Valentine’s Day 2022 : ಅಪರಿಚಿತವಾದಂತಹ ಪರಿಚಯದ ಪ್ರೇಮ ಕಥೆ
ಅವರಿಬ್ಬರನ್ನು ಮಾತನಾಡಿಸಲು ಏನೋ ಒಂತರ ಮುಜುಗರ ಯಾಕೆಂದರೆ ಅವರು ನನಗೆ ಅಪರಿಚಿತರು. ಅದು ಅಲ್ಲದೆ ಅವರಿಬ್ಬರು ಕಾಲೇಜಿನ ಅಂತಿಮ ವರ್ಷದವರು. ಕಲರ್ ಡ್ರೆಸ್ ಇರುವಾಗ ಒಂದೇ ಬಣ್ಣದ ಬಟ್ಟೆ ಯನ್ನು ಧರಿಸುತ್ತಿದ್ದರು. ಒಬ್ಬರೊನೊಬ್ಬರು ತುಂಬಾ ನಂಬಿಕೊಂಡು ಅರ್ಥೈಸಿಕೊಂಡು ಇದ್ದರು. ಇದೆ ಅಲ್ವಾ ಪ್ರೀತಿ ಎಂದರೆ. ಎಂಥವಿರಾಗಾದರೂ ಇವರಿಬ್ಬರನ್ನು ನೋಡಿದಾಗ ಪ್ರೀತಿ ಮಾಡಬೇಕು ಎನ್ನಿಸುತ್ತಿದೆ. ಆದರೆ ಇವರಿಬ್ಬರನ್ನು ನೋಡಲು ಮನಸ್ಸಿಗೆ ಮುದ. ಅದೆಷ್ಟೋ ಸಲ ಜಗಳ ಆಡಿದ್ದನ್ನು ನೋಡಿದ್ದೇನೆ ಮತ್ತೆ ಕೈ ಕೈ ಹಿಡಿದುಕೊಂಡು ಹೋಗೋದು ನೋಡಿ ದೃಷ್ಟಿ ಕೂಡ ತೆಗೆದಿದ್ದೇನೆ.
ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂಬ ಉಪೇಂದ್ರರವರ ಸಿನಿಮಾದ ಮಾತಿನ ಹಾಗೆ ನಾನು ಕೂಡ ಆ ಮಾತು ನಿಜ ಎಂದುಕೊಂಡೆ . ಜೀವನದಲ್ಲಿ ಬದಲಾವಣೆ ಸಾಮಾನ್ಯ ಅನ್ನುವ ಹಾಗೆ ನನ್ನ ಚಿಂತನೆಯು ಬದಲಾಗಿದ್ದು ಇಲ್ಲೊಂದು ಸುಂದರ ಉದಾಹರಣೆಯನ್ನು ನೋಡಿ. ‘ಹುಚ್ಚುಕೋಡಿ ಮನಸ್ಸು ಅದು ಹದಿನಾರನೆಯ ವಯಸ್ಸು’ ಎಂಬಂತೆ ಈ ಹದಿಹರೆಯದ ವಯಸ್ಸೇ ಹೀಗೆ ಹುಚ್ಚುಕುದುರೆಯ ರೀತಿ ಮನಸ್ಸು ಓಡುತ್ತಿರುತ್ತದೆ,ನೂರಾರು ಕ್ರಶ್ಗಳು, ಪ್ರಪೋಸ್ ಗಳು ಬರುತ್ತವೆ.ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವವರಿದ್ದಾರೆ ಕೆಲವರು ಇದರ ಕಡೆ ತಲೆ ಕೆಡಿಸಿಕೊಳ್ಳದೆ ಇರುವವರೂ ಇರುತ್ತಾರೆ. ಇದೊಂದು ನಾ ಕಂಡಿರುವಂತ ಅಪರಿಚಿತದಲ್ಲಿ ಪರಿಚಯದ ಕಥೆ. ಅಂದು ಮಳೆಗಾಲದಲ್ಲಿ ಪ್ರಾರಂಭವಾದ ಕಾಲೇಜಿನ ಮೊದಲನೆಯ ದಿನ ,ಎಲ್ಲರಿಗೂ ಅವರವರ ಕ್ಲಾಸ್ ಗಳನ್ನು ಹುಡುಕುವ ತವಕ, ಹೊಸ ಹೊಸ ಆಗುವ ಗೆಳೆತನವದು. ಕಾಲೇಜಿನ ಯಾವುದೋ ಕ್ಲಾಸ್, ಗೊತ್ತಿಲ್ಲದ ಲೆಚ್ಚರ್ಸ್ ಗಳು ಪರಿಚಯ ಆಗುವ ದಿನವಿದು. ಆಗ ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳವ ಸಮಯ.ತರಗತಿಯಲ್ಲಿ ಕುಳಿತಾಗ ಕಿಟಕಿಯಿಂದ ಹೊರಗೆ ನೋಡಲು ಬಹಳಷ್ಟು ಖುಷಿ, ಯಾಕೆಂದರೆ ಮಳೆ ಸುರಿಯುತ್ತಿತ್ತು. ಜೊತೆಗೆ ತಂಗಾಳಿ ನನ್ನ ಕೂದಲನ್ನು ತೇಲಾಡಿಸುತ್ತಿತ್ತು. ಆ ಸಮಯದಲ್ಲಿ ಇಬ್ಬರು ಕುಳ್ಳ ,ಕುಳ್ಳಿ ಒಂದೇ ಛತ್ರಿಯ ಅಡಿ ಒಟ್ಟಿಗೆ ಹಾದು ಹೋದರು. ಗುಡ್ ಫ್ರೆಂಡ್ಸ್ ಇರಬೋದು ಎಂದು ಮನಸಲ್ಲೇ ಮಾತಾಡಿಕೊಂಡೆ. ಹೀಗೆ ಪ್ರತಿನಿತ್ಯವು ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರುವುದನ್ನು ನಾನು ನೋಡಿತ್ತಿರಲಿಲ್ಲ.ಊಟ ಒಟ್ಟಿಗೆ,ಲೈಬ್ರರಿ, ಕ್ಯಾಂಟೀನ್ ಗಲ್ಲಿ ಎಲ್ಲೆಲ್ಲೂ ಅವರಿಬ್ಬರನ್ನು ನೋಡುತ್ತಿದ್ದೆ. ಆಗ ತಿಳಿದ ವಿಷಯ ಅವರಿಬ್ಬರು ಪ್ರೇಮಿಗಳು ಎಂದು.
ಅವರಿಬ್ಬರನ್ನು ಮಾತನಾಡಿಸಲು ಏನೋ ಒಂತರ ಮುಜುಗರ ಯಾಕೆಂದರೆ ಅವರು ನನಗೆ ಅಪರಿಚಿತರು. ಅದು ಅಲ್ಲದೆ ಅವರಿಬ್ಬರು ಕಾಲೇಜಿನ ಅಂತಿಮ ವರ್ಷದವರು. ಕಲರ್ ಡ್ರೆಸ್ ಇರುವಾಗ ಒಂದೇ ಬಣ್ಣದ ಬಟ್ಟೆ ಯನ್ನು ಧರಿಸುತ್ತಿದ್ದರು. ಒಬ್ಬರೊನೊಬ್ಬರು ತುಂಬಾ ನಂಬಿಕೊಂಡು ಅರ್ಥೈಸಿಕೊಂಡು ಇದ್ದರು. ಇದೆ ಅಲ್ವಾ ಪ್ರೀತಿ ಎಂದರೆ. ಎಂಥವಿರಾಗಾದರೂ ಇವರಿಬ್ಬರನ್ನು ನೋಡಿದಾಗ ಪ್ರೀತಿ ಮಾಡಬೇಕು ಎನ್ನಿಸುತ್ತಿದೆ. ಆದರೆ ಇವರಿಬ್ಬರನ್ನು ನೋಡಲು ಮನಸ್ಸಿಗೆ ಮುದ. ಅದೆಷ್ಟೋ ಸಲ ಜಗಳ ಆಡಿದ್ದನ್ನು ನೋಡಿದ್ದೇನೆ ಮತ್ತೆ ಕೈ ಕೈ ಹಿಡಿದುಕೊಂಡು ಹೋಗೋದು ನೋಡಿ ದೃಷ್ಟಿ ಕೂಡ ತೆಗೆದಿದ್ದೇನೆ.
ಹಾಗೆ ನೋಡುತ್ತಾ ನೋಡುತ್ತಾ ಕಾಲೇಜಿನ ಕೊನೆಯ ದಿನ ಸೀನಿಯರ್ಸ್ ಗಳಿಗೆ ರಿಫ್ರೆಷ್ಮೆಂಟ್ ಡೇ ಬಂದೆ ಬಿಟ್ಟಿತು. ಆಗ ಜ್ಯೂನಿಯರ್ಸ್ ಸೀನಿಯರ್ಸ್ ಹೇಗೆಲ್ಲ ರೆಡಿ ಆಗಿದ್ದಾರೆ ಎಂದು ನೋಡುವ ತವಕ, ಆದರೆ ನಾನು ಮಾತ್ರ ಆ ಕುಳ್ಳ -ಕುಳ್ಳಿ ಪ್ರೇಮಿಗಳನ್ನು ಹುಡುಕುತ್ತಿದ್ದೆ. ಕಾಲೇಜಿನ ಮೂಲೆ ಮೂಲೆಯಲ್ಲಿ ಹುಡುಕಿದೆ ಎಲ್ಲಿ ಹುಡುಕಿದರೂ ಇವರಿಬ್ಬರನ್ನು ನಾ ಕಾಣೆ. ಕ್ಯಾಂಟೀನ್, ಪಾರ್ಕ್, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸೀನಿಯರ್ಸ್ ಗುಂಪುಗಳನ್ನೆಲ್ಲ ಹುಡುಕಿದೆ ಎಲ್ಲು ಕಾಣದೆ ಸಪ್ಪೆ ಮೋರೆಯನ್ನು ಕ್ಲಾಸ್ ಅತ್ತ ಕಾಲ್ಕಿತ್ತೆ. ಅಷ್ಟರಲ್ಲಿ ಒಂದು ದಪಾರ್ಟ್ಮೆಂಟ್ ನಲ್ಲಿ ತನ್ನ ಲೆಚ್ಚರ್ಸ್ ಗಳೊಟ್ಟಿಗೆ ಅವರಿಬ್ಬರು ಪ್ರೇಮಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಒಮ್ಮೆಲೆ ನನ್ನ ಸಪ್ಪೆ ಮೂರೆಯು ಖುಷಿಯೊಳಗೀಡಾಯಿತು. ಹುಡುಗ ಪಂಚೆ ಶರ್ಟ್ ,ಹುಡುಗಿ ಸೀರಿಯನ್ನು ತೊಟ್ಟಿದ್ದಳು. ಇಬ್ಬರು ಕೂಡ ಒಂದೇ ಬಣ್ಣದ ಬಟ್ಟೆಯನ್ನು ಧರಿಸಿ ನೋಡಲು ವಧು-ವರನಂತೆ ಕಾಣುತ್ತಿದ್ದರು. ಏನಾದ್ರು ಆಗಲಿ ಇವತ್ತು ಮಾತ್ರ ಅವರಿಬ್ಬರನ್ನು ಮಾತನಾಡಿಸಲೇ ಬೇಕು ಎಂದು ನಿರ್ಧರಿಸಿ, ಅಲ್ಲೇ ನಿಂತೆ. ಅವರಿಬ್ಬರು ಡಿಪಾರ್ಟ್ಮಮೆಂಟ್ ಇಂದ ಹೊರಬಂದ ಕೂಡಲೇ ಅಲ್ಲೇ ಇದ್ದ ನನಗೆ ಇಬ್ಬರು ನಗೆ ಕೊಟ್ಟರು. ನನಗೆ ಬಹಳಷ್ಟು ಸಂತಸವಾಗಿ ನಗಾಡಿ, ಸೂಪರ್ ಕಾಣುತ್ತಿದ್ದಿರ ಇಬ್ಬರು , ಎಂದು ಹೇಳಿ ದೃಷ್ಟಿ ತೆಗೆದೆ. ಅವರು ಥ್ಯಾಂಕ್ ಯು ಪುಟ್ಟ ಎಂದು ನಗು ಕೊಟ್ಟು ಅಲ್ಲಿಂದ ತೆರಳಿದರು. ಅಂದು ನನಗೆ ದೊಡ್ಡ ಅವಾರ್ಡ್ ಅನ್ನೇ ತೆಗೆದುಕೊಂಡ ರೀತಿಯಲ್ಲಿ ಸಂತೋಷವಾಯಿತು. ನನ್ನ ಗೆಳತಿಯಲ್ಲೂ ಪುಳಕದಿಂದ ,ಸಂತಸದಿಂದ ಕೊನೆಗೂ ಮಾತನಾಡಿಸೇಬಿಟ್ಟೆ ಎಂದು ಹೇಳಿದೆ. ಇದು ಒಂದು ರೀತಿ ನಂಗೆ ಹುಚ್ಚು ಅಂತ ಹೇಳಿದ್ದರು ತಪ್ಪಾಗೋಲ್ಲ.
ಕೊನೆಗೂ ನಮ್ಮ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಬೀಳ್ಕೊಡುಗೆಯನ್ನು ಕೊಡುವ ದಿನ ಆಯಿತು. ಅಂದು ಸಂಜೆ ಆ ಅಪರಿಚಿತವಾದ ಪರಿಚಯದ ಜೋಡಿಗೆ ‘ಆಲ್ ದ ಬೆಸ್ಟ್ ಫಾರ್ ಯು ವರ್ ಫ್ಯೂಚರ್’ಎಂದು ಹೇಳಿ ಮುಗುಳ್ನಗುತ್ತ ಈಚೆ ಬರಬೇಕಾದರೆ ನನಗೆ ತಿಳಿಯದಂತೆ ಕಣ್ಣಂಚು ಒದ್ದೆ ಆಗಿತ್ತು. ಆ ನನ್ನ ಫೇವರಟ್ ಜೋಡಿ ಎಲ್ಲಿದ್ದಾರೆಂದು ಎಂದು ಗೊತ್ತಿಲ್ಲ, ಹೆಸರಂತೂ ಮೊದಲೇ ಗೊತ್ತಿಲ್ಲ ಬಿಡಿ. ನಾನಾಗ ಅವರನ್ನು ನೋಡಿದಾಗ ಪಡುತಿದ್ದ ಖುಷಿಯನ್ನು ನೆನೆಸಿಕೊಂಡರೆ ಅಯ್ಯೋ ಎಂಥ ಹುಚ್ಚಿ ಎಂದು ನನಗೆ ನಗು ಬರುತ್ತದೆ. ಈಗ ಸಾಮಾನ್ಯ ಜೋಡಿಯನ್ನು ನಾನೇಕೆ ಸೆಲೆಬ್ರಿಟಿಯ ಹಾಗೆ ಕಾಣುತ್ತಿದ್ದೆ ಎಂದು ಇಂದಿಗೂ ಗೊತ್ತಾಗುತ್ತಿಲ್ಲ. ಇರ್ಲಿ ಬಿಡಿ, ಅವರು ಎಲ್ಲಾದರೂ ಇರಲಿ, ಹೇಗಾದರೂ ಇರಲಿ ಜೀವನದಲ್ಲಿ ಒಟ್ಟಾಗಿ ಸಂತೋಷದಿಂದ ಬಾಳಲಿ ಎಂದು ದೇವರಲ್ಲಿ ಕೇಳುತ್ತೇನೆ. ನೀವು ಕೂಡ ಕೇಳಿ,ಹಾರೈಸಿ.
ಹರ್ಷಿತ ಹೆಬ್ಬಾರ್. ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಕಾಲೇಜು.ಉಜಿರೆ.