ಇಂದ ದೇಶದಾದ್ಯತಂತ ಸಂಭ್ರಮದ ಹೋಳಿ. ಹಬ್ಬ ಎಂದ ಮೇಲೆ ಮನೆಯಲ್ಲಿ ಸಿಹಿ ಮಾಡುವುದು ಸಾಮಾನ್ಯ. ಇಗ ಭೇಸಿಗೆ ಕಾಲವೂ ಆರಂಭವಾಗಿದೆ. ಇದೇ ಕಾರಣದಿಂದ ಪಾನೀಯಗಳಿಗೂ ಹೆಚ್ಚು ಬೇಡಿಕೆ ಇರುತ್ತದೆ. ಸಿಹಿ ಪಾನೀಯವನ್ನು ನೀವು ಈ ಹೋಳಿಯಂದು ತಯಾರಿಸಿದರೆ ಮಕ್ಕಳೂ ಇಷ್ಟಪಡುತ್ತಾರೆ. ನೀವೂ ಸೆಕೆಯಲ್ಲಿ ತಂಪಾಗಿ ಸೇವಿಸಬಹುದು. ನೀವೇನಾದರೂ ಸ್ಟ್ರಾಬೆರಿ ಹಣ್ಣಿನ ಪ್ರಿಯರಾಗಿದ್ದರೆ ಈ ಹೋಳಿಗೆ ಸ್ಟ್ರಾಬೆರಿಯ ಥಂಡೈಅನ್ನು ತಯಾರಿಸಬಹುದು. ಕಲರ್ಫುಲ್ ಆಗಿರುವ ಜ್ಯೂಸ್ ನೊಡಿ ಮಕ್ಕಳೂ ಕುಡ ಖುಷಿಯಿಂದ ಸೇವಿಸುತ್ತಾರೆ. ಅಲ್ಲದೆ ಸ್ಟ್ರಾಬೆರಿ ಹಣ್ಣು ದೇಹಕ್ಕೂ ಒಳ್ಳೆಯದು. ಹಾಗಾದರೆ ಸ್ಟ್ರಾಬೆರಿ ಥಾಂಡೈ ತಯಾರಿಸುವುದೆ ಹೇಗೆ? ಇಲ್ಲಿದೆ ಮಾಡುವ ಮಾಡುವ ವಿಧಾನ
ಬೇಕಾಗುವ ಸಾಮಗ್ರಿ:
4,5 ಬಾದಾಮಿ
4,5 ಪಿಸ್ತಾ
1 ಟೀ ಚಮಚ ಗಸಗಸೆ ಬೀಜಗಳು
2 ಟೇಬಲ್ ಸ್ಪೂನ್ ಸಕ್ಕರೆ
8 ಸ್ಟ್ರಾಬೆರಿ
4,5 ಗೋಡಂಬಿ
1 ಟೀಸ್ಪೂನ್ ಕಲ್ಲಂಗಡಿ ಬೀಜಗಳು
4 ಮೆಣಸುಕಾಳುಗಳು
1/4 ಚಮಚ ಪುಡಿಮಾಡಿದ ಹಸಿರು ಏಲಕ್ಕಿ
2 ಕಪ್ ಹಾಲು
ಮಾಡುವ ವಿಧಾನ:
ಮೊದಲು ಗೋಡಂಬಿ, ಬಾದಾಮಿ, ಪಿಸ್ತಾ, ಮೆಣಸಿನ ಕಾಳು, ಕಲ್ಲಂಗಡಿ ಬೀಜಗಳು, ಗಸಗಸೆ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ. ಒರಟಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಕತ್ತರಿಸಿದ ಸ್ಟ್ರಾಬೆರಿಗಳನ್ನು ಸೇರಿಸಿ ಮತ್ತು ದಪ್ಪ ಸ್ಟ್ರಾಬೆರಿ ಮಿಶ್ರಣವನ್ನು ತಯಾರಿಸಿಕೊಳ್ಳಿ. ನಂತರ ಅದಕ್ಕೆ ಹಾಲನ್ನು ಸೇರಿಸಿ ಮತ್ತು ಹಾಲಿನೊಂದಿಗೆ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಲು ಮತ್ತೊಮ್ಮೆ ರುಬ್ಬಿಕೊಳ್ಳಿ. ನಂತರ ಮಿಕ್ಸಿ ಪಾತ್ರೆಯಿಂದ ತೆಗೆದು ಲೋಟಕ್ಕೆ ಹಾಕಿ ಬಾದಾಮಿ, ಪಿಸ್ತಾದೊಂದಿಗೆ ಅಲಂಕರಿಸಿ ಸವಿಯಿರಿ.
ಥಂಡೈ ಹೋಳಿಯ ವಿಶೇಷ ಖಾದ್ಯವೂ ಹೌದು. ಉತ್ತರ ಭಾರತದ ರಾಜ್ಯಗಳಲ್ಲಿ ಹೋಳಿಯಂದು ಥಂಢೈಅನ್ನು ತಯಾರಿಸಿ ಸವಿಯುತ್ತಾರೆ. ನೀವೂ ಕೂಡ ತಯಾರಿಸಿ ಹೋಳಿಯನ್ನು ಮತ್ತಷ್ಟು ಕಲರ್ಫುಲ್ ಆಗಿಸಿಕೊಳ್ಳಿ.
ಇದನ್ನೂ ಓದಿ:
ರುಚಿ ರಚಿಯಾದ ಸಿಹಿಗುಂಬಳ ಪಲ್ಯ ಮಾಡುವ ವಿಧಾನ ಇಲ್ಲಿದೆ; ಅಕ್ಕಿ ರೊಟ್ಟಿ, ಚಪಾತಿ ಜೊತೆ ಸವಿಯಿರಿ
Published On - 1:48 pm, Fri, 18 March 22