World Wetland Day 2024: ಜೀವ ಜಗತ್ತಿನಲ್ಲಿ ನೈಸರ್ಗಿಕ ತೇವಭರಿತ ಭೂಮಿಯ ಸಂರಕ್ಷಣೆಯೂ ಅತ್ಯಗತ್ಯ
ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾಶ ಮಾಡುತ್ತಿದ್ದೇನೆ. ಜೀವ ಸಂಕುಲಗಳು, ಸಂಪತ್ತು ಭರಿತವಾದ ಕಾಡುಗಳು ನಾಶವಾಗಿ ಭೂಮಿಯೂ ತನ್ನ ಸಂಪತ್ತನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಿದೆ. ಅದರೊಂದಿಗೆ ನೈಸರ್ಗಿಕ ನೀರಿನ ಮೂಲಗಳು ಭರಿದಾಗಿ ಭೂಮಿಯೂ ತೇವವನ್ನು ಕಳೆದುಕೊಳ್ಳುತ್ತಿದೆ. ನೈಸರ್ಗಿಕ ನೀರಿನ ಸೆಲೆಗಳು ಹಾಗೂ ತೇವಯುಕ್ತ ಭೂ ಪ್ರದೇಶಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಪಂಚದಾದ್ಯಂತ ಪ್ರತಿವರ್ಷವೂ ಫೆಬ್ರವರಿ 2ರಂದು ವಿಶ್ವ ತೇವ ಭೂದಿನವನ್ನು ಆಚರಿಸಲಾಗುತ್ತದೆ.
ಪ್ರತಿ ವರ್ಷ ಫೆಬ್ರವರಿ 2 ರಂದು ವಿಶ್ವ ತೇವ ಭೂ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ತೇವ ಭೂಮಿಯನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಉದ್ದೇಶವನ್ನು ಹೊಂದಿದೆ. ಮಾನವನು ಅಭಿವೃದ್ಧಿ ಹೊಂದುತ್ತಿದ್ದಂತೆ ಪರಿಸರವನ್ನು ನಾಶ ಮಾಡುತ್ತಾ ಸಾಗಿಸುತ್ತಿದ್ದಾನೆ. ಸ್ವಾರ್ಥದ ನೆಲೆಯಲ್ಲಿ ಯೋಚಿಸುವ ಮಾನವನಿಗೆ ಭೂಮಿಯೂ ಸದಾ ಕಾಲ ಮಾನವರಿಗೆ ಒಳಿತನ್ನೇ ಬಯಸುತ್ತಿದೆ. ಆದರೆ ಈ ಸ್ವಾರ್ಥ ಮನುಜನು ಮಾತ್ರ ಜೀವ ಸಂಕುಲ, ಜೀವ ವೈವಿಧ್ಯಗಳು, ನೀರಿನ ಮೂಲಗಳನ್ನು ನಾಶ ಮಾಡಿ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾನೆ. ಹೀಗಾಗಿ ಕೆರೆ, ತೊರೆ, ಹಳ್ಳ, ನದಿ, ಅಂತರ್ಜಲ, ಜೌಗು ಪ್ರದೇಶಗಳು, ಹುಲ್ಲುಗಾವಲುಗಳು ಪ್ರದೇಶ, ನದಿ ಮುಖಜ ಭೂಮಿಗಳು ನಾಶವಾಗುತ್ತಿವೆ.
ವಿಶ್ವ ತೇವಭೂಮಿ ದಿನದ ಇತಿಹಾಸ
ಪ್ರತಿ ವರ್ಷವು ಫೆಬ್ರವರಿ 2 ರಂದು ವಿಶ್ವ ಜೌಗು ಪ್ರದೇಶ ದಿನವನ್ನು ಆಚರಿಸಲಾಗುತ್ತದೆ. ಫೆಬ್ರವರಿ 2 1971 ರಂದು ಇರಾನ್‌ನ ರಾಮ್‌ಸರ್‌ನಲ್ಲಿ ನಡೆದ ಸಮಾವೇಶದಲ್ಲಿ ಜೌಗು ಪ್ರದೇಶದ(ತೇವ ಪ್ರದೇಶದ) ಸಂರಕ್ಷಣೆಯ ಬಗ್ಗೆ ಚರ್ಚಿಸಲಾಯಿತು. ಈ ಸಮಾವೇಶದಲ್ಲಿ ತೇವ ಪ್ರದೇಶದ ಸಂರಕ್ಷಣೆಗೆ ರೂಪುರೇಷೆಗಳನ್ನು ರಚಿಸಲಾಯಿತು. 1975ರಲ್ಲಿ ರಾಂಸಾರ್‌ನಲ್ಲಿ ವಿಶ್ವ ತೇವ ಭೂ ದಿನವನ್ನು ಜಾರಿಗೆ ತರಲಾಯಿತು. ಅಂದಿನಿಂದ ವಿಶ್ವದ 99ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸುವ ಮೂಲಕ ತೇವ ಭೂಮಿಯನ್ನು ರಕ್ಷಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.
ಇದನ್ನೂ ಓದಿ: ಹೊಟ್ಟೆಯ ಬೊಜ್ಜನ್ನು ಕರಗಿಸಬೇಕಾ? ನಿಮ್ಮ ಆಹಾರದಲ್ಲಿ ಈ ಮಸಾಲೆಗಳನ್ನು ಸೇವಿಸಿ
ವಿಶ್ವ ಭೂ ತೇವ ಭೂ ದಿನದ ಮಹತ್ವ ಹಾಗೂ ಆಚರಣೆ
ತೇವಭೂಮಿಯೂ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ನೆಲೆಯಾಗಿದೆ. ಈ ತೇವ ಭೂಮಿಯೂ ಜನರಿಗೆ ಜೀವನೋಪಾಯವನ್ನು ಬೆಂಬಲಿಸುತ್ತದೆ. ವಿಶ್ವ ಜೌಗುಪ್ರದೇಶ ದಿನ (ತೇವ ಭೂ ದಿನ)ದಂದು ವಿಶ್ವ ಜೌಗು ಪ್ರದೇಶದ ಮೌಲ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದಾಗಿದೆ. ಜಾಗತಿಕ ಮಟ್ಟದಲ್ಲಿ ತೇವಭೂಮಿಗಳಂತಹ ಪ್ರಮುಖ ಪರಿಸರ ವ್ಯವಸ್ಥೆಗಳ ಮರುಸ್ಥಾಪನೆಗೆ ಬೆಂಬಲ ನೀಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ವಿಶ್ವದಾದಂತ್ಯ ಶೈಕ್ಷಣಿಕ ವಿಚಾರ ಸಂಕಿರಣಗಳು,ಅಭಿಯಾನಗಳು, ಕಾರ್ಯಾಗಾರಗಳು ಹಾಗೂ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಪರಿಸರ ಸಂಘಟನೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ