ನೀವು ಆರೋಗ್ಯವಾಗಿರಲು ಒಳ್ಳೆಯ ಆಹಾರ ಪದ್ಧತಿಯ ಜತೆಗೆ ಪ್ರತಿನಿತ್ಯ ವ್ಯಾಯಾಮ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ಉತ್ತಮ. ನಿಮ್ಮ ಶ್ವಾಸಕೋಶದ ಆರೋಗ್ಯ ಕಾಪಾಡಲು ಮುಖ್ಯವಾಗಿ ಈ ಕೆಳಗಿನ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ. ಇವು ನಿಮ್ಮ ದೇಹವನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತವೆ. ಜತೆಗೆ ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತವೆ.
ಧನುರಾಸನ
ಈ ಯೋಗ ಭಂಗಿಯಲ್ಲಿ ನೀವು ಹೊಟ್ಟೆಯ ಮೇಲೆ ಮಗಲಬೇಕು. ನಿಮ್ಮ ಮೊಣಕಾಲುಗಳನ್ನು ನಿಮ್ಮ ಸೊಂಟದ ಕಡೆಗೆ ಬಾಗಿಸಿ ಮತ್ತು ನಿಮ್ಮ ಕಾಲುಗಳನ್ನು ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ. ಬಳಿಕ ನಿಮ್ಮ ಮುಖವನ್ನು ಮೇಲಕ್ಕೆತ್ತಿ. ಈ ಭಂಗಿಯಲ್ಲಿಯೇ ಸ್ವಲ್ಪ ಸಮಯ ಹಾಗೆಯೇ ಇರಿ.
ಹಸ್ತ ಉತ್ತಾನಾಸನ
ನೇರವಾಗಿ ನಿಂತು ನಿಮ್ಮ ಕೈಗಳನ್ನು ತಲೆಯ ಮೇಲಕ್ಕೆತ್ತಿ. ಮೇಲಕ್ಕೆತ್ತಿದ ಕೈಗಳಿಂದ ನಮಸ್ಕರಿಸಿ. ಬಳಿಕ ನಿಧಾನವಾಗಿ ಹಿಂದಕ್ಕೆ ಬಾಗಿ. ನಿಮ್ಮ ಮೊಣಕಾಲುಗಳು ನೇರವಾಗಿರಲಿ. ಸ್ವಲ್ಪ ಸಮಯ ಈ ಭಂಗಿಯಲ್ಲಿಯೇ ಇರಿ. ನಂತರ ಮೂಲ ಸ್ಥಾನಕ್ಕೆ ಹಿಂತಿರುಗಿ. ಈ ರೀತಿ ಮಾಡುವುದರಿಂದ ನಿಮ್ಮ ಬೆನ್ನು, ಸೊಂಟ ಹಾಗೂ ಶ್ವಾಸಕೋಶ ಆರೋಗ್ಯವಾಗಿರುತ್ತದೆ.
ಉಷ್ಟ್ರಾಸನ
ಮೊದಲಿಗೆ ಚಾಪೆಯ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಕೈಗಳನ್ನು ಸೊಂಟದ ಮೇಲೆ ಇರಿಸಿ. ನಂತರ ನಿಮ್ಮ ಬೆನ್ನನ್ನು ಬಗ್ಗಿಸಿ. ತೋಳುಗಳನ್ನು ನೇರವಾಗಿ ಇಟ್ಟುಕೊಳ್ಳಿ. ನಿಮ್ಮ ಅಂಗೈಗಳನ್ನು ಪಾದಗಳ ಮೇಲೆ ಇಟ್ಟುಕೊಳ್ಳಿ. ನಿಮ್ಮ ಕುತ್ತಿಗೆ ಭಾಗವನ್ನು ತಟಸ್ಥ ಸ್ಥಿತಿಯಲ್ಲಿ ಇರಿಸಿ. ಸ್ವಲ್ಪ ಸಮಯ ಈ ಸ್ಥಿತಿಯಲ್ಲಿಯೇ ಇರಿ. ನಂತರ ಉಸಿರು ಬಿಡುತ್ತಾ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ.
ಚಕ್ರಾಸನ
ನಿಮ್ಮ ಬೆನ್ನಿನ ಮೇಲೆ ಮಲಗಿ ಮತ್ತು ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ. ನಿಮ್ಮ ಕಾಲುಗಳು ನೆಲದ ಮೇಲೆ ಊರಿರಲಿ. ನಿಮ್ಮ ಅಂಗೈಗಳನ್ನು ಆಕಾಶಕ್ಕೆ ಮುಖಮಾಡಿ ಮೊಣಕೈಯಲ್ಲಿ ಬಾಗಿ. ದೇಹವನ್ನು ಕಮಾನು ಮಾಡಲು ಪ್ರಯತ್ನಿಸಿ. ನಿಮ್ಮ ಕುತ್ತಿಗೆಯನ್ನು ಸಡಿಲಗೊಳಿಸಿ ಮತ್ತು ನಿಮ್ಮ ತಲೆಯು ನಿಧಾನವಾಗಿ ಹಿಂದಕ್ಕೆ ಬಾಗಿರಲಿ .
ಇದನ್ನೂ ಓದಿ:
Mental Health: ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಸಮಸ್ಯೆಗೆ ಪರಿಹಾರಗಳು ಇಲ್ಲಿವೆ
Health Tips: ನಿಮ್ಮ ಈ ಕೆಲವು ಅಭ್ಯಾಸಗಳು ಮೂತ್ರಪಿಂಡಕ್ಕೆ ಹಾನಿಕಾರಕ!