ಆತಂಕ, ಒತ್ತಡಕ್ಕೆ ಈ ಎಲೆ ಪರಿಹಾರ

ಪ್ರತಿಯೊಬ್ಬ ವ್ಯಕ್ತಿಗೂ ಒತ್ತಡ ಹಾಗೂ ಆತಂಕ ಇದ್ದೇ ಇರುತ್ತದೆ. ಇದು ಪ್ರತಿದಿನದ ಜೀವನಶೈಲಿಯಲ್ಲಿ ಸಹಜ, ಆದರೆ ಇದು ಹೆಚ್ಚಾದರೆ ಜೀವಕ್ಕೆ ಹಾಗೂ ಆರೋಗ್ಯಕ್ಕೂ ಕೆಟ್ಟದ್ದು. ಹೀಗಾಗಿ ಈ ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಲು ನೈಸರ್ಗಿಕವಾಗಿ ಸಾಧ್ಯ ಎಂದು ವೈದ್ಯರ ಹೇಳುತ್ತಾರೆ. ಅದಕ್ಕಾಗಿ ಪ್ರತಿದಿನ ಈ ಎಲೆಯನ್ನು ಸೇವನೆ ಮಾಡುವುದು ಒಳ್ಳೆಯದು. ಆ ಎಲೆ ಯಾವುದು ಎಂಬುದು ಇಲ್ಲಿದೆ ನೋಡಿ.

ಆತಂಕ, ಒತ್ತಡಕ್ಕೆ ಈ ಎಲೆ ಪರಿಹಾರ
ಸಾಂದರ್ಭಿಕ ಚಿತ್ರ

Updated on: Aug 08, 2025 | 4:32 PM

ಒತ್ತಡ ಮತ್ತು ಆತಂಕ (anxiety and stress) ಇದು ಎರಡು ಕೂಡ ಒಟ್ಟಿಗೆ ಬಂದರೆ ಜೀವಕ್ಕೆ ಅಪಾಯ. ಆದರೆ ಈ ಒತ್ತಡ ಹಾಗು ಆತಂಕವನ್ನು ಪರಿಹಾರ ಮಾಡಲು ಅನೇಕ ದಾರಿಗಳು ಇದೆ. ಇಂದಿನ ಕಾಲದಲ್ಲಿ ಒತ್ತಡ ಮತ್ತು ಆತಂಕ ಬಹಳ ಸಾಮಾನ್ಯ. ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಗಳು ಎದುರಿಸುವುದು ಇದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ ಭಾರತದಲ್ಲಿ 74% ಜನರು ಒತ್ತಡದಿಂದ ಬಳಲುತ್ತಿದ್ದಾರೆ ಮತ್ತು 84% ಜನರು ಆತಂಕದಿಂದ ಬಳಲುತ್ತಿದ್ದಾರೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ನಿದ್ರೆ, ಮನಸ್ಥಿತಿ ಮತ್ತು ಸಂಪೂರ್ಣ ಜೀವನಶೈಲಿ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವ ಮತ್ತು ಮನಸ್ಸನ್ನು ಶಾಂತವಾಗಿಸಲು ಸುಲಭ ಮಾರ್ಗಗಳು ಇಲ್ಲಿದೆ ನೋಡಿ. ಆಯುರ್ವೇದ ವೈದ್ಯ ಸಲೀಂ ಜೈದಿ ತಮ್ಮ ಯೂಟ್ಯೂಬ್​​​​ನಲ್ಲಿ ಈ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ವೈದ್ಯ ಸಲೀಂ ಜೈದಿ ಹೇಳಿರುವ ಪ್ರಕಾರ ನಮ್ಮ ಮನೆಯಲ್ಲಿರುವ ಈ ಒಂದು ಎಲೆಯಿಂದ ಈ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಈ ಸಮಸ್ಯೆಗೆ ನೈಸರ್ಗಿಕ ಪರಿಹಾರವೇ ಉತ್ತಮ. ಇದನ್ನು ಪರಿಹಾರ ಮಾಡಲು ಈ ಎಲೆಯನ್ನು ಉಪಯೋಗಿಸಿ ಎಂದು ಹೇಳಿದ್ದಾರೆ. ಆಯುರ್ವೇದದಲ್ಲಿ, ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಏಕೆಂದರೆ ಅದು ಅಡಾಪ್ಟೋಜೆನ್, ಇದು ನಮ್ಮ ದೇಹದ ಒತ್ತಡದ ಹಾರ್ಮೋನುಗಳನ್ನು, ವಿಶೇಷವಾಗಿ ಕಾರ್ಟಿಸೋಲ್ ಅನ್ನು ಸಮತೋಲನಗೊಳಿಸುತ್ತದೆ, ಇಂತಹ ಸಮಸ್ಯೆಗಳಿಂದ ಬೇಗ ಪರಿಹಾರ ಪಡೆಯಬಹುದು.

ಇಲ್ಲಿದೆ ನೋಡಿ ವಿಡಿಯೋ :

ಇದನ್ನೂ ಓದಿ
ಮೂತ್ರಪಿಂಡದ ಆರೋಗ್ಯ ಕಾಪಾಡುವುದಕ್ಕೆ ಇದಕ್ಕಿಂತ ಬೇರೆ ಆಹಾರವಿಲ್ಲ
ಮಖಾನಾ ದುಬಾರಿ ಅಂತ ಖರೀದಿ ಮಾಡದವರು ಇದನ್ನು ತಿನ್ನಿ
ಚಹಾ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ
ಮುಖದ ಮೇಲಿನ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಎಂಜಲೇ ಮದ್ದಂತೆ

ನೇಪಾಳ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಸಂಶೋಧನೆಯು ತುಳಸಿಯ ನಿಯಮಿತ ಸೇವನೆಯು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರೆಯನ್ನು ಸುಧಾರಿಸುತ್ತದೆ ಎಂದು ಹೇಳಿದೆ. ಇನ್ನು ಇದನ್ನು ಪ್ರತಿದಿನ ಹೇಗೆ? ಬಳಸಬೇಕು ಎಂಬು ಬಗ್ಗೆಯೂ ವೈದ್ಯರು ಹೇಳಿದ್ದಾರೆ. ತುಳಸಿ ಚಹಾ ಕುಡಿಯುವುದು ಉತ್ತಮ. ಒಂದು ಕಪ್ ನೀರಿನಲ್ಲಿ 5-7 ತುಳಸಿ ಎಲೆಗಳು, ಸ್ವಲ್ಪ ಶುಂಠಿ ಮತ್ತು ದಾಲ್ಚಿನ್ನಿ ಹಾಕಿ 5 ನಿಮಿಷ ಕುದಿಸಿ ಕುಡಿಯಿರಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.

ಇದನ್ನೂ ಓದಿ: ವಿಶ್ವದ ಸುರಕ್ಷಿತ ನಗರಗಳ ಪಟ್ಟಿ ಪ್ರಕಟ; ಭಾರತದ ಅತ್ಯಂತ ಸುರಕ್ಷಿತ ನಗರಗಳ ಪೈಕಿ ಮಂಗಳೂರು ಫಸ್ಟ್

ತುಳಸಿಯ ಕಷಾಯವನ್ನು ಮಾಡಿ ಕೂಡ ಕುಡಿಯಬಹುದು. ದನ್ನು ತಯಾರಿಸಲು, 2 ಕಪ್ ನೀರಿನಲ್ಲಿ 10-12 ತುಳಸಿ ಎಲೆಗಳು, ಶುಂಠಿ, ಕರಿಮೆಣಸು ಮತ್ತು ದಾಲ್ಚಿನ್ನಿ ಸೇರಿಸಿ. 10 ನಿಮಿಷಗಳ ಕಾಲ ಕುದಿಸಿ ಮತ್ತು ಶೋಧಿಸಿದ ನಂತರ ಕುಡಿಯಿರಿ. ಇದು ಸ್ವಲ್ಪ ಖಾರವಾಗಿದ್ದರೂ ತಕ್ಷಣದ ಪರಿಣಾಮ ನೀಡುತ್ತದೆ. ಇದರ ಹೊರತಾಗಿ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ತುಳಸಿ ಎಲೆಗಳನ್ನು ಅಗಿಯಬಹುದು. ಆದರೆ, ಇದನ್ನು ಪ್ರತಿದಿನ ಮಾಡುವುದನ್ನು ತಪ್ಪಿಸಿ, ಇದು ನಿಮ್ಮ ಹಲ್ಲುಗಳಿಗೆ ಹಾನಿ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ