Travel: ಮಕ್ಕಳ ಜತೆಗೆ ಈ ಬೇಸಿಗೆ ರಜೆಯಲ್ಲಿ ಕರ್ನಾಟಕದ ಈ ಅದ್ಭುತ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 24, 2023 | 4:39 PM

ಮಕ್ಕಳಿಗೆ ಬೇಸಿಗೆ ರಜೆ ಇನ್ನೂ ಶುರು, ಈ ಸಮಯದಲ್ಲಿ ಮಕ್ಕಳ ಜತೆಗೆ ತಂಪಾಗಿರುವ ಸ್ಥಳಗಳಿಗೆ ಪ್ರವಾಸ ಮಾಡುವ ಯೋಚನೆಯನ್ನು ಮಾಡಿದ್ದರೆ, ಖಂಡಿತ ಈ ಪ್ರದೇಶಗಳಿಗೆ ಭೇಟಿ ನೀಡಬಹುದು.

Travel: ಮಕ್ಕಳ ಜತೆಗೆ ಈ ಬೇಸಿಗೆ ರಜೆಯಲ್ಲಿ ಕರ್ನಾಟಕದ ಈ ಅದ್ಭುತ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
Follow us on

ಇನ್ನೇನೂ ಮಕ್ಕಳಿಗೆ ಬೇಸಿಗೆ ರಜಾದಿನ ಆರಂಭವಾಗುತ್ತಿದ್ದೆ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಈ ಬೇಸಿಗೆಯಲ್ಲಿ ಟ್ರಿಪ್ ಹೋಗಬೇಕೆಂದು ಅಂದುಕೊಂಡಿದ್ದರೆ, ಈ ಸ್ಥಳಗಳಿಗೆ ನೀವೊಮ್ಮೆ ಖಂಡಿತವಾಗಿಯೂ ಭೇಟಿ ನೀಡಬೇಕು. ಇಲ್ಲಿ ಅದ್ಭುತ ತಾಣದಲ್ಲಿ ನಿಮ್ಮ ಸಂತೋಷದ ಕ್ಷಣಗಳನ್ನು ಕಳೆಯಲು ಇದು ಉತ್ತಮ ಸ್ಥಳಗಳು, ಮಕ್ಕಳಿಗೆ ರಜೆ ಸಿಗುತ್ತಿದಂತೆ ಮತ್ತು ನೀವು ನಿಮ್ಮ ಕೆಲಸದ ಒತ್ತಡದಿಂದ ಹೊರಗೆ ಬರಲು ಈ ಸ್ಥಳಗಳು ಉತ್ತಮ. ಜೊತೆಗೆ ಈ ಬೇಸಿಗೆಯಲ್ಲಿ ಒಂದು ರೀತಿ ಕೂಲ್ ಕ್ಷಣಗಳನ್ನು ಕಳೆಯಬಹುದು.

ಒತ್ತಿನೆಣೆ ಕಡಲತೀರ:

ಒತ್ತಿನೆಣೆ ಕಡಲತೀರ ಹಾಗೂ ಹಿನ್ನೀರು ಬೈಂದೂರು ನದಿ ಅರಬ್ಬಿ ಸಮುದ್ರಕ್ಕೆ ಸೇರುವ ಸ್ಥಳದಲ್ಲಿ ರೂಪುಗೊಂಡ ಸುಂದರವಾದ ಪ್ರದೇಶವಾಗಿದೆ. ಈ ಆಳವಿಲ್ಲದ ಕಡಲತೀರ ಪ್ರದೇಶವು ಒಂದು ಮೂಲೆಯಲ್ಲಿ ಬೆಟ್ಟಗಳನ್ನು ಹೊಂದಿದ್ದು ಈ ಸ್ಥಳ ಸುರಕ್ಷಿತ, ರಮಣೀಯ ಮತ್ತು ಶಾಂತಿಯುತವಾಗಿದೆ. ಇದು ಮಾತ್ರವಲ್ಲದೆ ಇಲ್ಲಿನ ಕಡಲತೀರ ಕಪ್ಪು ಬಂಡೆಗಳಿಂದ ಆವೃತವಾಗಿದೆ. ಇಲ್ಲಿನ ತಂಪಾದ ತಂಗಾಳಿ, ತೆಂಗಿನ ಮರ ಹಾಗೂ ತಾಳೆಮರಗಳ ಸೌಂದರ್ಯ ನಿಮ್ಮ ಮನಸ್ಸಿಗೆ ಮುದವನ್ನು ನೀಡುವುದಂತೂ ಖಂಡಿತ.

ಒತ್ತಿನೆಣೆ ಕಡಲತೀರ ಬೆಂಗಳೂರಿನಿಂದ 440 ಕಿ.ಮೀ ಹಾಗೂ ಮಂಗಳೂರಿನಿಂದ 125 ೧೨೫ ಕಿ.ಮೀ ದೂರದಲ್ಲಿದೆ. ಮೂಕಾಂಬಿಕಾ ರಸ್ತೆ ಬೈಂದೂರು ರೈಲ್ವೆನಿಲ್ದಾಣವು ಒತ್ತಿನೆಣೆ ಬೀಚ್‌ನಿಂದ 4 ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಸುಲಭವಾಗಿ ಆಟೋದ ಮೂಲಕವೂ ಇಲ್ಲಿಗೆ ತಲುಪಬಹುದು.

ಕವಲೇದುರ್ಗ ಕೋಟೆ :

ಟ್ರೆಕಿಂಗ್‌ನಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಈ ಐತಿಹಾಸಿಕ ಸ್ಥಳವೂ ಭೇಟಿಗೆ ಸೂಕ್ತವಾಗಿದೆ. ಆಗುಂಬೆಯ ಬೆಟ್ಟಗಳು ಪಶ್ಚಿಮ ಘಟ್ಟಗಳ ನಡುವಿನ ಹಚ್ಚಹಸಿರಿನ ವಾತಾವರಣದಲ್ಲಿ ಈ ಕೋಟೆ ನಿರ್ಮಿತವಾಗಿದೆ. ಈ ಕೋಟೆ ಮಣಿಪಾಲದಿಂದ ಕೇವಲ 100 ಕಿಮೀ ದೂರದಲ್ಲಿದೆ. ದಟ್ಟವಾದ ಕಾಡು, ಓರೆಕೋರೆ ರಸ್ತೆಗಳ ಮಧ್ಯೆ ಸಾಗಿದರೆ ಈ ಅದ್ಭುತವಾದ ಸ್ಥಳ ಕಾಣಸಿಗುತ್ತದೆ. ಈ ಸ್ಥಳವು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿದೆ. ನೀವು ಕೋಟೆಗೆ ತಲುಪಬೇಕೆಂದರೆ ಕೆಲವು ಸಮಯಗಳ ಕಾಲ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಬೇಕಾಗುತ್ತದೆ. ಕೋಟೆಯ ಮೇಲೆ ತಲುಪಿದಾಗ, ಅಲ್ಲಿನ ಹಚ್ಚ ಹಸಿರಿನ ವಾತಾವರಣವು ಮನಸ್ಸಿಗೆ ಮುದವನ್ನು ನೀಡುತ್ತದೆ. ಇಲ್ಲಿ ನೀವು ಕೋಟೆಯ ಅವಶೇಷಗಳು, ದಟ್ಟ ಅರಣ್ಯದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಕೋಟೆಯೊಳಗೆ ವಿರೂಪಾಕ್ಷ, ವಿಜಯ, ವಿಠಲ, ವೀರಭದ್ರ, ಮಲ್ಲಾರ, ಭುವನೇಶ್ವರಿ ಹೀಗೆ ಹಲವು ದೇವಾಲಯಗಳ ಅವಶೇಷಗಳಿವೆ. ಇತಿಹಾಸಗಳ ಬಗ್ಗೆ ಆಸಕ್ತಿ ಹೊಂದಿರುವವರು ಈ ಸ್ಥಳಕ್ಕೆ ಭೆಟಿ ನೀಡುವ ಮೂಲಕ ಕವಲೇದುರ್ಗ ಕೋಟೆಯ ಗತವೈಭವವನ್ನು ಕಣ್ತುಂಬಿಕೊಳ್ಳಬಹುದು.

ಕವಲೇದುರ್ಗ ಕೋಟೆಯು ತೀರ್ಥಹಳ್ಳಿಯಿಂದ 15 ಕಿಮೀ, ಮಂಗಳೂರಿನಿಂದ 133ಕಿ.ಮೀ ಹಾಗೂ ಬೆಂಗಳೂರಿನಿಂದ 365 ಕಿ.ಮೀ ದೂರದಲ್ಲಿದೆ. ಬಸ್ಸು, ರೈಲು ಹಾಗೂ ಸ್ವಂತ ವಾಹನಗಳ ಮೂಲಕವೂ ಇಲ್ಲಿಗೆ ಬರಬಹುದು.

ಇದನ್ನೂ ಓದಿ: Summer travel: ಬೇಸಿಗೆಯಲ್ಲಿ ಟ್ರಿಪ್ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಈ ವಸ್ತುಗಳನ್ನು ನಿಮ್ಮ ಜೊತೆಗೆ ತೆಗೆದುಕೊಂಡು ಹೋಗಿ

ಹೊನ್ನೆಮರಡು:

ಶರಾವತಿ ನದಿಯ ಹಿನ್ನೀರಿನಲ್ಲಿ ನೆಲೆಗೊಂಡಿರುವ ಹೊನ್ನೆಮರಡು ಪಶ್ಚಿಮ ಘಟ್ಟಗಳ ಕಾಡುಗಳಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇದು ಸಾಗರದಿಂದ ಜೋಗ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿದೆ. ಈ ಹಳ್ಳಿಯಲ್ಲಿ ಇಂದು ಸಣ್ಣ ದ್ವೀಪವೂ ಇದೆ. ವಿವಿಧ ಸಾಹಚಿ ಚಟುವಟಿಕೆಗಳ ಜೊತೆಗೆ ಇಲ್ಲಿ ನೀವು ಟ್ರೆಕಿಂಗ್ ಕೂಡಾ ಮಾಡಬಹುದು. ಸೂರ್ಯೋದಯ ಮತ್ತು ಸೂರ್ಯಸ್ತದ ವೀಕ್ಷಣೆಗೆ ಇದು ಅದ್ಭುತವಾದ ಸ್ಥಳವಾಗಿದೆ. ಇಲ್ಲಿ ಅನೇಕ ಪ್ರವಾಸಿ ಸಂಸ್ಥೆಗಳು ಪ್ರವಾಸಿ ಕ್ಯಾಂಪ್‌ಗಳನ್ನು ಏರ್ಪಡಿಸುತ್ತವೆ. ಇಲ್ಲಿ ನೀವು ವಿವಿಧ ರೀತಿಯ ಚಿಟ್ಟೆಗಳು, ಪಕ್ಷಿಗಳನ್ನು ನೋಡುತ್ತಾ ಕಾಲವನ್ನು ಕಳೆಯಬಹುದು. ಕಯಾಕಿಂಗ್, ಬೋಟಿಂಗ್‌ನಂತಹ ಜಲಕ್ರೀಡೆ ಚಟುವಟಿಕೆಗಳಲ್ಲಿಯೂ ಭಾಗವಹಿಸಬಹುದು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಹೊನ್ನೆಮರಡು ಸಾಗರದಿಂದ 35 ಕಿಮೀ ದೂರದಲ್ಲಿದೆ. ತಾಳಗುಪ್ಪದಿಂದ 12 ಕಿಮೀ ದೂರದಲ್ಲಿದೆ. ಹೊನ್ನೆಮರಡು ಬೆಂಗಳೂರಿನಿಂದ 395 ಕಿಮೀಗಳಷ್ಟು ದೂರದಲ್ಲಿದೆ.

ದಾಂಡೇಲಿ:

ಈ ಬೇಸಿಗೆಯ ರಜೆಯಲ್ಲಿ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಹೋಗಲು ಬಯಸಿದರೆ ದಾಂಡೇಲಿಗೆ ಪ್ರವಾಸ ಕೈಗೊಳ್ಳಬಹುದು. ಈ ಪ್ರಾಕೃತಿಕ ತಾಣವು ಸಾಹಸಿಮಯ ಚಟುವಟಿಕೆಗಳನ್ನು ಮಾಡಲು ಇರುವ ಅದ್ಭುತವಾದ ಸ್ಥಳವಾಗಿದೆ. ಜೊತೆಗೆ ಕಾಡುಗಳು, ವನ್ಯಜೀವಿಗಳನ್ನು ಕೂಡಾ ಇಲ್ಲಿ ಕಣ್ತುಂಬಿಕೊಳ್ಳಬಹುದು. ಈ ರಮಣೀಯ ಗುಡ್ಡಗಾಡು ಪ್ರದೆಶ ಕರ್ನಾಟಕದಲ್ಲಿನ ಸೂಕ್ತವಾದ ವಿಹಾರ ತಾಣವಾಗಿದೆ.

ದಟ್ಟ ಮತ್ತು ಹಚ್ಚಹಸಿರಿನ ಕಾಡುಗಳ ನಡುವೆ ದಾಂಡೇಲಿಯ ಸಾಹಸಿ ಕ್ರೀಡೆಗಳು, ರಾತ್ರಿ ಕ್ಯಾಂಪ್‌ಗಳು, ಪ್ರಕೃತಿಯ ನಡಿಗೆ, ದೋಣಿ ವಿಹಾರ ಮುಂತಾದ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದು. ಈ ಬೇಸಿಗೆಯಲ್ಲಿ ನೀವು ಭೆಟಿ ನೀಡಲು ಈ ಸ್ಥಳವು ಸೂಕ್ತವಾಗಿದೆ. ಅಳ್ನಾವರ್ ರೈಲ್ವೆ ನಿಲ್ದಾಣದಿಂದ ದಾಂಡೇಲಿ ಕೇವಲ 23 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 56 ಕಿ.ಮೀ ದೂರದಲ್ಲಿದೆ.

Published On - 4:38 pm, Fri, 24 March 23