ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆಯೇ? ಈ ಸಮಸ್ಯೆಗೆ ಮುಕ್ತಿ ಪಡೆಯಲು ಇಲ್ಲಿದೆ ಪರಿಹಾರ

ಅಡುಗೆಮನೆಗಳು, ಸ್ನಾನಗೃಹಗಳು ಮತ್ತು ಮನೆಯ ತೇವಾಂಶವುಳ್ಳ ಪ್ರದೇಶಗಳು ಜಿರಳೆಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳಗಳಾಗಿದ್ದು, ಇಂತಹ ಸ್ಥಳಗಳಲ್ಲಿ ಜಿರಳೆಗಳ ಹಾವಳಿ ತುಸು ಹೆಚ್ಚೇ ಇರುತ್ತದೆ. ಇವುಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದ ಅಷ್ಟೇನೂ ಒಳ್ಳೆಯ ರಿಸಲ್ಟ್‌ ಸಿಗೋದಿಲ್ಲ. ಹೀಗಿರುವಾಗ ಕಾಕ್ರೋಚ್‌ಗಳ ಹಾವಳಿಗೆ ಸಂಪೂರ್ಣವಾಗಿ ಬ್ರೇಕ್‌ ಹಾಕಲು ಕೇವಲ ಈ ಒಂದು ಮನಮದ್ದಿನ ಸಹಾಯ ಪಡೆಯಿರಿ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆಯೇ? ಈ ಸಮಸ್ಯೆಗೆ ಮುಕ್ತಿ ಪಡೆಯಲು ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
Image Credit source: vecteezy

Updated on: Oct 26, 2026 | 6:08 PM

ಸೊಳ್ಳೆ, ನೊಣಗಳ ಹಾವಳಿ ಇರುವಂತೆ ಬಹುತೇಕ ಹೆಚ್ಚಿನ ಮನೆಗಳಲ್ಲಿ ಜಿರಳೆಗಳ (cockroaches) ಕಾಟ ಇದ್ದೇ ಇರುತ್ತದೆ. ಅಡುಗೆಮನೆಗಳು, ಸ್ನಾನಗೃಹಗಳು ಮತ್ತು ಮನೆಯ ತೇವಾಂಶವುಳ್ಳ ಪ್ರದೇಶಗಳು ಜಿರಳೆಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳಗಳಾಗಿದ್ದು, ಇಂತಹ ಸ್ಥಳಗಳಲ್ಲಿ ಜಿರಳೆಗಳ ಹಾವಳಿ ತುಸು ಹೆಚ್ಚೇ ಇರುತ್ತದೆ. ಅಲ್ಲದೆ ಇವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆಯೂ ಇರುತ್ತದೆ. ಹೆಚ್ಚಿನವರು ಜಿರಳೆಗಳ ಸಮಸ್ಯೆಯಿಂದ ಪಾರಾಗಲು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಬಳಸುವುದು ಸೂಕ್ತವಲ್ಲ. ಹೀಗಿರುವಾಗ ದೇವರ ಕೋಣೆಯಲ್ಲಿ ಸುಲಭವಾಗಿ ಲಭ್ಯವಿರುವ ಕರ್ಪೂರದ ಸಹಾಯದಿಂದ ಜಿರಳೆಗಳ ಕಾಟಕ್ಕೆ ಸಂಪೂರ್ಣವಾಗಿ ಬ್ರೇಕ್‌ ಹಾಕ್ಬೋದು. ಕಾಕ್ರೋಚ್‌ಗಳನ್ನು ಓಡಿಸಲು ಕಪೂರ್ಣವನ್ನು ಹೇಗೆ ಉಪಯೋಗಿಸಬೇಕು ಎಂಬುದರ ಪೂರ್ಣ ವಿವರ ಇಲ್ಲಿದೆ.

ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಕರ್ಪೂರ ಹೇಗೆ ಪರಿಣಾಮಕಾರಿ?

ಜಿರಳೆಗಳನ್ನು ನಿಯಂತ್ರಿಸಲು ಕರ್ಪೂರವನ್ನು ಪರಿಣಾಮಕಾರಿ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಇದರ ಬಲವಾದ ವಾಸನೆಯನ್ನು ಜಿರಳೆಗಳು ಇಷ್ಟಪಡುವುದಿಲ್ಲ, ಮತ್ತು  ಕರ್ಪೂರದ ಬಲವಾದ ವಾಸನೆಯು ಜಿರಳೆಗಳ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವು ತಕ್ಷಣವೇ ಓಡಿಹೋಗುತ್ತವೆ. ಜಿರಳೆಗಳ ಹಾವಳಿಯನ್ನು ತಡೆಗಟ್ಟಲು ಕರ್ಪೂರವನ್ನು ಯಾವ ರೀತಿ ಬಳಸಬಹುದು ಎಂದರೆ,

ಜಿರಳೆಗಳನ್ನು ಓಡಿಸಲು ಕರ್ಪೂರ ಸ್ಪ್ರೇ ಬಳಸಿ: ಜಿರಳೆಗಳನ್ನು ಓಡಿಸಲು ನೀವು ಕರ್ಪೂರ ಸ್ಪ್ರೇ ತಯಾರಿಸಬಹುದು. ಸ್ಪ್ರೇ ತಯಾರಿಸಲು, ಒಂದು ಲೋಟ ನೀರಿಗೆ ಕೆಲವು ತುಂಡು ಕರ್ಪೂರ ಸೇರಿಸಿ ಸ್ವಲ್ಪ ಹೊತ್ತು ಪಕ್ಕಕ್ಕೆ ಇರಿಸಿ. ಕರ್ಪೂರ ಸಂಪೂರ್ಣವಾಗಿ ಕರಗಿದ ನಂತರ, ಅದನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ಜಿರಳೆಗಳ ಮೇಲೆ ಸಿಂಪಡಿಸಿ, ಅಗ ಜಿರಳೆಗಳು ತಕ್ಷಣವೇ ಓಡಿ ಹೋಗುತ್ತವೆ.

ಕರ್ಪೂರ ಪುಡಿ: ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಕರ್ಪೂರ ಪುಡಿಯನ್ನು ಸಹ ಬಳಸಬಹುದು. ಕರ್ಪೂರವನ್ನು ಪುಡಿಮಾಡಿ, ಈ ಪುಡಿಯನ್ನು ಜಿರಳೆಗಳು ಓಡಾಡುವ ಸ್ಥಳದ ಮೇಲೆ ಸುರಿಯಿರಿ. ಕರ್ಪೂರ ಪುಡಿಯನ್ನು ಸಿಂಕ್‌ಗಳ ಹಿಂದೆ, ಕ್ಯಾಬಿನೆಟ್‌ಗಳ ಹಿಂದೆ ಮತ್ತು ಚರಂಡಿಗಳ ಬಳಿ ಇಡಬಹುದು. ಇದರ ವಾಸನೆಗೆ ಜಿರಳೆಗಳು ಅಲ್ಲಿ ಸುಳಿದಾಡುವುದೇ ಇಲ್ಲ.

ಕರ್ಪೂರ ಮಾತ್ರೆಗಳು: ವಾಡ್ರೋಬ್‌, ಅಡುಗೆ ಮನೆಯ ಮೂಲೆ ಮೂಲೆಯಲ್ಲಿ ಕರ್ಪೂರದ ಮಾತ್ರೆಯನ್ನು ಇಟ್ಟುಬಿಡಿ. ವಿಶೇಷವಾಗಿ ಜಿರಳೆಗಳು ಹೆಚ್ಚಾಗಿ ಬರುವ ಪ್ರದೇಶಗಳಲ್ಲಿ. ಹೀಗೆ ಮಾಡುವುದರಿಂದ ಅಲ್ಲಿಂದ ಜಿರಳೆಗಳು ಓಡಿ ಹೋಗುತ್ತವೆ.

ಕರ್ಪೂರ ಸ್ಪ್ರೇ: ಕರ್ಪೂರವನ್ನು ಚೆನ್ನಾಗಿ ಪುಡಿಮಾಡಿ ಪುಡಿ ಮಾಡಿ. ಈಗ, ಕರ್ಪೂರ ಪುಡಿ ಮತ್ತು ಲವಂಗವನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಕರ್ಪೂರ ಮತ್ತು ಲವಂಗ ನೀರಿನಲ್ಲಿ ಸಂಪೂರ್ಣವಾಗಿ ಕರಗುವಂತೆ 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಟ್ಟು. ಈ ಮಿಶ್ರಣವನ್ನು ಸೋಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ರಾತ್ರಿಯಲ್ಲಿ ಅಡುಗೆಮನೆಯ ಸಿಂಕ್ ಬಳಿ, ಡ್ರೈನ್ ಬಳಿ, ಮಲಗುವ ಕೋಣೆಯ ಮೂಲೆಗಳಲ್ಲಿ, ಗ್ಯಾಸ್ ಸ್ಟೌವ್ ಹಿಂದೆ ಮತ್ತು ಕಸದ ಬುಟ್ಟಿಯ ಸುತ್ತಲೂ ಈ ಸ್ಪ್ರೇ ಅನ್ನು ಸಿಂಪಡಿಸಿ.

ನೆಲ ಒರೆಸುವ ನೀರಿಗೆ ಕರ್ಪೂರ ಸೇರಿಸಿ: ನೆಲ ಒರೆಸುವ ನೀರಿಗೆ ಕರ್ಪೂರವನ್ನು ಸೇರಿಸಿ, ಅದರಲ್ಲಿ ನೆಲವನ್ನು ಒರೆಸುವುದರಿಂದ ಜಿರಳೆಗಳನ್ನು ದೂರವಿಡಲು ಸಹಾಯವಾಗುತ್ತದೆ. ಇದು ಜಿರಳೆಗಳು ಮತ್ತು ಇತರ ಸಣ್ಣ ಕೀಟಗಳನ್ನು ಸಹ ದೂರವಿಡುತ್ತದೆ.

ಇದನ್ನೂ ಓದಿ: ಹಲ್ಲುಗಳನ್ನು ಸ್ಟ್ರಾಂಗ್‌ ಆಗಿರಿಸಲು ಸಹಕಾರಿ ಈ ನ್ಯಾಚುರಲ್‌ ಟೂತ್‌ಪೇಸ್ಟ್‌; ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು

ಜಿರಳೆಗಳನ್ನು ತೊಡೆದು ಹಾಕಲು ಮನೆಮದ್ದುಗಳು:

  • ಜಿರಳೆಗಳನ್ನು ತೊಡೆದುಹಾಕಲು, ಅಡಿಗೆ ಸೋಡಾ ಮತ್ತು ಪುಡಿ ಸಕ್ಕರೆಯನ್ನು ಬೆರೆಸಿ ಜಿರಳೆಗಳು ಹೆಚ್ಚಾಗಿ ಕಂಡುಬರುವ ಮನೆಯ ಪ್ರದೇಶಗಳಲ್ಲಿ ಹರಡಿ. ಈ ಪುಡಿಯನ್ನು ತಿಂದ ತಕ್ಷಣ ಜಿರಳೆಗಳು ಸಾಯುತ್ತವೆ.
  • ಬೇವಿನ ಪುಡಿಯು ಜಿರಳೆಗಳನ್ನು ಓಡಿಸುವಲ್ಲಿಯೂ ಪ್ರಯೋಜನಕಾರಿ.
  • ಜಿರಳೆಗಳಿರುವ ಪ್ರದೇಶಕ್ಕೆ  ಬೋರಿಕ್ ಆಮ್ಲವನ್ನು ಸಿಂಪಡಿಸುವ ಮೂಲಕವೂ ಅವುಗಳನ್ನು ಓಡಿಸಬಹುದು.
  • ಜಿರಳೆಗಳು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯಲು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us