Valentine’s Day : ಪ್ರೀತಿಯ ಕಡೆಗೆ ಮೊದಲ ಹೆಜ್ಜೆ

Valentine's Day : ನನ್ನ ಕಥೆಯನ್ನೇ ಹೇಳುವುದಾದರೆ ನನಗೆ ಸುಮಾರು 17ರ ಹದಿಹರೆಯದ ವಯಸ್ಸು ಸರಿ-ತಪ್ಪುಗಳನ್ನು ಗುರುತಿಸುವ ಸಂಪೂರ್ಣ ಹಿಡಿತವಿಲ್ಲದ ಕ್ಷಣ ಜೀವನವೆಂಬ, ನದಿಯಲ್ಲಿ ಹಾಯಾಗಿ ತೇಲುವ ಸಮಯದಲ್ಲಿ ಪ್ರೀತಿಯ ಮಾಯಾಲೋಕದ ಸುಳಿಗೆ ಸಿಲುಕಿ ಪ್ರೀತಿಯ ಹಾಳ ನೋಡುವ ಆಸೆ ಆಯಿತು. ಆ ಕ್ಷಣ ಕಣ್ಮುಚ್ಚಿದರೆ ಮನಸ್ಸು ಕದ್ದ ಚೋರನನ್ನು ಬಿಟ್ಟು ಯಾರೂ ಬರುತ್ತಿರಲಿಲ್ಲ.

Valentines Day : ಪ್ರೀತಿಯ ಕಡೆಗೆ ಮೊದಲ ಹೆಜ್ಜೆ
ಸಾಂದರ್ಭಿಕ ಚಿತ್ರ
Edited By:

Updated on: Feb 14, 2022 | 2:44 PM

ನಂಬಿಕೆಯ ಇನ್ನೊಂದು ಹೆಸರೇ ಪ್ರೀತಿ ಎಂದರೆ ತಪ್ಪಾಗದು. ಸಹನೆ ,ತಾಳ್ಮೆ ,ಕೋಪ, ಜಗಳ-ಮುನಿಸುಗಳಿಗೆ ಪ್ರೀತಿ ತೆರೆದಿಟ್ಟ ಅಂಚೆ. ಗೊತ್ತು ಗೊತ್ತಿಲ್ಲದೆಯೋ ಪ್ರೀತಿಯ ಸೆಳೆತಕ್ಕೆ ಸರಿಯಾಗಿ ಪ್ರೇಮದ ಜೈಲಿನಲ್ಲಿ ಹಾಯಾಗಿ ಇರಲು ಬಯಸುವ ವಯಸ್ಸು ನಮ್ಮದು. ಪ್ರೀತಿಯ ಜೇನಾಗಿ ಮಕರಂದವನ್ನು ಸವಿಯುವ ಆತಂಕ ಸಹಜ. ಪ್ರೇಮಿಗಳಿಗೆ ಹಕ್ಕಿಯಂತೆ ಆಕಾಶದಂತಿರುವ ಪ್ರೀತಿಯನ್ನು ಸುತ್ತುವ ತವಕ. ನನ್ನ ಕಥೆಯನ್ನೇ ಹೇಳುವುದಾದರೆ ನನಗೆ ಸುಮಾರು 17ರ ಹದಿಹರೆಯದ ವಯಸ್ಸು ಸರಿ-ತಪ್ಪುಗಳನ್ನು ಗುರುತಿಸುವ ಸಂಪೂರ್ಣ ಹಿಡಿತವಿಲ್ಲದ ಕ್ಷಣ ಜೀವನವೆಂಬ, ನದಿಯಲ್ಲಿ ಹಾಯಾಗಿ ತೇಲುವ ಸಮಯದಲ್ಲಿ ಪ್ರೀತಿಯ ಮಾಯಾಲೋಕದ ಸುಳಿಗೆ ಸಿಲುಕಿ ಪ್ರೀತಿಯ ಹಾಳ ನೋಡುವ ಆಸೆ ಆಯಿತು. ಆ ಕ್ಷಣ ಕಣ್ಮುಚ್ಚಿದರೆ ಮನಸ್ಸು ಕದ್ದ ಚೋರನನ್ನು ಬಿಟ್ಟು ಯಾರೂ ಬರುತ್ತಿರಲಿಲ್ಲ. ಮನಸ್ಸಿನಲ್ಲಿ ಭಯ, ನಾನು ಏನು ಮಾಡುತ್ತಿರುವೆ ಎಂಬ ಪ್ರಶ್ನೆ , ಮನೆಯವರ ಪ್ರತಿಕ್ರಿಯೆಯ ಚಿಂತೆ, ಇದರ ಮಧ್ಯೆ ನನ್ನನ್ನು ಪ್ರೇಮದ ಸೆರೆಗೆ ಸೆಳೆದ ಚೋರನ ತುಂಟಾಟ, ಪ್ರೀತಿ, ನನ್ನ ಮನಸ್ಸನ್ನು ಸಮಾಧಾನ ಗೊಳಿಸುತ್ತಿತು.

ಹೀಗೆ ನಾವಿಬ್ಬರೂ  ಎಷ್ಟು ದಿನ ಇರಬಲ್ಲೆವು, ಎಲ್ಲ ಪ್ರೇಮಕಥೆಗಳಗೆ ನಿಷ್ಕಲ್ಮಶವಾದ ಪ್ರೀತಿಗೆ ವಿರಾಮ ಎಂಬ ಕೆಟ್ಟ ಅಧ್ಯಾಯ ಮಧ್ಯದಲ್ಲೆ ಬರಬಹುದು ಎಂದು ಯೋಚಿಸುವ ಸಂಧರ್ಭದಲ್ಲಿ, ಮನ ಕದ್ದವನ ಮುಗುಳುನಗೆ, ಅವನ ದೃಢವಾದ ಮಾತುಗಳು, ಅವನ ಗುರಿ, ನನ್ನ ಮನಸ್ಸಿನಲ್ಲಿ ನಂಬಿಕೆ ಮೂಡಿಸಿತು ಇವೆಲ್ಲ ಪ್ರಶ್ನೆಗಳಿಗೂ ಅಲ್ಪ ವಿರಾಮ ಹಾಕಿತು. ಇಂದಿಗೂ ಎಂದೆಂದಿಗೂ ಜೊತೆಗಿರುತ್ತೇವೆ ಎಂಬ ಆತ್ಮವಿಶ್ವಾಸ ಮೂಡಿತು, ಈ ಕ್ಷಣದವರೆಗೂ ಪ್ರೀತಿಯ ಅಮಲಿನಲ್ಲಿ ತೇಲುತ್ತಾ ಜೀವನದ ರೈಲುಬಂಡಿಯಲ್ಲಿ ಪ್ರಯಾಣಿಸುತ್ತಲೆ ಇದ್ದೇವಿ, ಇದೇ ಅಲ್ಲವೇ ಎರಡಕ್ಷರ ಪ್ರೀತಿಗಿರುವ ಶಕ್ತಿ.

ವಿನೀತ ಸುರೇಶ್
ಮೈಸೂರು

Published On - 6:30 am, Mon, 14 February 22