ಮಹಿಳೆಯರೇ ನೀವು ಧರಿಸುವ ಬ್ರಾಗಳು ಹೀಗಿದ್ದರೆ, ಹಿಂದೆ ಮುಂದೆ ಯೋಚಿಸದೇ ಬದಲಾಯಿಸಿ ಬಿಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 07, 2024 | 9:57 AM

ಮಹಿಳೆಯರು ಹೊರಗಿನ ಉಡುಪುಗಳಿಗೆ ಮಹತ್ವ ಕೊಟ್ಟಷ್ಟು ಒಳ ಉಡುಪಿನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸ್ತನಗಳನ್ನು ಮುಚ್ಚಿಡಲು ವಿನ್ಯಾಸಗೊಳಿಸಲಾದ ಒಳ ಉಡುಪು ಈ ಬ್ರಾಗಳ ಆಯ್ಕೆ ಮಾಡುವಾಗ ಹಾಗೂ ಅದನ್ನು ಧರಿಸುವ ಬಗ್ಗೆ ಗಮನ ಕೊಡುವುದು ಮುಖ್ಯ. ಅದರೊಂದಿಗೆ ನೀವೇನಾದರೂ ಹಳೆಯದಾದ ಬ್ರಾಗಳನ್ನು ಧರಿಸುತ್ತಿದ್ದು, ಅದರಲ್ಲಿ ಈ ರೀತಿಯ ಚಿಹ್ನೆಗಳಿದ್ದಲ್ಲಿ ಇಂದೇ ಅದನ್ನು ಬದಲಾಯಿಸಿಕೊಳ್ಳಿ.

ಮಹಿಳೆಯರೇ ನೀವು ಧರಿಸುವ ಬ್ರಾಗಳು ಹೀಗಿದ್ದರೆ, ಹಿಂದೆ ಮುಂದೆ ಯೋಚಿಸದೇ ಬದಲಾಯಿಸಿ ಬಿಡಿ
ಸಾಂದರ್ಭಿಕ ಚಿತ್ರ
Follow us on

ಮಹಿಳೆಯರಿಗಾಗಿ ವಿವಿಧ ವಿನ್ಯಾಸದ ಹಾಗೂ ಬಣ್ಣದ ಬ್ರಾಗಳು ಇದೀಗ ಮಾರುಕಟ್ಟೆಯಲ್ಲಿದೆ. ಸಾಮಾನ್ಯವಾಗಿ ಮಹಿಳೆಯರು ಅವರ ಉಡುಗೆಗೆ ತಕ್ಕಂತಹ ಬ್ರಾಗಳನ್ನು ಖರೀದಿ ಮಾಡುತ್ತಾರೆ. ಆದರೆ ಕೆಲವರು ವಿಭಿನ್ನ ವಿನ್ಯಾಸದ ಬ್ರಾಗಳ ಅಂದ ಚಂದಕ್ಕೆ ಮಾರುಹೋಗಿ ಅದನ್ನು ಕೊಳ್ಳುತ್ತಾರೆ. ಖರೀದಿಯ ವೇಳೆ ನಿಮ್ಮ ಸ್ತನದ ಗಾತ್ರಕ್ಕೆ ಈ ಬ್ರಾ ಸೂಕ್ತವಾಗಿದೆಯೇ ಎಂದು ತಿಳಿದುಕೊಳ್ಳುವುದು ಮುಖ್ಯ. ಅದಲ್ಲದೇ, ಹಳೆದಾದ ಬ್ರಾಗಳನ್ನು ಸಾಧ್ಯವಾದಷ್ಟು ಬದಲಾಯಿಸುತ್ತ ಇರಿ. ಕೆಲವೊಮ್ಮೆ ಗುಣಮಟ್ಟದ ಬ್ರಾಗಳು ಹೆಚ್ಚು ಕಾಲ ಬಾಳಿಕೆ ಬರಬಹುದು. ಆದರೆ ಅವುಗಳನ್ನು ಎಷ್ಟು ಬಾರಿ ಧರಿಸುತ್ತೀರಿ ಎನ್ನುವುದು ಕೂಡ ಮುಖ್ಯವಾಗುತ್ತದೆ. ಆದರೆ ಈ ಒಳ ಉಡುಪಿನಲ್ಲಿ ಈ ರೀತಿಯಾಗಿದ್ದರೆ ತಕ್ಷಣವೇ ಬದಲಾಯಿಸಿ

* ಭುಜದಿಂದ ಜಾರುವ ಬ್ರಾ ಸ್ಟ್ರಾಪ್‌ : ಸಾಮಾನ್ಯವಾಗಿ ಬ್ರಾ ಹಳೆದಾದಷ್ಟು ಬ್ರಾ ಸ್ಟ್ರಾಪ್‌ಗಳು ನಿಮ್ಮ ಭುಜದಿಂದ ಜಾರಿಬೀಳುತ್ತದೆ. ಈ ರೀತಿಯಾಗಿದ್ದರೆ ಇದು ಆರಾಮದಾಯಕವೆನಿಸುವುದಿಲ್ಲ. ಈ ವೇಳೆ ಹೊಸ ಒಳ ಉಡುಪಿನ ಖರೀದಿಗೆ ಆದ್ಯತೆ ನೀಡಿ.

* ಬ್ರಾ ಕಪ್‌ ಆಕಾರದಲ್ಲಿನ ಬದಲಾವಣೆ : ಬ್ರಾದಲ್ಲಿನ ಕಪ್‌ಗಳು ಸ್ತನಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತಿರಬೇಕು. ಒಂದು ವೇಳೆ ಹಳೆದಾಗಿದ್ದರೆ ಬ್ರಾ ಕಪ್ ಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು. ಅದಲ್ಲದೇ ಈ ಕಪ್ ಸರಿದಾಡುತ್ತದೆ ಕೂಡ ಹೀಗಾದಾಗ ಇದು ನಿಮಗೆ ಆರಾಮದಾಯಕ ಅನುಭವವನ್ನು ನೀಡುವುದಿಲ್ಲ.

* ಬಿಗಿಯಾದ ಅಂಡರ್ಬಸ್ಟ್ – ಬ್ರಾದಲ್ಲಿನ ಕೆಳಗಿರುವ ಬ್ಯಾಂಡ್ ತುಂಬಾ ಬಿಗಿಯಾಗಿದ್ದು, ಇದನ್ನು ಧರಿಸದೆ ಇರುವುದೇ ಉತ್ತಮ. ಬಿಗಿ ಯಾಗಿರುವುದರಿಂದ ಬೆನ್ನು ನೋವು, ಭುಜದ ನೋವಿಗೂ ಮತ್ತು ಆ ಭಾಗದ ನೋವಿಗೂ ಕಾರಣವಾಗುತ್ತದೆ. ಹೀಗಾದಾಗ ಹಳೆಯ ಬ್ರಾ ಬದಲಾಯಿಸಿ ಸಡಿಲವಾಗಿರುವ ಬ್ರಾಗಳನ್ನು ಧರಿಸಿ.

* ಬ್ರಾದಲ್ಲಿನ ಎಲಾಸ್ಟಿಕ್‌ ಬ್ಯಾಂಡ್‌ಗಳನ್ನು ಪರಿಶೀಲಿಸಿ : ಕೆಲವರು ಬ್ರಾದಲ್ಲಿನ ಬ್ಯಾಂಡ್‌ಗಳು ಎಲಾಸ್ಟಿಕ್‌ಗಳನ್ನು ಕಳೆದುಕೊಂಡಿದ್ದರೂ ಅದನ್ನೇ ಧರಿಸುತ್ತಿರುತ್ತಾರೆ. ಇದು ಸ್ತನಕ್ಕೆ ಹೊಂದಿಕೆಯಾಗದೇ ಸಡಿಲವಾಗಿರುವಂತೆ ಕಂಡರೆ ಅದನ್ನು ಬದಲಾಯಿಸುವುದು ಮುಖ್ಯ.

* ಹುಕ್‌ಗಳ ಕಿತ್ತುಹೋಗಿದ್ದಲ್ಲಿ ಬದಲಾಯಿಸಿ : ಬ್ಯಾಂಡ್ ಗಾತ್ರವನ್ನು ಸರಿಹೊಂದಿಸುವಲ್ಲಿ ಬ್ರಾಗಳಲ್ಲಿ ಹುಕ್ ಗಳನ್ನು ಇರುತ್ತವೆ. ಕೆಲವೊಮ್ಮೆ ಬಿಗಿಯಾದ ಹುಕ್ ಅನ್ನು ಬಳಸುತ್ತಿದ್ದರೂ ಆರಾಮದಾಯಕವೆನಿಸುವುದಿಲ್ಲ. ಸ್ತನಬಂಧವು ಸಡಿಲಗೊಂಡಂತಹ ಅನುಭವವಾದರೆ ತಕ್ಷಣವೇ ಬೇರೆ ಖರೀದಿಸಿ.

ಇದನ್ನೂ ಓದಿ: ಹುಡುಗಿಯೂ ನಿಮ್ಮ ಜೊತೆಗೆ ಹೀಗೆಲ್ಲಾ ನಡೆದುಕೊಂಡ್ರೆ ನಿಮ್ಮ ಮೇಲೆ ಲವ್ ಆಗಿರುವುದು ಪಕ್ಕಾ

* ನಿಮ್ಮ ಕಂಫರ್ಟ್ ಅನ್ನು ಪರಿಗಣಿಸಿ : ನಿಮ್ಮ ಸ್ತನಬಂಧವು ಆರಾಮದಾಯಕವಾಗಿರಬೇಕು, ನಿಮಗೆ ಸುರಕ್ಷಿತ ಭಾವನೆಯನ್ನು ಉಂಟು ಮಾಡುವಂತಿರಬೇಕು. ಅಹಿತಕರವೆನಿಸಿದರೆ ಆ ಬ್ರಾಗಳನ್ನು ಬದಲಾಯಿಸುವುದು ಉತ್ತಮ.

* 6 ತಿಂಗಳಿನಿಂದ 1 ವರ್ಷದ ನಿಯಮ ಪಾಲಿಸಿ : ಪ್ರತಿ ಆರು ತಿಂಗಳಿಂದ ಒಂದು ವರ್ಷಕ್ಕೆ ನಿಮ್ಮ ಬ್ರಾಗಳನ್ನು ಪರಿಶೀಲಿಸಿ ಅವುಗಳನ್ನು ಬದಲಾಯಿಸುವುದು ಒಳ್ಳೆಯದು.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 9:55 am, Wed, 7 August 24