Kannada News Lifestyle These things you should never put in a Mixer Grinder Lifestyle News in Kannada
Cooking Tips : ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಬೇಡಿ, ಯಾಕೆ ಗೊತ್ತಾ?
ಈಗಿನ ದಿನಗಳಲ್ಲಿ ಅಡುಗೆ ಮಾಡಲು ಯಾರಿಗೆ ಸಮಯವಿದೆ ಹೇಳಿ? ಕೆಲಸಕ್ಕೆ ಹೋಗುವ ಮಹಿಳೆಯರಿಗಂತೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ ಅಡುಗೆ ಮನೆಯಲ್ಲಿರುವ ಕೆಲ ಸಾಧನವು ಉದ್ಯೋಗಕ್ಕೆ ಹೋಗುವ ಮಹಿಳೆಯರ ಕೆಲಸವನ್ನು ಸುಲಭವಾಗುವಂತೆ ಮಾಡಿದೆ. ಆದರೆ ಅಡುಗೆ ಮಾಡುವ ಗಡಿ ಬಿಡಿಯಲ್ಲಿ ಈ ವಸ್ತುಗಳನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬುತ್ತಾರೆ. ಇದರಿಂದ ಬೇಗನೇ ಮಿಕ್ಸಿ ಜಾರು ಕೆಟ್ಟು ಹೋಗುವ ಸಾಧ್ಯತೆಯೇ ಅಧಿಕವಾಗಿದೆ. ಹೀಗಾಗಿ ಈ ತಪ್ಪುಗಳನ್ನು ನೀವಂತೂ ಮಾಡಲೇಬೇಡಿ.
ಸಾಂದರ್ಭಿಕ ಚಿತ್ರ
Follow us on
ಇತ್ತೀಚೆಗಿನ ದಿನಗಳಲ್ಲಿ ಗೃಹಿಣಿಯರಕೆಲಸವನ್ನು ಸುಲಭ ಮಾಡಲು ಮಾಡಲು ನಾನಾ ರೀತಿಯ ಸಾಧನಗಳು ಅಡುಗೆ ಮನೆಗೆ ಸೇರಿಕೊಂಡಿವೆ. ಅಂತಹ ಸಾಧನಗಳಲ್ಲಿ ಮಿಕ್ಸಿ ಕೂಡ ಒಂದಾಗಿದ್ದು, ಮಸಾಲೆಯನ್ನು ರುಬ್ಬಲು ಒಳಕಲ್ಲಿನ ಬದಲಿಗೆ ಮಿಕ್ಸಿ ಬಳಸುವವರೇ ಹೆಚ್ಚು. ಕೆಲವೇ ಕೆಲವು ನಿಮಿಷಗಳಲ್ಲಿ ಮಸಾಲ ಪದಾರ್ಥಗಳ ಪೇಸ್ಟ್ ಸಿದ್ಧವಾಗುತ್ತದೆಯಾದರೂ, ಈ ಮಿಕ್ಸರ್ ಅನ್ನು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಹೆಚ್ಚಿನ ಬೆಲೆಗೆ ಖರೀದಿಸಿದ ಈ ಮಿಕ್ಸರ್ ಕೆಟ್ಟು ಹೋದರೆ ರಿಪೇರಿಗೆ ಹಣವನ್ನು ಸುಮ್ಮನೆ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಮಿಕ್ಸಿ ಜಾರಿಗೆ ಮಸಾಲ ಪದಾರ್ಥಗಳನ್ನು ಹಾಕಿ ರುಬ್ಬುವ ಮುನ್ನ ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಫಿಡ್ಜ್ ನಿಂದ ಹೊರತೆಗೆದ ಐಸ್‌ಕ್ಯೂಬ್‌ಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಲು ಹೋಗಬೇಡಿ. ಈ ಐಸ್ ಕ್ಯೂಬ್ ಗಳಿಂದ ಮಿಕ್ಸಿ ಜಾರಿಗೆ ಒತ್ತಡ ಬೀಳಬಹುದು. ಇದರಿಂದಾಗಿ ಜಾರ್‌ಗಳ ಬ್ಲೇಡ್‌ಗಳ ಮುರಿದು ಹೋಗುವ ಸಾಧ್ಯತೆ ಹೆಚ್ಚಾಗಿದೆ.
ನಾರಿನಂಶ ಅಧಿಕವಾಗಿರುವ ತರಕಾರಿಗಳನ್ನು ಮಿಕ್ಸಿಯಲ್ಲಿ ಹಾಕಿದರೆ ಜಾರಿನಲ್ಲಿ ಸಿಕ್ಕಿಹಾಕಿಕೊಂಡು ತೆಗೆಯಲು ಕಷ್ಟವಾಗಬಹುದು.
ಬಿಸಿ ಬಿಸಿಯಾದ ದ್ರವಾಹಾರವನ್ನು ಮಿಕ್ಸಿಯಲ್ಲಿ ಹಾಕುವುದನ್ನು ಆದಷ್ಟು ತಪ್ಪಿಸಿ. ಬಿಸಿ ದ್ರವದಲ್ಲಿರುವ ಹಬೆ ಮಿಕ್ಸಿ ಜಾರಿನೊಳಗೆ ಒತ್ತಡವನ್ನು ಹೆಚ್ಚಿಸಿ, ಸ್ಫೋಟಗೊಳ್ಳುವ ಸಾಧ್ಯತೆಯೇ ಹೆಚ್ಚು. ಅದಲ್ಲದೇ ಮಿಕ್ಸಿ ಜಾರು ಬಿಸಿ ದ್ರವದಿಂದ ಮತ್ತಷ್ಟು ಬಿಸಿಯಾಗಿ ಮುಚ್ಚಳ ತೆಗೆಯಲು ಕಷ್ಟವಾಗಬಹುದು.
ಚೆಕ್ಕೆ, ಜಾಯಿಕಾಯಿಯಂತಹ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಲು ಪ್ರಯತ್ನಿಸಬೇಡಿ. ಈ ಮಸಾಲೆ ಪದಾರ್ಥಗಳು ಗಟ್ಟಿಯಾಗಿರುವ ಕಾರಣ, ಮಿಕ್ಸಿಯ ಬ್ಲೇಡ್ ಮುರಿದು ಹೋಗಬಹುದು.
ನೆನೆಸದೆ ಇರುವ ಧಾನ್ಯಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡುವುದು ಮಿಕ್ಸಿ ಜಾರು ಹಾಳಾಗಲು ಕಾರಣವಾಗುತ್ತದೆ. ಧಾನ್ಯಗಳು ನೋಡಲು ಚಿಕ್ಕದಾಗಿ ಕಂಡರೂ ಗಟ್ಟಿಯಾಗಿರುವ ಕಾರಣ ರುಬ್ಬುವಾಗ, ಜಾರಿನ ಬ್ಲೇಡ್ ಮುರಿದು ಹೋಗುತ್ತದೆ.