AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರುಚಿ ರಚಿಯಾದ ಸಿಹಿಗುಂಬಳ ಪಲ್ಯ ಮಾಡುವ ವಿಧಾನ ಇಲ್ಲಿದೆ; ಅಕ್ಕಿ ರೊಟ್ಟಿ, ಚಪಾತಿ ಜೊತೆ ಸವಿಯಿರಿ

ಸಿಹಿಗುಂಬಳಕ್ಕೆ ಚೀನಿಕಾಯಿ ಅಂತಲೂ ಕರೆಯುತ್ತಾರೆ. ಇದರಲ್ಲಿ ಕೆಲ ಆರೋಗ್ಯ ಪ್ರಯೋಜಗಳಿವೆ. ಕಣ್ಣಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ದೇಹದ ತೂಕ ಹೆಚ್ಚಿಸಲು ಚೀನಿಕಾಯಿಯನ್ನು ತಿನ್ನಿ.

ರುಚಿ ರಚಿಯಾದ ಸಿಹಿಗುಂಬಳ ಪಲ್ಯ ಮಾಡುವ ವಿಧಾನ ಇಲ್ಲಿದೆ; ಅಕ್ಕಿ ರೊಟ್ಟಿ, ಚಪಾತಿ ಜೊತೆ ಸವಿಯಿರಿ
ಸಿಹಿಗುಂಬಳ ಪಲ್ಯ
TV9 Web
| Updated By: sandhya thejappa|

Updated on: Mar 16, 2022 | 4:56 PM

Share

ಎಲ್ಲರಿಗೂ ಸಿಹಿಗುಂಬಳ (Pumpkin) ಇಷ್ಟವಾಗಲ್ಲ. ಸಿಹಿ ಆಹಾರವನ್ನು ಇಷ್ಟಪಡುವವರು ಸಿಹಿಗುಂಬಳ ಇಷ್ಟಪಟ್ಟು ತಿನ್ನುತ್ತಾರೆ. ಖಾರ ಲೈಕ್ ಮಾಡುವವರಿಗೆ ಸಿಹಿಗುಂಬಳ ಅಷ್ಟೇನೂ ಇಷ್ಟವಾಗಲ್ಲ. ಸಿಹಿಗುಂಬಳಕ್ಕೆ ಚೀನಿಕಾಯಿ ಅಂತಲೂ ಕರೆಯುತ್ತಾರೆ. ಇದರಲ್ಲಿ ಕೆಲ ಆರೋಗ್ಯ ಪ್ರಯೋಜಗಳಿವೆ. ಕಣ್ಣಿನ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ದೇಹದ ತೂಕ ಹೆಚ್ಚಿಸಲು ಚೀನಿಕಾಯಿಯನ್ನು ತಿನ್ನಿ. ಜ್ಞಾಪಕ ಶಕ್ತಿ ಕೂಡಾ ವೃದ್ಧಿಯಾಗುತ್ತದೆ. ಇದರಲ್ಲಿ ಪೌಷ್ಟಿಕಾಂಶ ಹೇರಳವಾಗಿದೆ. ಚೀನಿಕಾಯಿ ಇಷ್ಟಪಡದೇ ಇರುವವರಿಗೂ ಇದೊಂದು ರೆಸಿಪಿ ತುಂಬಾ ಇಷ್ಟ ಆಗುತ್ತದೆ. ಹಾಗಾದರೆ ಆ ರೆಸಿಪಿ ಯಾವುದು? ಚೀನಿಕಾಯಿ ಪಲ್ಯ.

ಚೀನಿಕಾಯಿ ಪಲ್ಯ ನಾಲಿಗೆಗೆ ತುಂಬಾ ರುಚಿ ನೀಡುತ್ತದೆ. ಅಕ್ಕಿ ರೊಟ್ಟಿ, ಚಪಾತಿಗೆ ಹೇಳಿ ಮಾಡಿಸಿದ ಕಾಂಬಿನೇಷನ್ ಇದು. ಚೀನಿಕಾಯಿ ಪಲ್ಯ ಮಾಡಲು ಬೇಕಾಗುವ ಸಾಮಾಗ್ರಿಗಳು: ಚೀನಿಕಾಯಿ ಈರುಳ್ಳಿ- 1 ಹಸಿಮೆಣಸಿನಕಾಯಿ- 5ರಿಂದ 6 ಅರಿಶಿನ ಪುಡಿ- ಅರ್ಧ ಚಮಚ ಸಾಸಿವೆ- 1 ಟೀ ಸ್ಫೂನ್ ಬೇವಿನ ಸೊಪ್ಪು- 5ರಿಂದ 6 ಎಲೆ ಕಾಯಿ ತುರಿ ಅರ್ಧ ಕಪ್ ರುಚಿಗೆ ತಕ್ಕಷ್ಟು ಉಪ್ಪು

ಚೀನಿಕಾಯಿ ಪಲ್ಯ ಮಾಡುವ ವಿಧಾನ: ಮೊದಲು ಚೀನಿಕಾಯಿಯನ್ನು ಕತ್ತರಿಸಿ. ಸೌತೆ ಕಾಯಿ ಕಟ್ ಮಾಡುವಂತೆ ಮಾಡಬೇಕು. ಕತ್ತರಿಸಿದ ತುಂಡುಗಳನ್ನ ನೀರಿಗೆ ಹಾಕಿ. ಚೆನ್ನಾಗಿ ತೊಳೆಯಿರಿ. ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ, ಬೇವಿನ ಎಲೆ ಹಾಕಿ. ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ. ಎರಡು ಮೂರು ನಿಮಿಷ ಫ್ರೈ ಮಾಡಿ. ಅದಕ್ಕೆ ಕತ್ತರಿಸಿಕೊಂಡ ಚೀನಿಕಾಯಿ ಹಾಕಿ. ಅರಿಶಿನ ಪುಡಿ, ಉಪ್ಪು, ಸ್ವಲ್ಪ ನೀರು ಹಾಕಿ ಬೇಯಲು ಬಿಡಿ.

ಚೀನಿಕಾಯಿ ಬೇಯುವುದಕ್ಕೆ ತುಂಬಾ ಸಮಯ ಬೇಡ. 15 ನಿಮಿಷ ಸಾಕು. ಬೆಂದ ನಂತರ ಕಾಯಿ ತುರಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಿಸಿ ಬಿಸಿ ಚಪಾತಿ ಅಥವಾ ಅಕ್ಕಿ ರೊಟ್ಟಿ ಜೊತೆ ಸವಿಯಿರಿ.

ಇದನ್ನೂ ಓದಿ

ಪರೀಕ್ಷೆ ತಯಾರಿ ನಡೆಸಲು ಓದುವ ವೇಳೆ ಈ ಟಿಪ್ಸ್​ ಅಳವಡಿಸಿಕೊಳ್ಳಿ

Weight Loss V/S Fat Loss: ಕೊಬ್ಬು ಮತ್ತು ತೂಕ ಇಳಿಕೆ; ಎರಡರಲ್ಲಿ ಯಾವುದು ಆರೋಗ್ಯಕರ ಆಯ್ಕೆ?