Kannada News Lifestyle World Emoji Day 2024 : These emojis are their hidden meanings Kannada News
World Emoji Day 2024 : ಸಂವಹನದಲ್ಲಿ ಹೆಚ್ಚಾಗಿ ಬಳಸುವ ಈ ಎಮೋಜಿಗಳ ಒಳ ಅರ್ಥವೇನು? ಇಲ್ಲಿದೆ ಮಾಹಿತಿ
ಇಂದು ಎಮೋಜಿ ದಿನ, ಸೋಶಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುವಾಗ ಎಮೋಜಿಗಳನ್ನು ಬಳಸುವವರೇ ಹೆಚ್ಚು. ಅನೇಕರು ಫೇಸ್ಬುಕ್ ಮೆಸೆಂಜರ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಆ್ಯಪ್ಗಳಲ್ಲಿ ಎಮೋಜಿಗಳ ಮೂಲಕ ತಮಗೆ ಅನಿಸುವುದನ್ನು ತಿಳಿಸುತ್ತಾರೆ. ಪ್ರತಿ ವರ್ಷ ಜುಲೈ 17 ರಂದು ವಿಶ್ವ ಎಮೋಜಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಭಾರತೀಯರು ಹೆಚ್ಚಾಗಿ ಬಳಸುವ ಎಮೋಜಿಗಳ ಅರ್ಥವೇನು? ಎನ್ನುವುದರ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
ಇಂದಿನ ಡಿಜಿಟಲ್ ಯುಗದಲ್ಲಿ ಹಲವಾರು ಜನರು ಬರಹಗಳಲ್ಲಿ ಹೇಳಲಾಗದಿದ್ದನ್ನು ಇಮೋಜಿ ಮೂಲಕವೇ ತಿಳಿಸುವುದೇ ಹೆಚ್ಚು. ಹೌದು ತಮ್ಮ ಮನಸ್ಸಿನ ಭಾವನೆಗಳನ್ನು ಹಾಗೂ ತಮಗೆ ಅನಿಸಿದ್ದನ್ನು ತಿಳಿಸಲು ಬಳಸುವ ಈ ಎಮೋಜಿಗಳು ಸಣ್ಣ ಡಿಜಿಟಲ್ ಐಕಾನ್ ಗಳಾಗಿದ್ದರೂ ಇದು ಹೇಳುವ ಮಾತುಗಳು ಅದೆಷ್ಟೋ. ಎಷ್ಟೋ ಜನರ ನಡುವೆ ಸಂವಹನ ನಡೆಯುವುದೇ ಈ ಎಮೋಜಿಗಳ ಮೂಲಕ. ನೂರಾರು ಪದಗಳಲ್ಲಿ ಹೇಳುವ ಮಾತುಗಳನ್ನು ಒಂದು ಎಮೋಜಿಯಿಂದ ಅರ್ಥೈಸಿಕೊಳ್ಳಬಹುದು.
* ವಿಶ್ವ ಎಮೋಜಿ ದಿನದ ಇತಿಹಾಸ*
ಶಿಗೆಟಕಾ ಕುರಿಟಾ ಎಂಬ ಜಪಾನಿನ ಪ್ರೋಗ್ರಾಮರ್ 1999 ರಲ್ಲಿ ಎಮೋಜಿಗಳನ್ನು ಪರಿಚಯಿಸಿದರು. ಈ ಸಣ್ಣ ಸಂದೇಶಗಳನ್ನು ಪರಿಣಾಮಕಾರಿಯಾಗಿ ರವಾನಿಸಲು ಪೇಜರ್‌ಗಳನ್ನು ವಿನ್ಯಾಸಗೊಳಿಸಲಾಯಿತು. ಪ್ರಾರಂಭದಲ್ಲಿ ಇದು ಹೃದಯದ ಆಕಾರದ ಎಮೋಟಿಕಾನ್‌ಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಮೂಲಕ ಇತ್ತದಾದರೂ, ಆದರೆ ಇದೀಗ ಯುನಿಕೋಡ್ ಕನ್ಸೋರ್ಟಿಯಂ ಎಲ್ಲಾ ಸಾಫ್ಟ್‌ವೇರ್ ಸಿಸ್ಟಮ್‌ಗಳಲ್ಲಿ ಎಮೋಜಿಗಳನ್ನು ಅಭಿವೃದ್ಧಿಪಡಿಸಿದೆ. ಆದರೆ ಪ್ರಾರಂಭಿಕ ಹಂತದಲ್ಲಿ ಈ ಸನ್ನೆಗಳ ರೂಪದಲ್ಲಿದ್ದವು ಕ್ರಮೇಣವಾಗಿ ಎಮೋಜಿಗಳಾಗಿ ವಿಕಸನಗೊಂಡವು. ಹೀಗಾಗಿ ಪ್ರತಿ ವರ್ಷ ಜುಲೈ 17 ರಂದು ವಿಶ್ವ ಎಮೋಜಿ ದಿನವನ್ನು ಆಚರಿಸಲಾಗುತ್ತದೆ.
ಈ ಎಮೋಜಿಗಳ ಒಳಅರ್ಥಗಳು :
😪 ಮಲಗುವ ಮುಖದ ಎಮೋಜಿ : ಸಾಮಾನ್ಯವಾಗಿ ಈ ಎಮೋಜಿಯನ್ನು ಬೇಸರ ವ್ಯಕ್ತಪಡಿಸಲು ಬಳಸುವುದೇ ಹೆಚ್ಚು. ಆದರೆ ಇದು ಆಯಾಸ ಅಥವಾ ನಿದ್ರೆ ಇಲ್ಲದೆ ಇರುವುದರಿಂದ ಮಲಗಿರುವ ವೇಳೆ ಕೆನ್ನೆ ಮೇಲೆ ಕಣ್ಣೀರ ಹನಿ ಬರುವ ಅರ್ಥವನ್ನು ನೀಡುತ್ತದೆ.
🙆♀️ ಓಕೆ ಇಮೋಜಿ : ಹೆಚ್ಚಿನವರು ಈ ಓಕೆ ಎಮೋಜಿಯನ್ನು ಬಳಸುತ್ತಾರೆ. ಆದರೆ ಏನಾದರೂ ತಪ್ಪಾದರೆ ಈ ಎಮೋಜಿಯನ್ನು ಬಳಸುತ್ತೇವೆ. ಆದರೆ ಇದರ ಅರ್ಥ ಓಕೆ ಎನ್ನುವುದಾಗಿದೆ. ಇದು ಬಹುತೇಕರಿಗೆ ತಿಳಿದಿಲ್ಲ.
❤️ ಹಾರ್ಟ್ : ಬಹುತೇಕರು ಬಳಸುವ ಅತ್ಯಂತ ಜನಪ್ರಿಯ ಎಮೋಜಿಗಳಲ್ಲಿ ಇದು ಒಂದು. ತಮ್ಮ ಮನದಾಳದ ಪ್ರೀತಿಯನ್ನು ತಿಳಿಸಲು ಮತ್ತು ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ.
😭 ಜೋರಾಗಿ ಅಳುತ್ತಿರುವ ಮುಖದ ಎಮೋಜಿ : ತೆರೆದ ಬಾಯಿ ಮತ್ತು ಕಣ್ಣಿನಿಂದ ಕಣ್ಣೀರಿನ ಧಾರೆ ಇದು ಅನೇಕ ರೀತಿಯ ಭಾವನೆಯನ್ನು ಹೊರ ಹಾಕುತ್ತದೆ. ಆದರೆ ಇದು ದುಃಖವನ್ನು ಸೂಚಿಸುತ್ತದೆ.
😂 ನಗುತ್ತಿರುವ ಎಮೋಜಿ : ಇದು ಸಂತೋಷವನ್ನು ವ್ಯಕ್ತಿ ಪಡಿಸುವ ಎಮೋಜಿಯಾಗಿದೆ. ಸಂತೋಷವಾದಾಗಲೂ ಕಣ್ಣಿನಿಂದ ಕಣ್ಣೀರು ಬರುತ್ತದೆ ಎನ್ನುವುದನ್ನು ತೋರ್ಪಡಿಸುತ್ತದೆ. ಈ ಎಮೋಜಿ ಸೇಡು ತೀರಿಸಿಕೊಳ್ಳುವ ಭಾವನೆಯನ್ನು ವ್ಯಕ್ತಪಡಿಸುತ್ತದೆ.
🤣 ಅಡ್ಡ-ನಗುತ್ತಿರುವ ಎಮೋಜಿ : ಈ ಎಮೋಜಿಯನ್ನು ಸಂವಹನದ ವೇಳೆ ಅತಿಯಾಗಿ ಬಳಸಲಾಗುತ್ತದೆ. ಇದು ಅನಿಯಮಿತ ನಗುವಿನ ಅರ್ಥವನ್ನು ನೀಡುತ್ತದೆ. ಅದಲ್ಲದೇ ಶಿಕ್ಷೆಯನ್ನು ನೀಡಿದ ಸಂದರ್ಭದಲ್ಲಿ ನಗುವುದು ಕೂಡ ಈ ಎಮೋಜಿ ಅರ್ಥವಾಗಿದೆ.
💁♀️ ಮಾಹಿತಿ ನೀಡುವ ವ್ಯಕ್ತಿಯ ಎಮೋಜಿ : ಈ ಇಮೋಜಿಯು ವ್ಯಕ್ತಿಯು ಯಾವುದೇ ಮಾಹಿತಿ ನೀಡುವುದಾಗಿದೆ. ಇಲ್ಲವಾದರೆ ಯಾವುದೇ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿರುವ ಅರ್ಥವನ್ನು ನೀಡುತ್ತದೆ. ಆದರೆ ಸಂವಹನದಲ್ಲಿ ಬಳಸುವಾಗ ಇದನ್ನು ಉದ್ವೇಗದ ಭಾವನೆಯನ್ನು ಹೊರಹಾಕುವುದು ಅಥವಾ ಪ್ರಶ್ನಿಸುವುದು ಎಂದು ಭಾವಿಸಿದ್ದೇವೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ