ವಿನೆಗರ್ ಅಡುಗೆಗೆ ಮಾತ್ರವಲ್ಲ, ಕೂದಲ ಆರೈಕೆಗೂ ಉತ್ತಮ, ಇಲ್ಲಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 16, 2025 | 4:16 PM

ವಿನೆಗರ್ ನಮ್ಮ ಅಡುಗೆ ಮನೆಗೆ ಮಾತ್ರ ಸಿಮೀತವಲ್ಲ, ಅದು ಇತರ ವಿಚಾರಗಳಿಗೂ ಉಪಯುಕ್ತವಾಗಿದೆ. ವಿನೆಗರ್ ರಾಸಾಯನಿಕ ಕ್ಲೀನರ್ಗಳಿಗೆ ಅತ್ಯುತ್ತಮ. ವಿನೆಗರ್ ಸುಲಭವಾಗಿ ಗ್ರೀಸ್, ಗ್ರಿಮ್ ಮತ್ತು ಸೋಪ್ ಕಳೆಗಳನ್ನು ಬೇಗ ಕ್ಲಿನ್ ಮಾಡುತ್ತದೆ. ಒಂದು ಬಾಟಲಿಯಲ್ಲಿ ಸಮಾನ ಭಾಗಗಳ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ. ನಿಮ್ಮ ಅಡಿಗೆ, ಬಾತ್ರೂಮ್ ಮತ್ತು ಕಿಟಕಿಗಳಲ್ಲಿ ಕ್ಲಿನ್ ಮಾಡಬಹುದು. ಇನ್ನು ಅನೇಕ ವಿಚಾರಳಿಗೂ ಕೂಡ ಉಪಯೋಗವಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ವಿನೆಗರ್ ಅಡುಗೆಗೆ ಮಾತ್ರವಲ್ಲ, ಕೂದಲ ಆರೈಕೆಗೂ ಉತ್ತಮ, ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Follow us on

ವಿನೆಗರ್ ಹಲವು ಅಡುಗೆ ಬಳಸಲಾಗುತ್ತದೆ. ಇದನ್ನು ಸಲಾಡ್ ಡ್ರೆಸ್ಸಿಂಗ್, ಮ್ಯಾರಿನೇಡ್ ಮತ್ತು ಉಪ್ಪಿನಕಾಯಿ ಸೇರಿದಂತೆ ಹಲವಾರು ಭಕ್ಷ್ಯಗಳಿಗೆ ಬಳಸಲಾಗುತ್ತದೆ. ಇದು ಆಹಾರದ ರುಚಿಯ ಜತೆಗೆ ಅಡುಗೆ ಮನೆ ಪಾತ್ರಗೂ ಬಳಸಲಾಗುತ್ತದೆ. ಇದು ನಿಮ್ಮ ಮನೆಗೆ ಅದ್ಭುತಗಳನ್ನು ಮಾಡಬಹುದು. ಈ ಬಗ್ಗೆ ಇಲ್ಲಿದೆ ಮಾಹಿತಿ. ಇನ್ನು ಮುಂದಕ್ಕೆ ವಿನೆಗರ್ ಖರೀದಿಸುವಾಗ ಎರಡು ಪ್ಯಾಕೇಟ್​​ ಖರೀದಿಸಿ.

ಬಹುಪಯೋಗಿ ಕ್ಲೀನರ್ ; ವಿನೆಗರ್ ರಾಸಾಯನಿಕ ಕ್ಲೀನರ್ಗಳಿಗೆ ಅತ್ಯುತ್ತಮ. ವಿನೆಗರ್ ಸುಲಭವಾಗಿ ಗ್ರೀಸ್, ಗ್ರಿಮ್ ಮತ್ತು ಸೋಪ್ ಕಳೆಗಳನ್ನು ಬೇಗ ಕ್ಲಿನ್ ಮಾಡುತ್ತದೆ. ಒಂದು ಬಾಟಲಿಯಲ್ಲಿ ಸಮಾನ ಭಾಗಗಳ ವಿನೆಗರ್ ಮತ್ತು ನೀರನ್ನು ಮಿಶ್ರಣ ಮಾಡಿ. ನಿಮ್ಮ ಅಡಿಗೆ, ಬಾತ್ರೂಮ್ ಮತ್ತು ಕಿಟಕಿಗಳಲ್ಲಿ ಕ್ಲಿನ್ ಮಾಡಬಹುದು. ಅಮೃತಶಿಲೆ ವಸ್ತುಗಳು ಅಥವಾ ಪಾತ್ರೆಗಳಿಗೆ ಇದನ್ನು ಉಪಯೋಗಿಸಬೇಡಿ.

ವಾಸನೆ ಹೋಗಲಾಡಿಸುತ್ತದೆ: ಅಡುಗೆಮನೆಯಲ್ಲಿ ಬರುವ ಕೆಟ್​ಟ ವಾಸನೆಗಳನ್ನು ತೋಲಗಿಸುತ್ತದೆ. ಇದನ್ನು ರಾತ್ರಿ ಮಲಗುವಾಗ ಒಂದು ಬೌಲ್​​ನನಲ್ಲಿ ಹಾಕಿ, ರೂಮ್​​ನಲ್ಲಿ ಬರುವ ವಾಸನೆಗಳನ್ನು ತೆಗೆದುಹಾಕುತ್ತದೆ. ಫ್ರಿಜ್ ಅಥವಾ ಕಸದ ಬುಟ್ಟಿಯಲ್ಲೂ ಇದನ್ನು ಬಳಸಬಹುದು. ನಿಮ್ಮ ಬಟ್ಟೆಯಲ್ಲಿ ಬೆವರಿನ ವಾಸನೆ ಬಂದರು ಅದನ್ನು ಕೂಡ ಹೊಗಲಾಡಿಸಬಹುದು. ವಾಷಿಂಗ್ ಮೆಷಿನ್ ಒಳಗೆ ಇದನ್ನು ಸ್ವಲ್ಪ ಹಾಕಿ.

ಫ್ಯಾಬ್ರಿಕ್ ಸಾಫ್ಟ್ನರ್: ಲಾಂಡ್ರಿಗಳನ್ನು ಮೃದುಗೊಳಿಸಲು ಹಾಗೂ ವಿಶೇಷವಾಗಿ ಚಳಿಗಾಲದಲ್ಲಿ, ವಿನೆಗರ್ ಉತ್ತಮ ಆಯ್ಕೆಯಾಗಿದೆ. ಇದು ಕೇವಲ ವಾಸನೆ ಮತ್ತು ಡಿಟರ್ಜೆಂಟ್ ತೆಗೆದು ಹಾಕಲು ಮಾತ್ರವಲ್ಲ ಬಟ್ಟೆಗಳನ್ನು ಮೃದು ಮತ್ತು ಪ್ಲಶ್ ಆಗಿ ಬಿಡುತ್ತದೆ.ಸೂಕ್ಷ್ಮ ಚರ್ಮ ಹೊಂದಿರುವ ಜನರಿಗೆ ವಿಶೇಷವಾಗಿ ಉಪಯುಕ್ತವಾಗಿದೆ.

ತೋಟದ ಸ್ವಚ್ಛತೆಗೂ ಸಹಾಯಕ: ವಿನೆಗರ್ ನಿಮ್ಮ ತೋಟಗಾರಿಕೆ ಅಗತ್ಯಗಳಿಗಾಗಿ ನೈಸರ್ಗಿಕ ಮತ್ತು ವೆಚ್ಚ ಕಡಿಮೆ ಮಾಡುವ ಸಾಧನೆಗಳಾಗಿದೆ. ಇದು ಪರಿಣಾಮಕಾರಿ ಬುಷ್ ಕಿಲ್ಲರ್ ಆಗಿ ಕಾರ್ಯನಿರ್ವಹಿಸುತ್ತದೆ. ತೋಟದಲ್ಲಿರುವ ಅನಗತ್ಯ ಸಸ್ಯಗಳ ಮೇಲೆ ಕೂಡ ಇದನ್ನು ಹಾಕಬಹುದು. ಇದು ಸಾಕುಪ್ರಾಣಿ ಸ್ನೇಹಿ ಕೂಡ ಕೆಲಸ ಮಾಡುತ್ತದೆ.

ಕೂದಲು ಜಾಲಾಡುವಿಕೆ: ವಿನೆಗರ್, ವಿಶೇಷವಾಗಿ ಆಪಲ್ ಸೈಡರ್ ವಿನೆಗರ್ , ಅದ್ಭುತ ನೈಸರ್ಗಿಕ ಕೂದಲು ಆರೈಕೆಗೆ ಉತ್ತಮವಾಗಿದೆ. ವಿನೆಗರ್​ಗೆ ಸ್ವಲ್ಪ ನೀರು ಹಾಕಿ, ಶಾಂಪೂ ಹಾಕಿ ಕೂದಲನ್ನು ತೊಳೆಯಿರಿ. ಈ ಮಿಶ್ರಣವು ನಿಮ್ಮ ನೆತ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ, ತಲೆಹೊಟ್ಟು ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ