ಪ್ರೀತಿ ಕೈಕೊಟ್ಟಿದೆ, ಪ್ರೇಮಿ ದೂರಾಗಿದ್ದಾನೆ, ಆತ ನಿಜವಾಗಿಯೂ ಪ್ರೀತಿಸಿಯೇ ಇರಲಿಲ್ಲ ಎನ್ನುವ ಫೀಲಿಂಗ್ನಲ್ಲಿರಬೇಡಿ. ಇವೆಲ್ಲವನ್ನು ಹಿಮ್ಮೆಟ್ಟಿ ಒಂದು ಹೆಜ್ಜೆ ಮುಂದಿಡಿ. ಜೀವನವೆಂದ ಮೇಲೆ ಪ್ರೀತಿ, ಅಟ್ರ್ಯಾಕ್ಷನ್, ಮೋಸ ಇವೆಲ್ಲವನ್ನೂ ಇದ್ದೇ ಇರುತ್ತದೆ. ಅದಕ್ಕೂ ಮೀರಿದ್ದು ಕೂಡ ಜೀವನದಲ್ಲಿದೆ ಎಂಬುದನ್ನು ಮರೆಯಬೇಡಿ. ಅದೆಲ್ಲಾ ಹಾಗಿರಲಿ, ಈಗ ವಿಷಯಕ್ಕೆ ಬರೋಣ, ಬೆಂಗಳೂರಿನ ಟೆಕ್ಕಿಗಳು ವೆಬ್ಸೈಟ್ ಒಂದನ್ನು ಸಿದ್ಧಪಡಿಸಿದ್ದು, ಗಂಟೆಗಳ ಆಧಾರದಲ್ಲಿ ಬಾಯ್ಫ್ರೆಂಡ್ನ್ನು ಬಾಡಿಗೆ ನೀಡುತ್ತಂತೆ.
ಹೌದು, ಅನೇಕರು ಜೀವನದಲ್ಲಿ ಒಂಟಿಯಾಗಿರುತ್ತಾರೆ, ಅವರು ತಮಗಾಗಿ ಗೆಳೆಯ, ಗೆಳತಿಯರನ್ನು ಹುಡುಕುತ್ತಾರೆ. ಅವರು ಗೆಳೆಯ, ಗೆಳತಿಯರನ್ನು ಬಾಡಿಗೆಗೆ ಪಡೆಯಬಹುದು.
All the depressed people in Bangalore I’ve got news for you pic.twitter.com/MdsqY1WQQE
— Confusedicius (@Erroristotle) August 9, 2022
ಏಕಾಂಗಿಯಾಗಿರುವವರು, ಜೀವನದಲ್ಲಿ ತುಂಬಾ ನೊಂದವರು, ಪ್ರೀತಿಯ ವಂಚನೆಗೊಳಗಾದವರಿಗೆ ಈ ಪೋರ್ಟಲ್ ಸಹಾಯಕವಾಗಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ, ಏಕೆಂದರೆ ಈ ನಗರವು ಇತ್ತೀಚಿನ ಸ್ಟಾರ್ಟ್-ಅಪ್‌ಗಳಿಗೆ ಹೆಸರುವಾಸಿಯಾಗಿದೆ.
ಇಲ್ಲಿನ ಟೆಕ್ಕಿಗಳು ToYBoY ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ, ಇದು ನಗರದ ಜನರಿಗೆ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.
tribuneindia.com ನ ಸುದ್ದಿಯ ಪ್ರಕಾರ, ಬಾಡಿಗೆಗೆ ಬಾಯ್‌ಫ್ರೆಂಡ್ ಪಡೆಯುವ ಮೂಲಕ ತಮ್ಮ ಒಂಟಿತನವನ್ನು ಹೋಗಲಾಡಿಸಬಹುದು.
ನೀವು ಗಂಟೆಗೆ ಹಣ ಪಾವತಿಸಿ ಸೇವೆಯಲ್ಲಿ ಗೆಳೆಯನನ್ನು ನೇಮಿಸಿಕೊಳ್ಳಬಹುದು. ಅದೇ ರೀತಿ ಮುಂಬೈ ಮೂಲದ ಯುವಕ ಕೌಶಲ್ ಪ್ರಕಾಶ್ ‘ RABF ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ಸಹಾಯ ಮಾಡಲು ಅಪ್ಲಿಕೇಶನ್ ಆರಂಭಿಸಲಾಗಿದೆ.
ಈ ಅಪ್ಲಿಕೇಶನ್‌ಗಳು ಇತರ ಡೇಟಿಂಗ್ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾಗಿವೆ. ನೀವು ಗೆಳೆಯನನ್ನು ನೇಮಿಸಿಕೊಳ್ಳಲು ಬಯಸಿದರೆ, ನಂತರ ಹೋಗಿ ಖಾತೆಯನ್ನು ರಚಿಸಿ ಮತ್ತು ನಿಮ್ಮ ಆಯ್ಕೆಯ ವ್ಯಕ್ತಿಯನ್ನು ಆರಿಸಿ. ನಂತರ, ನೀವು ನಿಮ್ಮ ಸ್ಥಳವನ್ನು ಸೇರಿಸಬಹುದು ಮತ್ತು ನಿಮ್ಮ ಆದ್ಯತೆಯ ವ್ಯಕ್ತಿಯನ್ನು ಭೇಟಿ ಮಾಡಬಹುದು. ಈ ಅಪ್ಲಿಕೇಷನ್ ಪ್ಲೇಸ್ಟೋರ್ನಲ್ಲಿ ಲಭ್ಯವಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ