ಅತಿಯಾದ ತೂಕವೆನ್ನುವುದು ಎಲ್ಲರ ಸಮಸ್ಯೆಯಾಗಿ ಬಿಟ್ಟಿದೆ. ಹೊಟ್ಟೆ ಕೊಬ್ಬು ಹಾಗೂ ತೂಕ ಇಳಿಕೆಗೆ ಮಾರ್ಗಗಳು ಹಲವರಿದ್ದರೂ ತುಂಬಾ ಸಮಯಗಳ ಕಾಲ ಕಳೆಯಬೇಕಾಗುತ್ತದೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರಿಳಿಸುವುದು, ಡಯಟ್ ಮಾಡುವ ಮೂಲಕ ತೂಕ ಇಳಿಕೆ ಮಾಡಿಕೊಳ್ಳಬಹುದು. ಅಷ್ಟು ಸಮಯವಾಗಲಿ ಹಾಗೂ ತಾಳ್ಮೆಯಾಗಲಿ ಇಂದಿನ ಜನರಿಗೆ ಇಲ್ಲ. ಮನೆಯಲ್ಲೇ ಪಾನೀಯಗಳನ್ನು ತಯಾರಿಸಿ ತೂಕ ಇಳಿಸುವುದು ಸುಲಭ ಮಾರ್ಗವಾಗಿದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸಿದರೆ ದೇಹದಲ್ಲಿ ಮ್ಯಾಜಿಕ್ ಆಗುತ್ತದೆ.
ಮೆಂತ್ಯೆ ನೀರು : ರಾತ್ರಿಯ ಒಂದು ಲೋಟ ನೀರಿಗೆ ಮೆಂತ್ಯ ಕಾಳುಗಳನ್ನು ಹಾಕಿ ನೆನೆಸಿಟ್ಟು, ಈ ನೀರನ್ನು ಬಿಸಿ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ತೂಕ ಕಡಿಮೆಯಾಗುವುದಲ್ಲದೆ ಅಸಿಡಿಟಿಯಂತಹ ತೊಂದರೆಗಳು ಶಮನವಾಗುತ್ತದೆ.
ನಿಂಬೆ ನೀರು : ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ ಹಾಗೂ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಿಂಬೆ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಬೆಲ್ಲದ ನೀರು ಕುಡಿದರೆ ಆ ಕಾಯಿಲೆಗಳು ದೂರ!
ಜೀರಿಗೆ ನೀರು : ಪ್ರತಿದಿನ ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಜೀರಿಗೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕನಷ್ಟಕ್ಕೆ ಕಾರಣವಾಗುತ್ತದೆ.
ಪುದೀನಾ ನೀರು : ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದು ತೂಕ ನಷ್ಟಕ್ಕೆ ಸುಲಭ ಮಾರ್ಗವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಕಡಿಮೆಯಾಗುವಂತೆ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ