದು. ಜೀರಿಗೆ ನೀರನ್ನು ತಯಾರಿಸಲು, ಒಂದು ಟೀಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ನೀರನ್ನು ಕುದಿಸಿ ಕುಡಿಯಿರಿ.
ಇದನ್ನೂ ಓದಿ: ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಕಾರಿ ಈ ಎರಡು ಯೋಗಾಸನ
ಬೆಲ್ಲ ಮತ್ತು ಜೀರಿಗೆ ನೀರು: ಚಳಿಗಾಲದಲ್ಲಿ ನಿಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡಲು, ದೇಹದ ಶಕ್ತಿಯನ್ನು ಕಾಪಾಡಲು ನೀವು ಬೆಲ್ಲ ಮತ್ತು ಜೀರಿಗೆ ನೀರನ್ನು ಕುಡಿಯಬಹುದು. ಅಲ್ಲದೆ ಬೆಲ್ಲ ಮತ್ತು ಜೀರಿಗೆ ನೀರು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ತೂಕ ಇಳಿಕೆಗೂ ಸಹಕಾರಿ.
ಕಡಲೆಕಾಯಿ ಸೂಪ್: ಈ ಸೂಪ್ ಪ್ರೋಟೀನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಚೈತನ್ಯದಿಂದ ಇರಿಸಲು ಸಹಾಯ ಮಾಡುತ್ತದೆ. ಇದು ಮೂಳೆಗಳು ಮತ್ತು ಸ್ನಾಯುಗಳಿಗೂ ಪ್ರಯೋಜನಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




