ರುಚಿಯಾದ ಆಲೂಗಡ್ಡೆ-ಮೊಟ್ಟೆಯ ಕಟ್ಲೆಟ್​ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಆಲೂಗಡ್ಡೆ ಹಾಗೂ ಮೊಟ್ಟೆಯನ್ನು ಉಪಯೋಗಿಸಿ ರುಚಿಯಾದ ಕಟ್ಲೆಟ್​ ಮಾಡಬಹುದು. ಅದರ ಸುಲಭ ವಿಧಾನ ಇಲ್ಲಿದೆ ನೋಡಿ

ರುಚಿಯಾದ ಆಲೂಗಡ್ಡೆ-ಮೊಟ್ಟೆಯ ಕಟ್ಲೆಟ್​ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಕಟ್ಲೆಟ್​ (ಸಾಂಕೇತಿಕ ಚಿತ್ರ)
Updated By: Pavitra Bhat Jigalemane

Updated on: Mar 06, 2022 | 1:28 PM

ವಾರವಿಡೀ ಕೆಲಸ ಮಾಡಿ ಭಾನುವರ ಬಂತೆಂದರೆ ಒಂದು ರೀತಿಯ ನೆಮ್ಮದಿ ಎನಿಸುತ್ತದೆ. ಪ್ರತಿದಿನ ಗಡಿಬಿಡಿಯಲ್ಲಿ ಫುಡ್​ ತಯಾರಿಸಿ ಕೆಲಸಕ್ಕೆ ತೆರಳುವ ಧಾವಂತವಿರುತ್ತದೆ. ಆದರೆ ರಜಾ ದಿನಗಳಲ್ಲಿ ಏನಾದರೂ ವಿಶೇಷ ಆಹಾರ ತಯಾರಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ ಮೊಟ್ಟೆ ಮತ್ತು ಆಲೂಗಡ್ಡೆ ಸೇರಿಸಿ ಕಟ್ಲೆಟ್​ ಮಾಡಿ ಸವಿಯಿರಿ. ನಿಮ್ಮ ಮನೆಯಲ್ಲಿ ಆಲೂಗಡ್ಡೆ ಮತ್ತು ಮೊಟ್ಟೆಗಳಿದ್ದರೆ, ನೀವು ಅದರಿಂದ ‘ಎಗ್ ಪೊಟಾಟೋ ಕಟ್ಲೆಟ್’ ತಯಾರಿಸಬಹುದು. ಇದು ಸಂಜೆಯ ಸ್ನಾಕ್ಸ್​ಗೆ ಉತ್ತಮ ಆಹಾರವಾಗಲಿದೆ. ಅಲ್ಲದೆ ಮೊಟ್ಟೆ ನಿಮ್ಮ ದೇಹದ ಆರೋಗ್ಯವನ್ನೂ ಕೂಡ ಕಾಪಾಡುತ್ತದೆ.

ಅತಿ ಕಡಿಮೆ ಸಮಯದಲ್ಲಿ ಈ ರೆಸಿಪಿಯನ್ನು ತಯಾರಿಸಬಹುದು. ಈ ರೆಸಿಪಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ,

ಬೇಕಾಗುವ ಸಾಮಗ್ರಿ:
ಆಲೂಗಡ್ಡೆ-2
ಮೊಟ್ಟೆ -1
ರುಚಿಗೆ ತಕ್ಕಷ್ಟು ಉಪ್ಪು
ಕರಿಮೆಣಸಿನ ಕಾಳು-3
ಕೊತ್ತಂಬರಿ ಸೊಪ್ಪು- ಅರ್ಧ ಕಪ್​
ಬ್ರೆಡ್​-3
ಎಣ್ಣೆ

ಮಾಡುವ ವಿಧಾನ

  1. ಆಲೂಗಡ್ಡೆ ಮತ್ತು ಮೊಟ್ಟೆಯ ಕಟ್ಲೆಟ್ ತಯಾರಿಸಲುಮೊದಲು 2 ಆಲೂಗಡ್ಡೆಯನ್ನು ಬೇಯಿಸಿ ಸ್ಮ್ಯಾಶ್​ ಮಾಡಿಕೊಳ್ಳಿ
  2. ಸ್ಮ್ಯಾಶ್​ ಮಾಡಿದ ಆಲೂಗಡ್ಡೆಗೆ  ಉಪ್ಪು, ಹಸಿಮೆಣಸು, ಕರಿಮೆಣಸು, ಕೊತ್ತಂಬರಿ ಸೊಪ್ಪು ಅನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಅದನ್ನು ಒಂದೊಂದು ಪುಟ್ಟ ಉಂಡೆಗಳನ್ನಾಗಿ ಮಾಡಿ ಚಪಾತಿ ಲಟ್ಟಿಸುವಂತೆ ತಟ್ಟಿಕೊಳ್ಳಿ
  3. ಇನ್ನೊಂದು ಪಾತ್ರಯಲ್ಲಿ ಬ್ರೆಡ್ ತುಂಡುಗಳನ್ನು ತೆಗೆದುಕೊಳ್ಳಿ. ಇದಕ್ಕೆ ತುರಿದ ಚೀಸ್ ಸೇರಿಸಿ. ಈಗ ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದು ಹಳಿದಿ ಭಾಗವನ್ನು ಹಾಕಿಕೊಳ್ಳಿ.
  4. ಈಗ ನೀವು ಮಾಡಿದ ಆಲೂಗಡ್ಡೆ ಉಂಡೆಗಳನ್ನು ಮೊಟ್ಟೆಯಲ್ಲಿ ಅದ್ದಿ ನಂತರ ಅವುಗಳನ್ನು ಬ್ರೆಡ್ ತುಂಡುಗಳಲ್ಲಿ ಸುತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ
  5. ಉಂಡೆಗಳು ಕೆಂಪು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿದು ನಂತರ ತೆಗೆದರೆ ರುಚಿಯಾದ ಕಟ್ಲೆಟ್ ಸವಿಯಬಹುದು. ಇದಕ್ಕೆ ಚಟ್ನಿ ಮಾಡಿಕೊಂಡರೆ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ತಿನ್ನಬಹುದು.

ಇದನ್ನೂ ಓದಿ:
ಎಣ್ಣೆಯುಕ್ತ ಆಹಾರ ತಿಂದ ನಂತರ ಈ 5 ಕೆಲಸಗಳನ್ನು ಮಾಡಿ; ಅನಾರೋಗ್ಯಕ್ಕೂ ಮುನ್ನ ಇರಲಿ ಎಚ್ಚರ