Health Care Tips in Kannada : ಬೇಸಿಗೆಯಲ್ಲಿ ಬೆಲ್ಲದ ನೀರು ಕುಡಿದರೆ ಆ ಕಾಯಿಲೆಗಳು ದೂರ!

ಸುಡು ಬಿಸಿಲಿನ ಬೇಸಿಗೆಯನ್ನು ಯಾರು ಕೂಡ ಇಷ್ಟ ಪಡಲ್ಲ. ಈ ಋತುವಿನಲ್ಲಿ ಹೆಚ್ಚಿನವರು ಮನೆಯೊಳಗೆ ಇರಲು ಇಷ್ಟ ಪಡುತ್ತಾರೆ. ತಣ್ಣನೆಯ ಆಹಾರವನ್ನು ಸೇವಿಸಲು ಇಷ್ಟ ಪಡುವುದು ಸಹಜ. ಅದಲ್ಲದೇ ಬೇಸಿಗೆಯಲ್ಲಿ ಸ್ವಲ್ಪ ಹೊರಗಡೆ ಹೋಗಿ ಬಂದರೂ ಕೂಡ ಬಾಯಾರಿಕೆ ದಣಿವಾಗುವುದು ಸಹಜ. ಹೀಗಾಗಿ ದಣಿವಾರಿಸಿಕೊಳ್ಳಲು ತಂಪು ಪಾನೀಯಗಳನ್ನು ಸೇವಿಸುವವರೇ ಹೆಚ್ಚು. ಆದರೆ ಬೇಸಿಗೆಯಲ್ಲಿ ಬೆಲ್ಲ ನೀರು ಕುಡಿಯುವುದರಿಂದ ಆರೋಗ್ಯ ಲಾಭಗಳಿವೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.

Health Care Tips in Kannada : ಬೇಸಿಗೆಯಲ್ಲಿ ಬೆಲ್ಲದ ನೀರು ಕುಡಿದರೆ ಆ ಕಾಯಿಲೆಗಳು ದೂರ!
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 26, 2024 | 10:52 AM

ಬೆಲ್ಲವು ಸಿಹಿಕಾರಕವಾಗಿದ್ದು, ಬಾಯಿಗೆ ಒಂದು ತುಂಡು ಬೆಲ್ಲ ಹಾಕಿಕೊಂಡರೆ ಸಾಕು ರಿಲ್ಯಾಕ್ಸ್ ಎನಿಸುತ್ತದೆ. ಎಲ್ಲರಿಗೂ ತಿಳಿದಿರುವಂತೆ ಸಕ್ಕರೆಗೆ ಹೋಲಿಸಿದರೆ ಬೆಲ್ಲವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಹೆಚ್ಚಿನವರು ಅಡುಗೆ ಹಾಗೂ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬೆಲ್ಲವನ್ನು ಹೇರಳವಾಗಿ ಬಳಸುತ್ತಾರೆ. ಈ ಬೆಲ್ಲದಲ್ಲಿ ವಿಟಮಿನ್ ಬಿ1, ಬಿ6, ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ಕಾರ್ಬೋಹೈಡ್ರೇಟ್, ಸೋಡಿಯಂ ಪೋಷಕಾಂಶಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ..

ಬೆಲ್ಲ ನೀರು ಸೇವನೆಯಿಂದ ಆಗುವ ಲಾಭಗಳಿವು

* ರಕ್ತವನ್ನು ಶುದ್ಧೀಕರಿಸುತ್ತದೆ : ಬೇಸಿಗೆಯಲ್ಲಿ ಬೆಲ್ಲದ ನೀರು ಕುದಿಯುವುದರಿಂದ ರಕ್ತ ಶುದ್ದಿಕರಿಸಿ ಆರೋಗ್ಯ ಸಮಸ್ಯೆಯು ಬಾರದಂತೆ ನೋಡಿಕೊಳ್ಳುತ್ತದೆ.

* ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ : ಬೆಲ್ಲದಲ್ಲಿ ಸತು, ಸೆಲೆನಿಯಮ್ ಅಂಶವು ಹೇರಳವಾಗಿದ್ದು, ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚು ಮಾಡಿ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

* ಮಲಬದ್ಧತೆ ಸಮಸ್ಯೆಯನ್ನು ದೂರವಾಗಿಸುತ್ತದೆ : ಈ ಸಮಯದಲ್ಲಿ ದೇಹದಲ್ಲಿ ನೀರಿನಂಶವು ಕಡಿಮೆಯಾಗಿ ಮಲಬದ್ಧತೆ ಸಮಸ್ಯೆಯು ಕಾಡುವುದಿದೆ. ಬೆಲ್ಲ ನೀರು ಸೇವನೆಯಿಂದ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಇದನ್ನೂ ಓದಿ: ಬೆಲೆ ಕಟ್ಟಲಾಗದ ಬೌದ್ಧಿಕ ಆಸ್ತಿಯ ರಕ್ಷಣೆ ನಮ್ಮೆಲ್ಲರ ಹೊಣೆ!

* ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹಾಕಲು ಸಹಕಾರಿ: ಬೆಲ್ಲ ತಿನ್ನುವುದರಿಂದ ದೇಹವನ್ನು ಡಿಟಾಕ್ಸ್ ಮಾಡುವುದಲ್ಲದೇ ಲಿವರ್‌ನ ಆರೋಗ್ಯವನ್ನು ಕಾಪಾಡುತ್ತದೆ. ದೇಹದ ಪ್ರಮುಖ ಅಂಗಗಳಾದ ಅನ್ನನಾಳ, ಶ್ವಾಸಕೋಶ, ಕರುಳನ್ನು ಶುದ್ಧ ಮಾಡಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

* ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಬೆಲ್ಲದಲ್ಲಿ ಪೊಟಾಷ್ಯಿಯಂ, ಸೋಡಿಯಂ ಅಂಶವು ರಕ್ತದೊತ್ತಡ ನಿಯಂತ್ರಣದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್