ಪ್ರತಿ ರಾತ್ರಿ 8 ಗಂಟೆ ನಿದ್ರೆ ಮಾಡಲಾಗದೆ ಪರದಾಡುತ್ತಿದ್ದೀರಾ? ಇಲ್ಲಿವೆ ಸುಲಭ ಮಾರ್ಗಗಳು
ದಿನವಿಡೀ ಆಯಾಸವಾದ ದೇಹ ರಾತ್ರಿಯ ನಿದ್ರೆಯಿಂದ ರೀಚಾರ್ಜ್ ಆಗುತ್ತದೆ. ದಿನಕ್ಕೆ 7ರಿಂದ 8 ಗಂಟೆ ನಿದ್ರೆ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ, ಕೆಲವರಿಗೆ ನಿದ್ರೆ ಮಾಡುವುದೇ ಒಂದು ಸಮಸ್ಯೆಯಾಗಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುವುದಿಲ್ಲ. ನಿಮಗೂ ಹೀಗೇ ಆಗುತ್ತಿದೆಯೇ?
ಒತ್ತಡದ ಮತ್ತು ದಣಿದ ದಿನದ ನಂತರ ನಿದ್ರಿಸಲು ಪರದಾಡುತ್ತೀರಾ? ಸುಖವಾಗಿ ನಿದ್ರಿಸುವುದು ನಮ್ಮ ಆರೋಗ್ಯಕ್ಕೆ ಬೇಕಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ ಮತ್ತು ಇದರತ್ತ ಹೆಚ್ಚಿನವರು ಗಮನ ಕೊಡುವುದಿಲ್ಲ. ನಿದ್ರಾಹೀನತೆಯು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ದೀರ್ಘಕಾಲದವರೆಗೆ ಮುಂದುವರಿದಾಗ ನಮ್ಮ ಒಟ್ಟಾರೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಸೋಸಿಯೇಟೆಡ್ ಪ್ರೆಸ್‌ನ ವರದಿಯ ಪ್ರಕಾರ, ಸುಮಾರು ಮೂರನೇ ಒಂದು ಭಾಗದಷ್ಟು ಅಮೇರಿಕನ್ ವಯಸ್ಕರು 7 ಗಂಟೆಗಿಂತಲೂ ಕಡಿಮೆ ಸಮಯ ನಿದ್ರೆ (Sleep) ಮಾಡುತ್ತಾರೆ. ಇದಕ್ಕೆ ಕೆಲವು ಪ್ರಮುಖ ಕಾರಣಗಳೆಂದರೆ, ಒತ್ತಡ (Stress), ಆತಂಕ.
ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಆಫ್ ಮೆಡಿಸಿನ್‌ನ ಮನೋವೈದ್ಯಶಾಸ್ತ್ರ ಮತ್ತು ವರ್ತನೆಯ ವಿಜ್ಞಾನಗಳ ಸಹಾಯಕ ಪ್ರಾಧ್ಯಾಪಕ ಮೋಲಿ ಅಟ್ವುಡ್ ಪ್ರಕಾರ, “ನಿಮ್ಮ ದೇಹಕ್ಕೆ ಏನು ಬೇಕು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಆದ್ಯತೆ ನೀಡಲು ನಿಮ್ಮ ಕಠಿಣ ಪ್ರಯತ್ನವನ್ನು ಮಾಡಬೇಕು. ಉತ್ತಮವಾಗಿ ನಿದ್ರೆ ಮಾಡಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ.
ಇದನ್ನೂ ಓದಿ: ಆಲ್ಕೋಹಾಲ್ ಸೇವಿಸಿದ ಬಳಿಕ ಹ್ಯಾಂಗೋವರ್ ಉಂಟಾಗುವುದೇಕೆ?
ಬಫರ್ ವಲಯವನ್ನು ರಚಿಸಿ:
ಕೆಲಸಕ್ಕೆ ಸಂಬಂಧಿತ ಒತ್ತಡವು ಅನಿವಾರ್ಯವಾಗಿದೆ ಮತ್ತು ಇದು ಸಂಪರ್ಕ ಕಡಿತಗೊಳಿಸಲು ಕಷ್ಟವಾಗುತ್ತದೆ. ನಿಮ್ಮ ಕೆಲಸದ ದಿನದ ಅಂತ್ಯ ಮತ್ತು ನಿಮ್ಮ ಮಲಗುವ ಸಮಯದ ನಡುವೆ “ಬಫರ್ ವಲಯ” ರಚಿಸಲು ಪ್ರಯತ್ನಿಸಿ. ಮಲಗುವ ಮುನ್ನ ಒಂದು ಗಂಟೆಯ ಮೊದಲು ವೃತ್ತಿ ಕೆಲಸ ಮತ್ತು ದೈನಂದಿನ ಜವಾಬ್ದಾರಿಗಳನ್ನು ದೂರ ಇಡಲು ತಜ್ಞರು ಸಲಹೆ ನೀಡುತ್ತಾರೆ. ಇಮೇಲ್ ಅನ್ನು ಪರಿಶೀಲಿಸಬೇಡಿ, ಬಿಲ್‌ಗಳನ್ನು ಪಾವತಿಸಬೇಡಿ, ಕೆಲಸಗಳನ್ನು ಮಾಡಬೇಡಿ ಅಥವಾ ಸಾಮಾಜಿಕ ಮಾಧ್ಯಮದಿಂದ ದೂರ ಇರಿ. ಅದರ ಬದಲಾಗಿ, ನೀವು ಪುಸ್ತಕದೊಂದಿಗೆ ವಿಶ್ರಾಂತಿ ಪಡೆಯುವ ದಿನಚರಿಯನ್ನು ರಚಿಸಿ, ಹವ್ಯಾಸದಲ್ಲಿ ಪಾಲ್ಗೊಳ್ಳಿ ಅಥವಾ ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ.
ನಿಮ್ಮ ಆಹಾರಕ್ರಮದ ಬಗ್ಗೆ ಗಮನವಿರಲಿ:
ಬೆಡ್ಟೈಮ್ಗೂ ಮೊದಲು ಭಾರೀ ಊಟವನ್ನು ಮಾಡುವುದು ನಿಮ್ಮ ನಿದ್ರೆಯನ್ನು ಅಡ್ಡಿಪಡಿಸಬಹುದು. ಆದ್ದರಿಂದ ಸಂಜೆಯ ಬಳಿಕ ಲಘು ಆಹಾರ ಸೇವಿಸಿ. ಆದರೆ ಅತಿಯಾದ ಹಸಿವಿನಿಂದ ಮಲಗಬೇಡಿ. ಧಾನ್ಯದ ಬ್ರೆಡ್‌ನಲ್ಲಿ ಚೀಸ್, ಬಾದಾಮಿ ಅಥವಾ ಕಡಲೆಕಾಯಿ ಬೆಣ್ಣೆಯಂತಹ ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬಿನೊಂದಿಗಿನ ತಿಂಡಿಗಳನ್ನು ಸೇವಿಸಿ.
ಇದನ್ನೂ ಓದಿ: Liver Health: ಎಷ್ಟು ಆಲ್ಕೋಹಾಲ್ ಸೇವಿಸಿದರೆ ಲಿವರ್ಗೆ ತೊಂದರೆಯಾಗುತ್ತದೆ?
ಆಲ್ಕೋಹಾಲ್ ಸೇವಿಸಬೇಡಿ:
ನೈಟ್‌ಕ್ಯಾಪ್ ಅಥವಾ ಡಿನ್ನರ್ ನಂತರ ಆಲ್ಕೋಹಾಲ್ ಸೇವಿಸುವುದು ನಿಮಗೆ ಆರಾಮವೆನಿಸಬಹುದು. ಆದರೆ ಇದು ದೀರ್ಘ ರಾತ್ರಿಗೆ ಕಾರಣವಾಗಬಹುದು. ಆಲ್ಕೋಹಾಲ್ ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ, ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮಧ್ಯರಾತ್ರಿಯಲ್ಲಿ ನೀವು ಹೆಚ್ಚಾಗಿ ಏಳುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಕೆಫೀನ್ ಅನ್ನು ಮಿತಿಗೊಳಿಸಿ:
ಕೆಫೀನ್ ಅಡೆನೊಸಿನ್ ಅನ್ನು ನಿರ್ಬಂಧಿಸುವ ಒಂದು ಉತ್ತೇಜಕವಾಗಿದೆ. ಇದು ನಿದ್ರಾಹೀನತೆಯ ಭಾವನೆಗೆ ಕೊಡುಗೆ ನೀಡುವ ರಾಸಾಯನಿಕವಾಗಿದೆ. ಕೆಫೀನ್ ಅನ್ನು ಕಡಿಮೆಗೊಳಿಸಲು ನಿಮ್ಮ ದೇಹವು 10 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.
ಸ್ಕ್ರೀನಿಂಗ್ ಸಮಯವನ್ನು ಮಿತಿಗೊಳಿಸಿ:
ಫೋನ್‌ಗಳು ಮತ್ತು ಕಂಪ್ಯೂಟರ್ ಪರದೆಗಳಿಂದ ಬರುವ ಬೆಳಕು ಸಿರ್ಕಾಡಿಯನ್ ರಿದಮ್ ಅನ್ನು ಅಡ್ಡಿಪಡಿಸಬಹುದು. ಈ ಆಂತರಿಕ ಗಡಿಯಾರವು ನಿದ್ರೆಗೆ ಸಹಾಯ ಮಾಡುವ ಮೆಲಟೋನಿನ್ ಅನ್ನು ನಿಗ್ರಹಿಸುವ ಮೂಲಕ ನಮ್ಮನ್ನು ಸ್ವಾಭಾವಿಕವಾಗಿ ಎಚ್ಚರಗೊಳಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ