ಆರೋಗ್ಯಕರ ಉಪಾಹಾರಕ್ಕಾಗಿ ಈ ಅತ್ಯುತ್ತಮ ಓಟ್ಸ್ ಬಳಸಿ!
ಓಟ್ಸ್ ಪ್ರೋಟೀನ್, ಫೈಬರ್, ಖನಿಜಗಳು ಮತ್ತು ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ, ಇದು ನಾವು ಆರೋಗ್ಯವಾಗಿರಲು ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಹಾಗಾದರೆ ಬೆಳಗಿನ ಉಪಾಹಾರಕ್ಕಾಗಿ ಆರೋಗ್ಯಕರ ಓಟ್ಸ್ ನ ಪಾಕವಿಧಾನಗಳನ್ನು ಮಾಡಲು ನೀವು ಬಳಸಬಹುದಾದ ಅತ್ಯುತ್ತಮ ಓಟ್ಸ್ ಯಾವುದು? ಯಾವ ಓಟ್ಸ್ ಉತ್ತಮ? ಯಾವುದನ್ನೂ ಬಳಸಬೇಕು? ಎಂಬುದಕ್ಕೆ ಇಲ್ಲಿದೆ ಮಾಹಿತಿ.
ನೀವು ಆರೋಗ್ಯಕರ ಉಪಾಹಾರ ಆಯ್ಕೆಗಳನ್ನು ಹುಡುಕುತ್ತಿದ್ದರೆ ಹೆಚ್ಚಿನ ಪ್ರೋಟೀನ್ ಹೊಂದಿರುವ ಓಟ್ಸ್ ಅನ್ನು ಪ್ರಯತ್ನಿಸುವುದಕ್ಕಿಂತ ಉತ್ತಮವಾದುದು ಬೇರೆ ಯಾವುದು ಇಲ್ಲ. ಓಟ್ಸ್ ಪ್ರೋಟೀನ್, ಫೈಬರ್, ಖನಿಜಗಳು ಮತ್ತು ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ, ಇದು ನಾವು ಆರೋಗ್ಯವಾಗಿರಲು ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ. ಹಾಗಾದರೆ ಬೆಳಗಿನ ಉಪಾಹಾರಕ್ಕಾಗಿ ಆರೋಗ್ಯಕರ ಓಟ್ಸ್ ನ ಪಾಕವಿಧಾನಗಳನ್ನು ಮಾಡಲು ನೀವು ಬಳಸಬಹುದಾದ ಅತ್ಯುತ್ತಮ ಓಟ್ಸ್ ಯಾವುದು? ಯಾವ ಓಟ್ಸ್ ಉತ್ತಮ? ಯಾವುದನ್ನೂ ಬಳಸಬೇಕು? ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಬೆಳಗಿನ ಉಪಾಹಾರಕ್ಕೆ ಓಟ್ಸ್ ಏಕೆ ಆರೋಗ್ಯಕರ?
ಓಟ್ಸ್ ಕಾರ್ಬೋಹೈಡ್ರೇಟ್ಗಳು, ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಪೌಷ್ಠಿಕ ಆಹಾರವಾಗಿದ್ದು, ಇದು ಅತ್ಯುತ್ತಮ ಉಪಾಹಾರ ಆಯ್ಕೆಯೂ ಆಗಿದೆ. ಇತರ ಧಾನ್ಯಗಳಿಗೆ ಹೋಲಿಸಿದರೆ, ಅವು ಹೆಚ್ಚಿನ ಮಟ್ಟದ ಪ್ರೋಟೀನ್ ಮತ್ತು ಬೇಗ ಕರಗುವ ಫೈಬರ್ ಅನ್ನು ಸಹ ಹೊಂದಿವೆ. ಓಟ್ಸ್ ಅವೆನಾಂಥ್ರಮೈಡ್ಸ್ ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕಗಳು ಮತ್ತು ಕರಗುವ ಫೈಬರ್ ಬೀಟಾ- ಗ್ಲುಕಾನ್ ನಂತಹ ವಿಶೇಷ ಪದಾರ್ಥಗಳನ್ನು ಒಳಗೊಂಡಿದೆ, ಹಾಗಾಗಿ ಇದು ತುಂಬಾ ಆರೋಗ್ಯಕರವಾಗಿದೆ ಎಂದರೆ ತಪ್ಪಾಗಲಾರದು.
ಓಟ್ಸ್ನ ಆರೋಗ್ಯ ಪ್ರಯೋಜನಗಳು ಯಾವುವು?
ಬೆಳಗಿನ ಉಪಾಹಾರಕ್ಕೆ ಓಟ್ಸ್ ಸೇವನೆಯು ನಿಮಗೆ ಕಡಿಮೆ ತಿನ್ನಲು ಸಹಾಯ ಮಾಡುತ್ತದೆ, ಇದರಿಂದಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಒಂದು ಕಪ್ ಓಟ್ಸ್ ನಲ್ಲಿ ಸುಮಾರು 4 ಗ್ರಾಂ ಫೈಬರ್, 28 ಗ್ರಾಂ ಕಾರ್ಬೋಹೈಡ್ರೇಟ್ ಗಳು, 5 ಗ್ರಾಂ ಪ್ರೋಟೀನ್ ಇರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುವುದು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು, ಕರುಳಿನ ಚಲನೆಯನ್ನು ಸುಧಾರಿಸುವುದು ಮತ್ತು ಹೊಟ್ಟೆ ತುಂಬಿದ ಭಾವನೆಗಳನ್ನು ವಿಸ್ತರಿಸುವುದರ ಜೊತೆಗೆ, ಹಲವಾರು ಸಕಾರಾತ್ಮಕ ಆರೋಗ್ಯ ಪರಿಣಾಮಗಳನ್ನು ಇದು ಹೊಂದಿದೆ.
ಬೆಳಗಿನ ಉಪಾಹಾರಕ್ಕೆ 5 ಅತ್ಯುತ್ತಮ ಪ್ರೋಟೀನ್ ಓಟ್ಸ್!
1. ರೋಲ್ಡ್ ಓಟ್ಸ್: ರೋಲ್ಡ್ ಓಟ್ಸ್ ಅನ್ನು ಸಾವಯವ ಕೃಷಿ ಭೂಮಿಗಳಲ್ಲಿ ಬೆಳೆಯಲಾಗುತ್ತದೆ ಮತ್ತು ರಾಸಾಯನಿಕಗಳು ಮತ್ತು ಗ್ಲುಟೆನ್ ನಿಂದ ಮುಕ್ತವಾಗಿರುತ್ತದೆ. ಈ ಓಟ್ಸ್ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಅಂಶವನ್ನು ಹೊಂದಿದೆ, ಆದ್ದರಿಂದ ತೂಕ ಹೆಚ್ಚಾಗುವುದಿಲ್ಲ. ಹಾಗಾಗಿ ನೀವು ಅವುಗಳನ್ನು ಆಗಾಗ ತಿನ್ನಬಹುದು. ಇದರಲ್ಲಿ ಬೀಟಾ- ಗ್ಲುಕಾನ್ ಫೈಬರ್ ಸಾಕಷ್ಟಿದ್ದು, ಇದು ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ.
2. ಗ್ಲುಟೆನ್ ಫ್ರೀ ಓಟ್ಸ್: ಈ ಓಟ್ಸ್ ನಿಮಗೆ ಊಟವನ್ನು ತಪ್ಪಿಸದೆ ನಿಮ್ಮ ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ಧಾನ್ಯದ ಓಟ್ಸ್ ನಲ್ಲಿ ಗ್ಲುಟೆನ್ ಇರುವುದಿಲ್ಲ. ಅವುಗಳ ಹೆಚ್ಚಿನ ಆಹಾರದ ಫೈಬರ್ ಅಂಶವು ತೂಕ ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ. ಹೆಚ್ಚುವರಿಯಾಗಿ, ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ನೀವು ಈ ಓಟ್ಸ್ ಅನ್ನು ಬಳಸಬಹುದು. ಇದು ಸ್ನಾಯುಗಳ ಬಲವನ್ನು ಸಹ ಹೆಚ್ಚಿಸುತ್ತದೆ.
3. ಸಫೊಲಾ ಓಟ್ಸ್: ಸಫೊಲಾ ಓಟ್ಸ್ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಸೇವಿಸುವ ಓಟ್ಸ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ಪ್ರತಿದಿನ ಬೆಳಿಗ್ಗೆ, ಈ ರೋಲ್ ಮಾಡಿದ ಓಟ್ಸ್ ತಿನ್ನುವುದರಿಂದ ನಿಮಗೆ ಬೇಗ ಆಯಾಸವಾಗುವುದಿಲ್ಲ. ಸೂಕ್ಷ್ಮ ಕಾಳುಗಳು ಹಾಲಿನಲ್ಲಿ ಸುಲಭವಾಗಿ ಕರಗುತ್ತವೆ. ಈ ಓಟ್ಸ್ ಬೇಯಿಸಿದ ನಂತರ, ಅದರ ಜೊತೆಗೆ ಹೆಚ್ಚು ಹೆಚ್ಚು ಹಣ್ಣು ಅಥವಾ ಸಿರಪ್ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: ಓಟ್ಸ್ ಮೀಲ್ ತೂಕ ನಷ್ಟಕ್ಕೆ ಮಾತ್ರವಲ್ಲ, ಚರ್ಮದ ರಕ್ಷಣೆಗೂ ಉತ್ತಮ ಆಯ್ಕೆ..!
4. ಕ್ವೇಕರ್ ಓಟ್ಸ್: ಕ್ವೇಕರ್ ಓಟ್ಸ್ ಪೌಷ್ಟಿಕ ಉಪಾಹಾರವಾಗಿದ್ದು, ಇದು ತೂಕ ನಿರ್ವಹಣೆ ಮತ್ತು ಕೊಲೆಸ್ಟ್ರಾಲ್ ಕಡಿತ ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳಿಗೆ ಕಾರಣವಾಗುತ್ತದೆ. ಈ ಓಟ್ಸ್ ಎರಡು ಪಟ್ಟು ಹೆಚ್ಚು ಪ್ರೋಟೀನ್ ಮತ್ತು ಫೈಬರ್ ಅನ್ನು ಸಹ ಒದಗಿಸುತ್ತದೆ. ಇದು ನೈಸರ್ಗಿಕ ಪರಿಮಳವನ್ನು ಹೊಂದಿದ್ದರೂ ಕೂಡ, ನೀವು ನಿಮ್ಮ ಆದ್ಯತೆಯ ಬೀಜಗಳು, ಹಣ್ಣುಗಳು ಅಥವಾ ಮಸಾಲಾಗಳನ್ನು ಸೇರಿಸಬಹುದು.
5. ವೈಟ್ ಓಟ್ಸ್: ಇದು ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಪ್ರತಿದಿನ ಬೆಳಿಗ್ಗೆ ಸರಿಯಾದ ಶಕ್ತಿ ಪಡೆಯಲು ಇದು ಉತ್ತಮ ವಿಧಾನವಾಗಿದೆ. ಈ ಓಟ್ಸ್ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಆದರೆ ಇವುಗಳನ್ನು ಬಳಸುವ ಮೊದಲು ತಜ್ಞರ ಅಭಿಪ್ರಾಯ ಕೇಳಿ ಆ ಬಳಿಕವೇ ಉಪಯೋಗಿಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ