AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s day : ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ

Valentine's day : ನಮ್ಮ ಬಸವನಗುಡಿ ಬ್ರಾಂಚ್ ನ ನಿಷ್ಠಾವಂತ ಉದ್ಯೋಗಿ ಶ್ಯಾಮ್ ರವರು ಆಕ್ಸಿಡೆಂಟ್‌ನಿಂದಾಗಿ ನಮ್ಮೆಲ್ಲರನ್ನು ಅಗಲಿದ್ದಾರೆ" ಎಂದು ಹೇಳಿ ಅವರ ಕೈಯಲ್ಲಿದ್ದ ದಿನಪತ್ರಿಕೆಯೊಂದನ್ನು ತೋರಿಸಿದರು. ಅಡಿಯಿಂದ ಮುಡಿಯವರೆಗಿನ ನನ್ನ ರಕ್ತಸಂಚಾರ ನಿಂತಂತೆ ಭಾಸವಾಯ್ತು. ಯಾರಲ್ಲಿ ನನ್ನ ಪ್ರೇಮನಿವೇದನೆ ಮಾಡಬೇಕೇಂದುಕೊಂಡಿದ್ದೆನೋ ಅದೇ ವ್ಯಕ್ತಿಯ ಫೋಟೋವನ್ನು ನಾನು ಕಂಡದ್ದು. ಸತ್ಯವನ್ನು ಅರಗಿಸಿಕೊಳ್ಳಲಾಗದೆಯೇ ಅಲ್ಲಿಯೇ ಕುಸಿದು ಬಿದ್ದೆ. ಪ್ರೀತಿಯ ಸಂಕೇತವಾಗಿ ಅವನಿಗೆ ಮದುವೆಯ ಮಾಲೆ ಹಾಕಬೇಕಾಗಿದ್ದ ನಾನು, ಅವನ ಶವಕ್ಕೆ ಮಾಲೆ ಹಾಕುವ ಸ್ಥಿತಿಗೆ ತಲುಪಿದ್ದೆ. ಕೊನೆಗೂ ಹೇಳಲಾಗದೆಯೇ ಅವನೊಂದಿಗೇ ಸತ್ತುಹೋದ ಈ ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ.

Valentine's day : ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 14, 2022 | 8:37 AM

Share

ಯಾಕಾದರೂ ಈ ಸೋಮವಾರ ಎನ್ನುವುದು ಬರುತ್ತೋ ಎಂದು ಮನಸ್ಸಿನಲ್ಲಿಯೇ ಶಾಪ ಹಾಕಿಕೊಳ್ಳುತ್ತ ಎದ್ದೇಳುವಷ್ಟರಲ್ಲಿ ಬೆಳಿಗ್ಗೆ 6.30 ಆಗಿತ್ತು. ಎಂದಿನ ದಿನಚರಿಯನ್ನೆಲ್ಲ ಮುಗಿಸಿ ಆಫೀಸಿಗೆ ಹೊರಡಲು ತಯಾರಾದೆ. ತಂದೆ ಇಲ್ಲದ ಕಾರಣ ಮನೆಯ ಹಿರಿಮಗಳಾದ ನನಗೆ ಜವಾಬ್ದಾರಿಯ ಮೂಟೆ ಚಿಕ್ಕ ವಯಸ್ಸಿಗೆ ಹೆಗಲೇರಿತ್ತು. ನನ್ನ ಆಸೆ ಕನಸೆಲ್ಲವನ್ನು ಎಂದು ಸಾಕಾರಗೊಳಿಸಿಕೊಳ್ಳುತ್ತೇನೊ ಎಂದು ಯೋಚಿಸುತ್ತಲೇ ನನ್ನ ಮಾಮೂಲಿ ಬಸ್‌ಸ್ಟಾಂಡ್‌ಗೆ ಬಂದು ತಲುಪಿದೆ. ಬೆಂಗಳೂರಿನ ಟ್ರಾಫಿಕ್, ಜನರ ಗೌಜು ಈ ಎಲ್ಲದರ ನಡುವೆಯೂ ನನ್ನ ಮನಸ್ಸು ನಿಶ್ಯಬ್ಧಕ್ಕೆ ಜಾರಿತು. ಜವಾಬ್ದಾರಿಗಳ ಹೊರೆಯಲ್ಲಿ ನನ್ನ ಜೀವನದ ಸುಂದರ ಕ್ಷಣಗಳನ್ನು ಅನುಭವಿಸಲೇ ಇಲ್ಲವಲ್ಲ ಎನ್ನುವುದು ಮನಸ್ಸಿನ ಆಳದಲ್ಲಿ ಕೆದಕಿ-ಕೆದಕಿ ನೋವುಂಟುಮಾಡಲಾರಂಭಿಸಿತು. ಏನಾದರೇನು ಇದೇ ನನ್ನ ಜೀವನದ ನೈಜತೆ ಎಂದು ಅರಿತು ಸುಮ್ಮನೆ ಬಸ್ಸಿನ ದಾರಿಯ ಕಡೆ ಗಮನಹರಿಸಿದೆ. ನನ್ನ ಎದುರು ಬದಿಯ ಬಸ್‌ಸ್ಟಾಂಡ್ ನಲ್ಲಿ ಕಣ್ಣುಹಾಯಿಸಿದರೆ, ಕಂಡದ್ದು ಹತ್ತಾರು ಜನರ ಮಧ್ಯೆಯೂ ಒಬ್ಬನೇ ಗೋಚರಿಸುವಂತಹ ನೀಳ ಕಾಯ, ಗುಂಗುರು ಕೂದಲು, ಯಾವುದೇ ಗಡಿಬಿಡಿಯಿಲ್ಲದೆ ಶಾಂತಚಿತ್ತದಿಂದ ಬಸ್ಸಿಗಾಗಿ ಕಾಯುತ್ತಿದ್ದ ಒಬ್ಬ ಯುವಕ. ಅದೇನೋ ಹೇಳ್ತಾರಲ್ಲ ಲವ್-ಎಟ್-ಫಸ್ಟ್ಸೈಟ್ ಅಂತ ಅದು ನನಗೆ ಅಂದೇ ಆಯಿತು. ಮತ್ತೆ-ಮತ್ತೆ ಅವನನ್ನೇ ನೋಡಬೇಕೆಂಬ ಹಂಬಲ, ಎಷ್ಟು ಬಾರಿ ತಿರುಗಿ ನೋಡಿದರೂ ಕಣ್ಣಿಗೆ ಹಬ್ಬದಂತೆ ಕಾಣುತ್ತಿದ್ದ. ನನ್ನ ಎಲ್ಲ ಚಿಂತೆಯನ್ನು ಅರೆಕ್ಷಣದಲ್ಲಿ ದೂರ ಮಾಡಿಸಿದ ಅವನ ಆಕಾರವೇ ಅಂತದ್ದು. ಯಾರನ್ನು ಬೇಕಾದರು ಸೆಳೆಯುವಂತದ್ದು.

ಹೀಗೆ ನೋಡು-ನೋಡುತ್ತಿದ್ದಂತೆ ನನ್ನ ನೋಟಕ್ಕೆ ಗೋಡೆ ಎಂಬಂತೆ ಅವನ ಬಸ್ ಬಂದು ನಿಂತಿತು. ಅವನು ಹತ್ತಿ ಹೊರಟೇ ಹೋದ. ಅವನಾವ ಯೋಚನೆಯಲ್ಲಿದ್ದನೋ ನನಗದು ತಿಳಿಯದು. ಆದರೆ ಅಂದಿನಿಂದ ಮಾತ್ರ ನನ್ನ ಯೋಚನೆ ಕೇವಲ ಅವನೆಡೆಗೆ ಇತ್ತು. ಸದಾ ನಾಲ್ಕು ಗೆರೆ ಬೀಳುತ್ತಿದ್ದ ನನ್ನ ಹಣೆಯಲ್ಲಿ ಅವನ ನೋಡಿದ ದಿನದಿಂದ ಮಂದಹಾಸ ಎನ್ನುವುದು ಮುಖವನ್ನೇ ಆವರಿಸಿಕೊಂಡಿತ್ತು. ಸೋಮವಾರ ಯಾಕಾಗುತ್ತದೋ ಎಂದು ಶಪಿಸುತ್ತಿದ್ದ ನನಗೆ ಸೋಮವಾರ ಯಾವಾಗಾಗುತ್ತದೋ ಎಂದು ಜಪಿಸುವ ದಿನಗಳು ಪ್ರಾರಂಭವಾದವು. ಅವನನ್ನು ನಿಂತಲ್ಲಿಯೇ ನೋಡುವುದು, ಅವನ ಬರುವಿಕೆಗೆ ರ‍್ಧಗಂಟೆ ಮುಂಚೆಯೇ ಹೋಗಿ ನಿಲ್ಲುವುದು, ಅವನನ್ನು ಮಾತನಾಡಿಸಲೇಬೇಕೆಂದು ಹೊರಟು ನಿಲ್ಲುವುದು, ಆಮೇಲೆ ಧರ‍್ಯ ಸಾಲದೇ ಹಿಂದಿರುಗುವುದು. ಹೀಗೆ ಇದು ನನ್ನ ದಿನಚರಿಯಾಗಿಹೋಗಿತ್ತು.

ಹೀಗಿರುವಾಗ ನನ್ನ ಹುಟ್ಟುಹಬ್ಬದಂದು ಏನಾದರಾಗಲಿ ಇವನನ್ನು ಮಾತನಾಡಿಸಿಯೇ ಸಿದ್ಧ ಎಂದುಕೊಂಡು ದೌಡಾಯಿಸಿ ಬಸ್‌ಸ್ಟಾಂಡ್ ಗೆ ಹೋದರೆ ಅಲ್ಲಿ ನನ್ನ ಆಸೆ ಹುಸಿಯಾಗಿತ್ತು. ನನ್ನ ಮನದರಸ ಆ ದಿನ ಬರಲೇ ಇಲ್ಲ. ನನ್ನ ಮನಸ್ಸಿನ ಸಂಕಟವನ್ನು ಯಾರಲ್ಲಿಯೂ ಹೇಳಲಾಗದೆ ನನ್ನ ಆಫೀಸಿನ ಕಡೆಗೆ ಪಯಣ ಬೆಳೆಸಿ, ಮರುದಿನ ಅವನ ಆಗಮನಕ್ಕೆ ಕಾದು ನಿಂತೆ. ಮತ್ತದೇ ಶೂನ್ಯ ಭಾವ. ಆ ದಿನವೂ ಅವನು ಬರಲೇ ಇಲ್ಲ. ‘ಎಲ್ಲದರೂ ಹೋಗಿರಬೇಕು, ಏನಾದರೂ ಕೆಲಸವಿರಬೇಕು’ ಎಂದು ನನ್ನನು ನಾನೇ ಸಮಾಧಾನ ಪಡಿಸಿಕೊಂಡರೂ, ಏನೋ ಒಂದು ರೀತಿಯ ಅಳಕು ಮನಸ್ಸಿನಾಳದಲ್ಲಿ.

ಹಾಗೆ ಸುಧಾರಿಸಿಕೊಂಡು ಆಫೀಸಿಗೆ ಹೋದರೆ ಅಲ್ಲಿ ನೀರವ ಮೌನ, ಅಲ್ಲಿ ಇಲ್ಲಿ ಗುಸು ಗುಸು ಮಾತು. ನಾನು ಏನಾಯಿತೆಂದು ನನ್ನ ಸಹೋದ್ಯೋಗಿಯ ಬಳಿ ಕೇಳಿದೆ. ಅದಕ್ಕವರು, ” ನಮ್ಮ ಬಸವನಗುಡಿ ಬ್ರಾಂಚ್ ನ ನಿಷ್ಠಾವಂತ ಉದ್ಯೋಗಿ ಶ್ಯಾಮ್ ರವರು ಆಕ್ಸಿಡೆಂಟ್‌ನಿಂದಾಗಿ ನಮ್ಮೆಲ್ಲರನ್ನು ಅಗಲಿದ್ದಾರೆ” ಎಂದು ಹೇಳಿ ಅವರ ಕೈಯಲ್ಲಿದ್ದ ದಿನಪತ್ರಿಕೆಯೊಂದನ್ನು ತೋರಿಸಿದರು. ಅಡಿಯಿಂದ ಮುಡಿಯವರೆಗಿನ ನನ್ನ ರಕ್ತಸಂಚಾರ ನಿಂತಂತೆ ಭಾಸವಾಯ್ತು. ಯಾರಲ್ಲಿ ನನ್ನ ಪ್ರೇಮನಿವೇದನೆ ಮಾಡಬೇಕೇಂದುಕೊಂಡಿದ್ದೆನೋ ಅದೇ ವ್ಯಕ್ತಿಯ ಫೋಟೋವನ್ನು ನಾನು ಕಂಡದ್ದು. ಸತ್ಯವನ್ನು ಅರಗಿಸಿಕೊಳ್ಳಲಾಗದೆಯೇ ಅಲ್ಲಿಯೇ ಕುಸಿದು ಬಿದ್ದೆ. ಪ್ರೀತಿಯ ಸಂಕೇತವಾಗಿ ಅವನಿಗೆ ಮದುವೆಯ ಮಾಲೆ ಹಾಕಬೇಕಾಗಿದ್ದ ನಾನು, ಅವನ ಶವಕ್ಕೆ ಮಾಲೆ ಹಾಕುವ ಸ್ಥಿತಿಗೆ ತಲುಪಿದ್ದೆ. ಕೊನೆಗೂ ಹೇಳಲಾಗದೆಯೇ ಅವನೊಂದಿಗೇ ಸತ್ತುಹೋದ ಈ ರಾಧೆ ಶ್ಯಾಮನ ಪ್ರೀತಿ ಇಂದಿಗೂ ಅಮರ.

ಭಾರತಿ ಹೆಗಡೆ

ಶಿರಸಿ

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ