Relationship Tips : ಹುಡುಗಿಯೂ ನಿಮ್ಮ ಜೊತೆಗೆ ಹೀಗೆಲ್ಲಾ ನಡೆದುಕೊಂಡ್ರೆ ನಿಮ್ಮ ಮೇಲೆ ಲವ್ ಆಗಿರುವುದು ಪಕ್ಕಾ
ಪ್ರೀತಿ ಹೇಗೆ ಯಾವಾಗ, ಯಾರ ಮೇಲೆ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಹುಡುಗರು ತಮ್ಮ ಪ್ರೀತಿಯನ್ನು ನೇರವಾಗಿ ಹೇಳಿ ಬಿಡುತ್ತಾರೆ. ಅದೇ ಹುಡುಗಿಯರು ಅಷ್ಟು ಸುಲಭವಾಗಿ ತಮ್ಮ ಮನಸ್ಸಿನ ಭಾವನೆಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದರೆ ಆಕೆಯ ಈ ನಡವಳಿಕೆಯನ್ನು ಸ್ಪಷ್ಟವಾಗಿ ಗಮನಿಸಿದರೆ ಈ ಬಗ್ಗೆ ನಿಮಗೆ ಸ್ಪಷ್ಟವಾದ ಚಿತ್ರಣವು ಸಿಗುತ್ತದೆ.
ಈ ಜಗತ್ತಿನಲ್ಲಿ ಅತ್ಯಂತ ಕಷ್ಟಕರವಾದ ಕೆಲಸವೆಂದರೆ ಹೆಣ್ಣಿನ ಮನಸ್ಸಿನಲ್ಲೋ ಏನಿದೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ ನಮ್ಮ ಹಿರಿಯರು ಮೀನಿನ ಹೆಜ್ಜೆಯನ್ನಾದರೂ ಕಂಡುಹಿಡಿಯಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿರುವುದು. ಒಂದು ವೇಳೆ ನಿಮ್ಮ ಮೇಲೆ ಹುಡುಗಿಗೆ ಇಷ್ಟವಿದ್ದರೆ ಅದನ್ನು ಅರಿತು ಕೊಳ್ಳುವುದು ಕಷ್ಟವೇನಲ್ಲ. ಆಕೆಯ ಸದಾ ಕಳುಹಿಸುವ ಸಂದೇಶಗಳು ಹಾಗೂ ಆಕೆಯ ನಡವಳಿಕೆಯೂ ಎಲ್ಲವನ್ನು ತಿಳಿಸುತ್ತದೆ. ಹೀಗಾಗಿ ಈ ಬಗ್ಗೆ ಗಮನಿಸಿ ನಿಮಗೂ ಆಕೆಯ ಮೇಲೆ ಇಷ್ಟವಿದ್ದರೆ ಪ್ರೀತಿಯನ್ನು ವ್ಯಕ್ತಪಡಿಸಬಹುದು.
* ಪದೇ ಪದೇ ಮೆಸೇಜ್ ಮಾಡುವುದು : ಹೆಣ್ಣು ನೇರವಾಗಿ ತಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ. ಹೀಗಾಗಿ ಆಕೆಯ ನಡೆ ನುಡಿಯಲ್ಲಿಯೇ ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಮೇಲೆ ಪ್ರೀತಿಯಾಗಿದೆ ಎಂದಾದರೆ ಕಾರಣವಿಲ್ಲದೇ ನಿಮ್ಮ ಜೊತೆಗೆ ಮೆಸೇಜ್ ಮಾಡಿ ಮಾತನಾಡುತ್ತಾಳೆ. ಪ್ರತಿ ಸಂದೇಶಕ್ಕೂ ಪ್ರತಿಕ್ರಿಯೆಯನ್ನು ಬೇಗನೇ ನೀಡುತ್ತಾಳೆ. ನಿಮ್ಮ ಇಷ್ಟ ಕಷ್ಟಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ. ಈ ನಡವಳಿಕೆಯು ಆಕೆಯೂ ನಿಮ್ಮ ಮೇಲೆ ಆಸಕ್ತಿ ತೋರುತ್ತಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಬಹುದು.
* ಪೊಸೆಸಿವ್ ಗುಣ : ಬೇರೆ ಹುಡುಗಿಯ ಜೊತೆಗೆ ನೀವೇನಾದರೂ ಮಾತನಾಡಿದರೆ ಅದನ್ನು ಆ ಹುಡುಗಿಗೆ ಸಹಿಸಿಕೊಳ್ಳಲು ಆಗುವುದಿಲ್ಲ. ಇದನ್ನು ನೇರವಾಗಿ ಹೇಳದೇ ಇದ್ದರೂನಿಮ್ಮ ಮೇಲೆ ಸಿಡುಕುವುದು, ಕೋಪಮಾಡಿಕೊಳ್ಳುವ ಮೂಲಕ ತೋರಿಸುತ್ತಾರೆ. ಅವರ ಈ ಕೋಪದ ಹಿಂದಿರುವ ಪೊಸೆಸಿವ್ ಗುಣವನ್ನು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಈ ನಡವಳಿಕೆಯೂ ನಿಮ್ಮ ಮೇಲೆ ಪ್ರೀತಿಯಿದೆ ಎಂದು ಸಾರಿ ಸಾರಿ ಹೇಳುತ್ತದೆ.
* ಸಣ್ಣ ವಿಷಯಗಳನ್ನು ಹಂಚಿಕೊಳ್ಳುವುದು : ಯಾವುದೇ ಹುಡುಗಿಯೂ ಅಷ್ಟು ಸುಲಭವಾಗಿ ತನ್ನ ಭಾವನೆಗಳನ್ನು ಹುಡುಗನೊಂದಿಗೆ ಹಂಚಿಕೊಳ್ಳುವುದಿಲ್ಲ. ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನು ಹುಡುಗಿಯೂ ಹುಡುಗನೊಂದಿಗೆ ಹೇಳಿಕೊಳ್ಳುತ್ತಿದ್ದಾಳೆಂದರೆ ಆಕೆಗೆ ನಿಮ್ಮ ಮೇಲೆ ಪ್ರೀತಿಯಾಗಿದೆ ಹಾಗೂ ನಿಮ್ಮನ್ನು ಆಕೆಯು ಆತ್ಮೀಯರಲ್ಲಿ ಒಬ್ಬರು ಎಂದು ಭಾವಿಸಿದ್ದಾಳೆ ಎನ್ನುವುದನ್ನು ಸೂಚಿಸುತ್ತದೆ.
ಇದನ್ನೂ ಓದಿ: ಅಣ್ಣ ತಂಗಿಯರ ಬಾಂಧವ್ಯದ ಹಬ್ಬದಂದು ಈ ರೀತಿ ಸರ್ಪ್ರೈಸ್ ನೀಡಿ, ಇಲ್ಲಿದೆ ಸಿಂಪಲ್ ಟಿಪ್ಸ್
* ಅತಿಯಾದ ಕಾಳಜಿ ತೋರಿಸುವುದು : ನಿಮ್ಮ ಮೇಲೆ ಅತಿಯಾದ ಕಾಳಜಿ ತೋರುವ ಮೆಸೇಜ್ ಗಳು ಹಾಗೂ ಅಂತಹ ಭಾವನೆಯನ್ನು ತೋರ್ಪಡಿಸಿದರೆ ಆ ಹುಡುಗಿಗೆ ನಿಮ್ಮ ಮೇಲೆ ಪ್ರೀತಿಯಾಗಿರುವುದು ಖಚಿತ. ಅದಲ್ಲದೇ ನಿಮ್ಮ ಬಗೆಗಿನ ಪ್ರೀತಿಯನ್ನು ಭಾವನೆಯನ್ನು ನಿಮ್ಮ ಮುಂದೆ ಹೇಳಿಕೊಳ್ಳದೇ ಆಪ್ತರೊಂದಿಗೆ ಸದಾ ನಿಮ್ಮನ್ನು ಹೊಗಳುತ್ತಿದ್ದರೆ ಆ ಹುಡುಗಿಗೆ ನಿಮ್ಮ ಮೇಲೆ ಆಸಕ್ತಿಯಿದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Tue, 6 August 24