ತೂಕ ನಷ್ಟವು ಅನೇಕರಿಗೆ ಉನ್ನತ ಆದ್ಯತೆಯಾದರೂ ಕೂಡ ಹೆಚ್ಚುವರಿ ತೂಕ ಇಳಿಸಿಕೊಳ್ಳುವುದು ಸರಳ ಕಾರ್ಯವಲ್ಲ. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವು ತೂಕ ಇಳಿಸಿಕೊಳ್ಳಲು ಎರಡು ಪ್ರಾಥಮಿಕ ಹಂತಗಳಾಗಿದ್ದರೂ, ಪರಿಗಣಿಸಬೇಕಾದ ಇತರ ಪ್ರಮುಖ ಅಂಶಗಳಿವೆ. ನಮ್ಮ ಅಡುಗೆ ಮನೆಯಲ್ಲಿ ಇರುವ ಮಸಾಲೆಗಳು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಅವುಗಳಲ್ಲಿ ಕೆಲವು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ನಾವು ಅದರ ಸಾಮರ್ಥ್ಯವನ್ನು ಅರಿತುಕೊಳ್ಳದೆ ಅದನ್ನು ಪ್ರತಿದಿನವೂ ಬಳಸುತ್ತೇವೆ. ಹಾಗಾಗಿ ಇದನ್ನು ಉತ್ತಮವಾದ ಆಹಾರದಲ್ಲಿ ಸೇರಿಸುವುದರಿಂದ ಈ ಮಸಾಲೆಗಳು ತೂಕ ನಿರ್ವಹಣೆಗೆ ಧನಾತ್ಮಕವಾಗಿ ಕೊಡುಗೆ ನೀಡಬಹುದು. ನೀವು ದೇಸಿ ಆಹಾರವನ್ನು ಪ್ರೀತಿಸುವವರಾಗಿದ್ದರೆ ಹೊಟ್ಟೆಯ ಸುತ್ತಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಲು ಈ ಭಾರತೀಯ ಮಸಾಲೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ.
1. ಅರಿಶಿನ:
ಅರಿಶಿನವು ನೈಸರ್ಗಿಕವಾಗಿ ದೇಹದ ತಾಪಮಾನವನ್ನು ಹೆಚ್ಚಿಸುತ್ತದೆ, ಹಾಗಾಗಿ ಇದು ಚಯಾಪಚಯ ಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಇನ್ಸುಲಿನ್ ಪ್ರತಿರೋಧವನ್ನು ತಪ್ಪಿಸುತ್ತದೆ. ಇದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞ ಟ್ವಿನ್ಸಿ ಆನ್ ಸುನಿಲ್ ಹೇಳುತ್ತಾರೆ. ಜೊತೆಗೆ ಇದು ದೇಹದಲ್ಲಿ ಕೊಬ್ಬು ಹೆಚ್ಚೆಚ್ಚು ಶೇಖರಣೆಯಾಗುವುದನ್ನು ತಡೆಯುತ್ತದೆ. ಅರಿಶಿನವನ್ನು ಹೆಚ್ಚಿನ ಭಾರತೀಯ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು, ನೀವು ಮಲಗುವ ಮೊದಲು ಅರಿಶಿನದ ಚಹಾ ಅಥವಾ ಅರಿಶಿನ ಬೆರೆಸಿದ ಹಾಲನ್ನು ಸಹ ಕುಡಿಯಬಹುದು.
2. ದಾಲ್ಚಿನ್ನಿ:
ದಾಲ್ಚಿನ್ನಿ ಹಲವಾರು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಸಂಯುಕ್ತಗಳನ್ನು ಹೊಂದಿರುತ್ತದೆ. ದಾಲ್ಚಿನ್ನಿಯು ತೂಕ ನಷ್ಟಕ್ಕೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅದಲ್ಲದೆ ಈ ಮಸಾಲೆಯು ನೈಸರ್ಗಿಕವಾಗಿ ಹಸಿವನ್ನು ನಿಗ್ರಹಿಸುವ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಡಿವಾಣ ಹಾಕುತ್ತದೆ.
3. ಬೆಳ್ಳುಳ್ಳಿ:
ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ನಿಯಂತ್ರಣದಲ್ಲಿಡುತ್ತದೆ. ಈ ಪ್ರಕ್ರಿಯೆ ತೂಕ ಹೆಚ್ಚಾಗದಿರಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯ ಮತ್ತೊಂದು ಪ್ರಯೋಜನವೆಂದರೆ ಅದು ಹಸಿವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮನ್ನು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಎಂದು ಸುನಿಲ್ ಹೇಳುತ್ತಾರೆ.
4. ಕರಿಮೆಣಸು:
ಇದು ಕೇವಲ ಮಸಾಲೆಯುಕ್ತ ಆಹಾರಕ್ಕಾಗಿ ಮಾತ್ರವಲ್ಲ ಇದರಿಂದ ಅನೇಕ ಉಪಯೋಗಗಳಿವೆ. ಉದಾಹರಣೆಗೆ, ಕರಿಮೆಣಸಿನಲ್ಲಿ ಕಂಡುಬರುವ ಪೈಪರಿನ್ ಎಂಬ ವಸ್ತುವು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆ ಯಾಗುವುದನ್ನು ಕಡಿಮೆ ಮಾಡುತ್ತದೆ.
5. ಶುಂಠಿ:
ಶುಂಠಿಯ ಥರ್ಮೋಜೆನಿಕ್ ಗುಣ ತೂಕ ನಷ್ಟವನ್ನು ವೇಗಗೊಳಿಸುತ್ತದೆ. ಕಾರ್ಬೋಹೈಡ್ರೇಟ್ ಅಥವಾ ಸಕ್ಕರೆ ಭರಿತ ಆಹಾರವನ್ನು ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆ ಉಲ್ಬಣವನ್ನು ತಡೆಯಲು ಶುಂಠಿ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಹಠಾತ್ ಆಗಿ ಕಂಡು ಬರುವ ಬಯಕೆಗಳನ್ನು ನಿಲ್ಲಿಸುತ್ತದೆ. ಶುಂಠಿಯನ್ನು ಸೂಪ್, ಸಲಾಡ್, ಪಲ್ಯ, ದಾಲ್ ಮತ್ತು ಚಹಾಕ್ಕೆ ಸೇರಿಸಬಹುದು.
ಇದನ್ನೂ ಓದಿ: ಬೆಳಿಗ್ಗೆ ಯಾವ ಡ್ರೈಫ್ರೂಟ್ಸ್ ತಿನ್ನಬೇಕು? ಯಾವುದನ್ನು ಸೇವಿಸಬಾರದು?
ಮಸಾಲೆಗಳು ಸಾಮಾನ್ಯವಾಗಿ ಪ್ರಯೋಜನಕಾರಿಯಾಗಿದ್ದರೂ, ನಿರ್ದಿಷ್ಟ ಅಲರ್ಜಿ ಹೊಂದಿರುವ ವ್ಯಕ್ತಿಗಳು ಅವುಗಳನ್ನು ತಪ್ಪಿಸಬೇಕು. ಹೆಚ್ಚುವರಿಯಾಗಿ, ಜಠರಗರುಳಿನ ಸಮಸ್ಯೆ ಇರುವವರು ಈ ಮಸಾಲೆಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಇದರ ಸೇವನೆ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು. ಹಾಗಾಗಿ ಸೇವನೆಯನ್ನು ಮಿತಗೊಳಿಸಬೇಕು ಅಥವಾ ಸೇವನೆ ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಭಾರತೀಯ ಮಸಾಲೆಗಳು ಗಮನಾರ್ಹ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಆದರೆ ಅತಿಯಾದ ಸೇವನೆಯು ಜೀರ್ಣಕಾರಿ ಅಸ್ವಸ್ಥತೆ, ಎದೆಯುರಿ ಅಥವಾ ಅಲರ್ಜಿಗೆ ಕಾರಣವಾಗಬಹುದು. ಯಾವಾಗಲೂ ಮಸಾಲೆಗಳನ್ನು ನಿಮ್ಮ ಆಹಾರದಲ್ಲಿ ಮಿತವಾಗಿ ಸೇವನೆ ಮಾಡಿ. ಸೇವನೆ ಮಾಡುವ ಮೊದಲು ನಿಮ್ಮ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ