AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s day : ಬಣ್ಣ ಬಣ್ಣದ ಸಂಚಿಕೆಯಂತೆ ನನ್ನ ಬದುಕಿಗೆ ಮತ್ತೊಮ್ಮೆ ಬಾ..

Valentine's day : ನಿನಗೆ 'ತಲೆಬರಹ' ಕಟ್ಟುವ ಅವಕಾಶ ನನ್ನೀ 'ಹಣೆಬರಹ'ಕ್ಕೆ ಇಲ್ಲದಿದ್ದರೆನಂತೆ, ನಿನ್ನ ಜೊತೆ 'ಕಿರು-ಸಂದರ್ಶನ'ವನ್ನಾದರು ನಡೆಸಲು ಅವಕಾಶ ಪಡೆದೆನಲ್ಲ ನಾನೇ ಧನ್ಯಾ.. ಅದಕ್ಕೆ ಆ ದೇವನಿಗೊಂದು ಥ್ಯಾಂಕ್ಸ್.. ಇತ್ತೀಚೆಗೇ ನನ್ನ ಬದುಕಿನಲ್ಲಿ ಕೆಲವೊಂದು ಹುಡುಗಿಯರು 'ಸಾಪ್ತಾಹಿಕ', 'ಪಾಕ್ಷಿಕ'ದಂತೆ ಬರಲು ಪ್ರಯತ್ನಿಸುತ್ತಿದ್ದಾರೆ, ಅದರೆ ಅವಾರರು ನೀನ್ನಷ್ಟು ಕಾಡುತ್ತಿಲ್ಲ..ಮೋಹಿಸುತ್ತಲೂ ಇಲ್ಲ..ಮನಸ್ಸೆಲ್ಲ ನೀನೇ ತುಂಬಿರುವಾಗ ಅವರಿಗೆಲ್ಲಿದೇ ಜಾಗ? ಸುಳ್ಳೆನಿಸಿದರೆ, ಅನುಮಾನವಿದ್ದರೆ, ನೀನೇ ನನ್ನ ಹೃದಯದ ಅಂತರಾಳಕ್ಕೆ ಭೇಟಿ ಕೊಟ್ಟು 'ಪ್ರತ್ಯಕ್ಷ ವರದಿನೋ'.. 'ತನಿಖಾ ಪತ್ರಿಕೋದ್ಯಮನೋ'.. ಮಾಡಿನೋಡು.. ಅಲ್ಲೆಲ್ಲ ನೀನದೇ 'ಚಿತ್ರ', 'ಶೀರ್ಷಿಕೆ ' ಜಾಹೀರಾತು'ಗಳು ತುಂಬಿವೇ.

Valentine's day :  ಬಣ್ಣ ಬಣ್ಣದ ಸಂಚಿಕೆಯಂತೆ ನನ್ನ ಬದುಕಿಗೆ ಮತ್ತೊಮ್ಮೆ ಬಾ..
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 14, 2022 | 8:15 AM

Share

ಹೇ..ಹೃದಯವಾಸಿ..ನೀನು ನನ್ನ ಬದುಕಲ್ಲಿ ಹೊಸ ಪತ್ರಿಕೆಯಂತೆ ಬಂದೆ. ಓಲುಮೆಯೆಂಬ ಹೊಸ ಸುದ್ದಿಯೊಂದಿಗೆ, ನಲುಮೆಯೆಂಬ ಕಲರ್ಫುಲ್ ಹಾಳೆಗಳೊಂದಿಗೆ, ಅನುರಾಗ ಎಂಬ ಅಕ್ಷರಗಳನ್ನು ಹೊತ್ತು ನನ್ನ ಹೃದಯ ಎಂಬ ಮಾರುಕಟ್ಟೆಗೆ ಲಗ್ಗೆಯಿಟ್ಟೆ. ನಾ ನಿನ್ನ ಮೊದಲ ಬಾರಿ ನೋಡಿದ ಕ್ಷಣ, ನೀ ನನಗೆ ಪ್ರೇಮನಿವೇದಿಸಿದ ಆ ಕ್ಷಣ..ವಾವ್ ನನ್ನ ‘ಅಂಕಣಬರಹ’ ಪತ್ರಿಕೆಯಲ್ಲಿ ಪ್ರಕಟವಾದಷ್ಟೇ ಖುಷಿಯಾಗಿತ್ತು ನನಗೆ. ಅದರೆ ಮರುದಿನವೆ ನೀ ನನ್ನ ಬಾಳಿನ ‘ದೈನಿಕ’ವಾಗಿರದೇ ಕೇವಲ ‘ವಿಶೇಷ ಸಂಚಿಕೆ’ ಮಾತ್ರ ಅಗಿರುವೇ ಎಂಬ ‘ಕಹಿಸತ್ಯ’ ತಿಳಿದಾಗ ಮನಸ್ಸು ಬಹಳಷ್ಟು ಮರಗಿತು. ನೀ ನನ್ನ ಬದುಕಿನ ‘ಸಂಪಾದಕೀಯ ಪುಟ’ವಾಗುತ್ತಿಯ ನಿನ್ನೊಂದಿಗೆ ಹತ್ತು-ಹಲವು ವಿಚಾರಗಳನ್ನು ಚರ್ಚಿಸಬಹುದೆಂದು ಕನಸು ಕಟ್ಟುಕೊಂಡಿದ್ದ ನನ್ನ ಕಣ್ಣುಗಳು ರೆಪ್ಪೆ ಮುಚ್ಚದಾದವು. ಹೃದಯವು ಸೂತ್ರ ಹರಿದ ಗಾಳಿಪಟದಂತೆ ದಿಕ್ಕೆ ಕಾಣದೆ ಹೊರಳಾಡಿತು. ಇರಲಿ ಬಿಡು ಅದು ವಿಧಿ ಲಿಖಿತ ದುಖಿಃಸಿ ಲಾಭವಿಲ್ಲ.

ನಿನಗೆ ‘ತಲೆಬರಹ’ ಕಟ್ಟುವ ಅವಕಾಶ ನನ್ನೀ ‘ಹಣೆಬರಹ’ಕ್ಕೆ ಇಲ್ಲದಿದ್ದರೆನಂತೆ, ನಿನ್ನ ಜೊತೆ ‘ಕಿರು-ಸಂದರ್ಶನ’ವನ್ನಾದರು ನಡೆಸಲು ಅವಕಾಶ ಪಡೆದೆನಲ್ಲ ನಾನೇ ಧನ್ಯಾ.. ಅದಕ್ಕೆ ಆ ದೇವನಿಗೊಂದು ಥ್ಯಾಂಕ್ಸ್.. ಇತ್ತೀಚೆಗೇ ನನ್ನ ಬದುಕಿನಲ್ಲಿ ಕೆಲವೊಂದು ಹುಡುಗಿಯರು ‘ಸಾಪ್ತಾಹಿಕ’, ‘ಪಾಕ್ಷಿಕ’ದಂತೆ ಬರಲು ಪ್ರಯತ್ನಿಸುತ್ತಿದ್ದಾರೆ, ಅದರೆ ಅವಾರರು ನೀನ್ನಷ್ಟು ಕಾಡುತ್ತಿಲ್ಲ..ಮೋಹಿಸುತ್ತಲೂ ಇಲ್ಲ..ಮನಸ್ಸೆಲ್ಲ ನೀನೇ ತುಂಬಿರುವಾಗ ಅವರಿಗೆಲ್ಲಿದೇ ಜಾಗ? ಸುಳ್ಳೆನಿಸಿದರೆ, ಅನುಮಾನವಿದ್ದರೆ, ನೀನೇ ನನ್ನ ಹೃದಯದ ಅಂತರಾಳಕ್ಕೆ ಭೇಟಿ ಕೊಟ್ಟು ‘ಪ್ರತ್ಯಕ್ಷ ವರದಿನೋ’.. ‘ತನಿಖಾ ಪತ್ರಿಕೋದ್ಯಮನೋ’.. ಮಾಡಿನೋಡು.. ಅಲ್ಲೆಲ್ಲ ನೀನದೇ ‘ಚಿತ್ರ’, ‘ಶೀರ್ಷಿಕೆ ‘ ಜಾಹೀರಾತು’ಗಳು ತುಂಬಿವೇ.

ಹೇಳೋದು ಮರೆತೆ, ನಿನ್ನ ಬಗ್ಗೆ ಪ್ರೇಮ ಕವನವೊಂದು ಬರೆಯವ ಅಸೆ.. ಆದರೆ ಪದಗಳು ಸಹಕರಿಸುತ್ತಿಲ್ಲ..ಭಾವನೆಗಳ ಮಳೆಗಾಲದಲ್ಲಿ ಶಬ್ಧಕೋಶಕ್ಕೆ ಭೀಕರ ಬರಗಾಲ.. ನನ್ನೊಂದಿಗೆ ಇರುವಷ್ಟು ದಿನ ನೀ ಕೊಡುವ ಪ್ರತಿ ‘ಬೈಟ್’ಗಳು ನನ್ನ ನೆನಪಿನ ಸ್ಮ್ರತಿಪಟದಲ್ಲಿ ಎಂದಿಗೂ ಮಾಸದು. ನೀ ಜೊತೆಗಿದ್ದರು, ಇಲ್ಲದಿದ್ದರು ನಿನ್ನ ನೆನಪಿನ ‘ನೋಟಿಫಿಕೆಶನ್’ಗಳು ಮನದಲ್ಲಿ ಸದಾ ‘ಬೆಲ್’ ಬಾರಿಸುತ್ತಲೆ ಇರುತ್ತವೆ.

ಕೊನೇ ಮಾತು ಗೆಳತಿ.. ಯಾವತ್ತಿದ್ದರು ನೀನೇ ನನ್ನ ಮನದ ‘ಮಾಲಕಿ’ ಕಂ ‘ಸಂಪಾದಕಿ’.. ಕಲರ್ಫುಲ್ ‘ಸಂಚಿಕೆ’ಯಂತೆ ಎಂದಾದರು ನೀ ನನ್ನ ಬಾಳಿಗೆ ಬರಲಿ ಎಂದು ಕಾಯುತ್ತಿರುವೇ.. ತಪ್ಪಾಗಿರುವ ‘ವಿಧಿಯಬರಹ’ವನ್ನು ‘ಪುನರ್ ಬರಹ’ಗೊಳಿಸು ಎಂದು.. ಆ ದೇವರಲ್ಲಿ ಬೇಡುತ್ತೀರುವೇ.. ಇಂತಿ ನೀನು ಕರವಂತೆ, ‘ಡುಮ್ಮ’..

ರೂಪೇಶ್ ಸುಮ್ಮನೆ 

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್