ಗ್ಯಾಸ್ ಸ್ಟೌವ್ ಬರ್ನರ್ ಸ್ವಚ್ಛಗೊಳಿಸುವುದೇ ಗೃಹಿಣಿಯರಿಗೆ ಒಂದು ದೊಡ್ಡ ತಲೆನೋವು. ಹಾಲಿನ ಕಲೆಗಳು, ಅಡುಗೆ ಎಣ್ಣೆ, ಸಾಂಬಾರು ಪದಾರ್ಥಗಳ ಜಿಡ್ಡು ಗ್ಯಾಸ್ ಸ್ಟೌವ್ ಬರ್ನರ್ ಮೇಲೆ ಬಿದ್ದು ಕಲೆಯಾಗಿ ಉಳಿದುಕೊಳ್ಳುತ್ತದೆ. ಇದು ನೋಡಲು ಮಾತ್ರ ಕೊಳಕಾಗಿ ಉಳಿಯದೇ ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳು ಮತ್ತು ಕೀಟಗಳು ಸೇರುವ ಅಪಾಯವು ಹೆಚ್ಚು. ಆದ್ದರಿಂದ ಇನ್ನು ಮುಂದೆ ಗ್ಯಾಸ್ ಸ್ಟೌವ್ ಬರ್ನರ್ ಸ್ವಚ್ಛಗೊಳಿಸಲು ಚಿಂತಿಸಬೇಕಿಲ್ಲ. ಬದಲಾಗಿ ಸುಲಭವಾಗಿ ಸ್ವಚ್ಛಗೊಳಿಸಬಹುದು. ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಎರಡು ಮೂರು ಪದಾರ್ಥಗಳನ್ನು ಬಳಸಿ ಬರ್ನರ್ ಹೊಳೆಯುವಂತೆ ಮಾಡಬಹುದು. ಇತ್ತೀಚೆಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೊಳಕು ಬರ್ನರ್‌ಗಳನ್ನು ಸ್ವಚ್ಛಗೊಳಿಸಲು ಸೂಪರ್ ಪರಿಣಾಮಕಾರಿ ವಿಧಾನವೊಂದು ವೈರಲ್ ಆಗಿದೆ.
ವೀಡಿಯೊ ಪ್ರಾರಂಭದಲ್ಲಿ, ಒಂದು ಪಾತ್ರೆಯಲ್ಲಿ ಬಿಸಿ ನೀರು ಕಾಯಿಸುವುದನ್ನು ಕಾಣಬಹುದು. ಇದಾದ ಬಳಿಕ ಕೊಳಕು ಬರ್ನರ್ನ್ನು ಬಿಸಿನೀರನ್ನು ಬಟ್ಟಲಿನಲ್ಲಿ ಹಾಕಲಾಗುತ್ತದೆ. ಇದಾದ ಬಳಿಕ ಅದಕ್ಕೆ ಅರ್ಧ ನಿಂಬೆಹಣ್ಣನ್ನು ಹಿಂಡುವುದನ್ನು ಕಾಣಬಹುದು. ಜೊತೆಗೆ ಒಂದು ಪ್ಯಾಕೆಟ್ ಇನೋ(ENO) ಹಾಕಿ ಸುಮಾರು ಒಂದು ಗಂಟೆಗಳ ವರೆಗೆ ಮುಚ್ಚಿ ಇಡಲಾಗಿದೆ. ಒಂದು ಗಂಟೆಯ ನಂತರ, ಡಿಶ್‌ವಾಶ್ ಜೆಲ್ ಅನ್ನು ತೆಗೆದುಕೊಂಡು ಟೂತ್ ಬ್ರಷ್‌ನ ಸಹಾಯದಿಂದ ಬರ್ನರ್‌ಗಳನ್ನು ಸ್ವಚ್ಛಗೊಳಿಸುತ್ತಾರೆ. ಅಷ್ಟೆ, ಕೊಳಕು ಎಲ್ಲಾ ಹೋಗಿದೆ, ಶುಚಿಗೊಳಿಸುವ ಪ್ರಕ್ರಿಯೆಯ ಮೊದಲು ಮತ್ತು ನಂತರ ನೀವು ವ್ಯತ್ಯಾಸವನ್ನು ನೋಡಬಹುದು.
ಇದನ್ನೂ ಓದಿ: ನಿಮ್ಮ ಸ್ವಿಚ್ ಬೋರ್ಡ್‌ನಲ್ಲಿರುವ ಕೆಂಪು ದೀಪ ನಿಮ್ಮ ವಿದ್ಯುತ್ ಬಿಲ್ ಅನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ತಿಳಿಯಿರಿ!
ಈ ಸಿಂಪಲ್ ಟ್ರಿಕ್ಸ್ ಈಗಾಗಲೇ 3 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆ ಕಂಡಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು “ಒಳ್ಳೆಯ ಮಾಹಿತಿ” ಎಂದು ಬರೆದುಕೊಂಡಿದ್ದಾರೆ. ಆದ್ದರಿಂದ ನೀವು ಕೂಡ ಒಂದು ಭಾರೀ ಈ ಸಿಂಪಲ್ ಟಿಪ್ಸ್ ಪ್ರಯತ್ನಿಸಿ. ಅದ್ಭುತ ಫಲಿತಾಂಶ ಕಂಡುಕೊಳ್ಳಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: