ಪರೀಕ್ಷೆ ತಯಾರಿ ನಡೆಸಲು ಓದುವ ವೇಳೆ ಈ ಟಿಪ್ಸ್​ ಅಳವಡಿಸಿಕೊಳ್ಳಿ

ಇನ್ನೇನು ಪರೀಕ್ಷೆಗಳು ಆರಂಭವಾಗುವ ದಿನ ಬರುತ್ತಿದೆ. ಹೀಗಾಗಿ ಮಕ್ಕಳ ಮೇಲಿನ ಒತ್ತಡವೂ ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಏಕಾಗ್ರತೆಯಿಂದ ಓದಲು ಇಲ್ಲಿವೆ ಕೆಲವು ಸಲಹೆಗಳು.

ಪರೀಕ್ಷೆ ತಯಾರಿ ನಡೆಸಲು ಓದುವ ವೇಳೆ ಈ ಟಿಪ್ಸ್​ ಅಳವಡಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Mar 16, 2022 | 4:48 PM

ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು. ಉನ್ನತ ಶ್ರೇಣಿಯನ್ನು ಪಡೆಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಓದುವ ಕ್ರಮ ಮುಖ್ಯವಾಗಿರುತ್ತದೆ. ಕೆಲವರು ಎಷ್ಟು ಓದಿದರೂ ತಲೆಗೇ ಹತ್ತುವುದಿಲ್ಲ ಎನ್ನುವುದನ್ನು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣ ಏಕಾಗ್ರತೆಯ ಕೊರತೆ. ಮನಸ್ಸಿಟ್ಟು, ಒಂದೇ ಚಿತ್ತದಿಂದ ಓದಿದರೆ ಎಂತಹವರೂ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬಹುದು. ಇನ್ನೇನು ಕೆಲವೇ ದಿನಗಳಲ್ಲಿ ಪಿಯುಸಿ, ಪದವಿ ತರಗತಿಗಳ ಪರೀಕ್ಷೆ ಆರಂಭವಾಗಲಿದೆ. ಬದುಕಿನ ಮಹತ್ವದ ಘಟ್ಟಗಳಲ್ಲಿ ಮಕ್ಕಳ ಮೇಲಿನ ಒತ್ತಡ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಹೀಗಾಗಿ ಕಷ್ಟಪಟ್ಟು ಓದುವ ಬದಲು ಕೆಲವು ವಿಧಾನಗಳನ್ನು ಅನುಸರಿಸಿಕೊಂಡು ಯುಕ್ತಿಯಿಂದ, ಏಕಾಗ್ರತೆಯಿಂದ ಓದಿದರೆ ಉತ್ತಮ. ಇದಕ್ಕಾಗಿಯೇ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತು ಟೈಮ್ಸ್​ ನೌ ವರದಿ ಮಾಡಿದೆ. ಅದರ ಮಾಹಿತಿ ಇಲ್ಲಿದೆ ನೋಡಿ,

ಆಗಾಗ ವಿರಾಮ ನೀಡಿ: ದೀರ್ಘಕಾಲ ಕೊಂಚವೂ ವಿಶ್ರಾಂತಿ ನೀಡದೆ ಗಂಟೆಗಳ ಕಾಲ ಅಧ್ಯಯನ ಮಾಡುವುದು ಯಾವಾಗಲೂ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿರುವುದಿಲ್ಲ. ಇದು ಪ್ರೇರಣೆ ಮತ್ತು ಏಕಾಗ್ರತೆಗೆ ಹಾನಿಯನ್ನುಂಟುಮಾಡುತ್ತದೆ. ನೆನಪಿನ ಶಕ್ತಿಯೂ ಕುಂದುತ್ತದೆ. ಹೀಗಾಗಿ ಪ್ರತೀ ಒಂದು ಗಂಟೆಗೊಮ್ಮೆ ಎದ್ದು ಒಂದೆರಡು ಹೆಜ್ಜೆ ನಡೆದಾಡಿ.

ನಿಮ್ಮ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳಿ: ಅಧ್ಯಯನ ಮಾಡುವಾಗ, ನಿಮ್ಮ ಪರೀಕ್ಷಕರು ನಿಮ್ಮನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನೀವೇ ಪರಿಗಣಿಸಿ. ನಿಮಗಿಂತ ಉತ್ತಮವಾದ ವಿಮರ್ಶೆ ನಿಮ್ಮ ಬಗ್ಗೆ ಇರಲಾರದು. ರಸಪ್ರಶ್ನೆಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಕಟ್ಟುನಿಟ್ಟಾದ ಮೌಲ್ಯಮಾಪನ ವಿಧಾನಗಳನ್ನು ಕೈಗೊಳ್ಳಿ.

ಮೊಬೈಲ್​ಗಳನ್ನು ಬದಿಗಿಡಿ ಅಥವಾ ಸೈಲೆಂಟ್​ ಮೂಡ್​ನಲ್ಲಿಡಿ: ಪದೇ ಪದೇ ಬರುವ ಮೆಸೇಜ್​ಗಳ ಸದ್ದು, ಆಗಾಗ ಬರುವ ಫೋನ್​ಕಾಲ್​ಗಳು ನಿಮ್ಮ ಏಕಾಗ್ರತೆಗೆ ಭಂಗ ತರುತ್ತದೆ. ಹೀಗಾಗಿ ಮೊಬೈಲ್ ಅಥವಾ ಇನ್ನಿತರ ಗ್ಯಾಜೆಟ್ಸ್​ಗಳನ್ನು ಓದಿನ ಸಮಸಯದಲ್ಲಿ ದೂರವಿಡಿ. ಇಂಟರ್​ನೆಟ್​ ಸಹಾಯಾಬೇಕಾದಾಗ ಸಾಮಾಜಿಕ ಜಾಲತಾಣಗಳಿಗೆ ಇಂಟರ್​ನೆಟ್​ ಅನ್ನು ಸೆಟ್ಟಿಂಗಸ್​ ಮೂಲಕ ನಿರ್ಬಂಧಿಸಿ.

ದಿನಚರಿಯನ್ನು ಹಾಕಿಕೊಳ್ಳಿ: ನಿಮಗೆ ಮತ್ತು ನಿಮ್ಮ ದೇಹಕ್ಕೆ ಯಾವ ರೀತಿಯ ದಿನಚರಿ ಉತ್ತಮ ಎನ್ನುವುದನ್ನು ಕಂಡುಕೊಳ್ಳಿ. ಅಧ್ಯಯನದ ವಿಷಯಕ್ಕೆ ಬಂದಾಗ, ವೈಯಕ್ತಿಕ ಸೌಕರ್ಯ, ಮನಸ್ಸಿನ ಶಾಂತಿ ಮತ್ತು ಅನುಕೂಲವು ಮುಖ್ಯವಾಗಿದೆ. ಆದ್ದರಿಂದ, ನಿಮಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನೀವು ಭಾವಿಸುವ ತಂತ್ರಗಳನ್ನು ಗಮನಿಸಿ, ಪ್ರಯೋಗಿಸಿ ಮತ್ತು ಕಾರ್ಯಗತಗೊಳಿಸಿ.

ಸಾಕಷ್ಟು ವಿಶ್ರಾಂತಿ ಪಡೆಯಿರಿ: ಸರಿಯಾದ ಸಮಯದಲ್ಲಿ ಆಹಾರ ಸೇವಿಸಿ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ ಜತೆಗೆ ಸಕ್ರಿಯರಾಗಿರಿ. ಕಟ್ಟುನಿಟ್ಟಾದ ವೇಳಾಪಟ್ಟಿಯ ಹೊರತಾಗಿಯೂ, ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ, ಕೇವಲ 5-15 ನಿಮಿಷಗಳ ಕಾಲ ವ್ಯಾಯಾಮ ಮಾಡಿ ಮತ್ತು ಕನಿಷ್ಠ 6-8 ಗಂಟೆಗಳ ನಿರಂತರ ನಿದ್ರೆ ಪಡೆಯಿರಿ.

ಇದನ್ನೂ ಓದಿ:

ಅನಗತ್ಯ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಆಹಾರಗಳನ್ನು ಸೇವಿಸಿ

Published On - 4:47 pm, Wed, 16 March 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್