Types of Spoon: ಆಹಾರ ಸೇವಿಸಲು ಯಾವ ರೀತಿ ಸ್ಪೂನ್​​​ಗಳನ್ನು ಬಳಸ್ತೀರಾ? ಈ ಆಹಾರಕ್ಕೆ ಈ ಸ್ಪೂನ್ ಬಳಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 17, 2024 | 3:54 PM

ಮನೆಯಲ್ಲಿ ಅಥವಾ ಹೋಟೆಲ್ ಗೆ ಹೋದಾಗ ವಿವಿಧ ರೀತಿಯ ಸ್ಪೂನ್ ಗಳನ್ನು ನೋಡಿರುತ್ತೀರಿ. ರೆಸ್ಟೋರೆಂಟ್​​​ಗಳಲ್ಲಿ ಆಹಾರದ ಅಗತ್ಯಕ್ಕೆ ಅನುಗುಣವಾಗಿ ಚಮಚವನ್ನು ಬಳಸಲಾಗುತ್ತದೆ. ಆದರೆ ಪ್ರತಿಯೊಂದು ಚಮಚವು ಒಂದೊಂದು ವಿಶೇಷತೆಗಳನ್ನು ಒಳಗೊಂಡಿರುತ್ತದೆ. ಹಾಗಾದ್ರೆ ಯಾವ ವಿಧದ ಚಮಚಗಳನ್ನು ಹೇಗೆಲ್ಲಾ ಬಳಕೆ ಮಾಡಲಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Types of Spoon: ಆಹಾರ ಸೇವಿಸಲು ಯಾವ ರೀತಿ ಸ್ಪೂನ್​​​ಗಳನ್ನು ಬಳಸ್ತೀರಾ? ಈ ಆಹಾರಕ್ಕೆ ಈ ಸ್ಪೂನ್ ಬಳಸಿ
ಸಾಂದರ್ಭಿಕ ಸ್ಟೋರಿ
Follow us on

ಅಡುಗೆ ಮನೆಯಲ್ಲಿ ಆಹಾರ ತಯಾರಿಸುವುದರಿಂದ ಹಿಡಿದು ಬಡಿಸುವವರೆಗೂ ವಿವಿಧ ಆಕಾರ ಹಾಗೂ ಗಾತ್ರದ ಚಮಚಗಳನ್ನು ಬಳಸುತ್ತೇವೆ. ಆದರೆ ಇಂತಹದ್ದೇ ಆಹಾರವನ್ನು ಸೇವಿಸಲು ಇದೇ ರೀತಿಯ ಚಮಚಗಳನ್ನು ಬಳಸಬೇಕು ಎನ್ನುವುದು ಅನೇಕರಿಗೆ ತಿಳಿದಿಲ್ಲ. ನೀವೇನಾದರೂ ಹೋಟೆಲ್ ಗೆ ಹೋದ ಸಂದರ್ಭದಲ್ಲಿ ವಿವಿಧ ಆಹಾರಗಳನ್ನು ಆರ್ಡರ್ ಮಾಡುತ್ತೀರಿ. ಆ ವೇಳೆ ನಿಮ್ಮ ರೆಸಿಪಿಗೆ ತಕ್ಕಂತೆ ಸಣ್ಣ ಹಾಗೂ ದೊಡ್ಡ ಆಕಾರದ ಸ್ಪೂನ್ ನೀಡುತ್ತಾರೆ. ಆದರೆ ವಿವಿಧ ಆಕಾರ ಹಾಗೂ ಗಾತ್ರದ ಚಮಚಗಳ ಬಳಕೆಯ ಬಗ್ಗೆ ತಿಳಿದುಕೊಂಡಿರುವುದು ಒಳ್ಳೆಯದು.

* ಸೂಪ್ ಚಮಚ : ಈ ಚಮಚವು ದುಂಡಾಗಿದ್ದು ತಗ್ಗಾದ ಸ್ವಲ್ಪ ದೊಡ್ಡದಾಗಿರುತ್ತದೆ. ಇದನ್ನು ಸೂಪ್ ಸೇರಿದಂತೆ ದ್ರವ ರೂಪದ ಆಹಾರ ಸೇವಿಸಲು ಬಳಸಲಾಗುತ್ತದೆ.

* ಕಾಫಿ ಚಮಚ : ಇದು ಅತಿ ಚಿಕ್ಕದಾಗಿದ್ದು, ಇದನ್ನು ಚಹಾ ಅಥವಾ ಕಾಫಿ ಪುಡಿಯ ಅಳತೆಗಾಗಿ ಉಪಯೋಗಿಸಲಾಗುತ್ತದೆ.

* ಡೆಸರ್ಟ್ ಚಮಚ : ಈ ಚಮಚವು ನೋಡಲು ಗಾತ್ರದಲ್ಲಿ ಚಿಕ್ಕದಾಗಿದ್ದು, ಸಿಹಿತಿಂಡಿಗಳನ್ನು ಕತ್ತರಿಸಲು ಹಾಗೂ ತಿನ್ನಲು ಡೆಸರ್ಟ್ ಸ್ಪೂನ್ ಬಳಸಲಾಗುತ್ತದೆ.

* ಸಣ್ಣ ಟೀ ಚಮಚ: ಈ ರೀತಿಯ ಚಮಚವನ್ನು ಟೀ ಪುಡಿಯ ಅಳತೆಗಾಗಿ ಎಲ್ಲರೂ ಮನೆಯಲ್ಲಿ ಬಳಸುತ್ತಾರೆ.

* ಡಿನ್ನರ್ ಚಮಚ : ಈ ಸಿಹಿಭಕ್ಷ್ಯಗಳನ್ನು ಅಥವಾ ಅಡುಗೆಮನೆಯಲ್ಲಿ ಪದಾರ್ಥಗಳನ್ನು ಅಳೆಯಲು ಉಪಯೋಗಕ್ಕೆ ಬರುವ ಚಮಚ ಇದಾಗಿದೆ. ಪ್ರತಿಯೊಬ್ಬರೂ ಈ ಸ್ಪೂನ್ ನನ್ನು ಆಹಾರ ಸೇವನೆಗಾಗಿ ಬಳಕೆ ಮಾಡುತ್ತಾರೆ.

* ಸರ್ವಿಂಗ್ ಸ್ಪೂನ್– ಈ ಚಮಚವನ್ನು ಯಾವುದೇ ಆಹಾರ ಪದಾರ್ಥಗಳನ್ನು ಬಡಿಸಲು ಬಳಸಲಾಗುತ್ತದೆ. ಇದು ಸಾಮಾನ್ಯ ಚಮಚಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತದೆ.

* ಬೆಣ್ಣೆ ಚಾಕು : ಈ ಚಮಚ ನೋಡಲು ಬೇಡಿನಂತಿದ್ದು ತುದಿ ಭಾಗ ಮೊಂಡಾಗಿರುತ್ತದೆ. ಇದು ಬೆಣ್ಣೆ, ಜಾಮ್‌ಗಳನ್ನು ಬ್ರೆಡ್, ಚಪಾತಿ ದೋಸೆ ಲೇಪಿಸಲು ಹಾಗೂ ಕತ್ತರಿಸಿ ತಿನ್ನಲು ಬಳಸಲಾಗುತ್ತದೆ.

* ಸಲಾಡ್ ಚಮಚ : ಹಣ್ಣು, ತರಕಾರಿ ಸೇರಿದಂತೆ ವಿವಿಧ ರೀತಿಯ ಸಲಾಡ್‌ಗಳನ್ನು ಮಿಶ್ರಣ ಮಾಡಲು ಇದನ್ನು ಬಳಕೆಗೆ ಬರುತ್ತದೆ.

ಇದನ್ನೂ ಓದಿ: ಜೂನ್‌ 21ರಂದೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವುದು ಏಕೆ?

* ಸಕ್ಕರೆ ಚಮಚ : ಚಹಾ ಮತ್ತು ಕಾಫಿ ಚಮಚದಂತಿದ್ದು, ಇದು ಅಳತೆಯಲ್ಲಿ ಸ್ವಲ್ಪ ದೊಡ್ಡದಾಗಿರುತ್ತದೆ.

* ಐಸ್ ಕ್ರೀಮ್ ಚಮಚ : ಇದು ಅನೇಕ ಅಳತೆ ಹಾಗೂ ವಿನ್ಯಾಸದಲ್ಲಿ ಬರುತ್ತದೆ. ಇದನ್ನು ಐಸ್ ಕ್ರೀಮ್ ಕತ್ತರಿಸಲು ಹಾಗೂ ಬಟ್ಟಲಿನ ಗಾತ್ರಕ್ಕೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲು ಬಳಕೆ ಮಾಡಲಾಗುತ್ತದೆ.

* ಡೆಲಿ ಫೋರ್ಕ್ : ಇದು ನೋಡುವುದಕ್ಕೆ ಎರಡು ಮುಳ್ಳುಗಳನ್ನು ಹೊಂದಿದ್ದು, ಇದನ್ನು ಹಣ್ಣುಗಳ ಚೂರಾಗಿ ಕತ್ತರಿಸಿ ಸೇವಿಸಲು ಬಳಸಲಾಗುತ್ತದೆ.

* ಡಿನ್ನರ್ ಫೋರ್ಕ್ : ಈ ಫೋರ್ಕ್ ಗಾತ್ರದಲ್ಲಿ ಬೇರೆ ಪೋರ್ಕ್ ಗಿಂತ ಸ್ವಲ್ಪ ದೊಡ್ಡದಾಗಿದ್ದು, ಮಾಂಸದ ತುಂಡುಗಳನ್ನು ಕತ್ತರಿಸಿ ತಿನ್ನಲು ಸಹಾಯಕವಾಗಿದೆ.

* ಕೇಕ್ ಪೋರ್ಕ್ : ಇದು ಸಮತಟ್ಟಾದ ತ್ರಿಕೋನಾಕಾರದ ತುದಿಯನ್ನು ಹೊಂದಿದ್ದು, ಕೇಕ್‌ಗಳನ್ನು ಕತ್ತರಿಸಿ ಹಾಗೂ ಬಡಿಸಲು ಉಪಯೋಗಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: