ಕುಟುಂಬದಲ್ಲಾಗಿರಬಹುದು ಅಥವಾ ನಮ್ಮ ಕೆಲಸದ ಸ್ಥಳದಲ್ಲಾಗಿರಬಹುದು ಕೆಲವೊಮ್ಮೆ ಅವಮಾನವನ್ನು ಎದುರಿಸಬೇಕಾಗುತ್ತದೆ. ಅವಮಾನ ಮಾಡಿದಾಕ್ಷಣ ಏಕಾಏಕಿ ನಾವು ಕೂಡ ಕಟುವಾಗಿ ಮಾತನಾಡಿ ಅವರ ಹಂತಕ್ಕೆ ಇಳಿಯಬೇಕು ಎಂದೇನಿಲ್ಲ ಆದರೆ, ಅವಮಾನವನ್ನು ಎದುರಿಸುವ ಬಗೆ ನಿಮಗೆ ಗೊತ್ತಿರಬೇಕು.
ಅವಮಾನಗಳು ಉದ್ದೇಶಪೂರ್ವಕವಾಗಿರುತ್ತವೆ, ನೋವುಂಟುಮಾಡುತ್ತವೆ ಮತ್ತು ವ್ಯಕ್ತಿಯ ಭಾವನೆಗೆ ಹಾನಿಯುಂಟಾಗುತ್ತದೆ. ಅನೇಕವೇಳೆ, ನಮ್ಮ ಹಿಂದಿನ ಆಘಾತಗಳು ಮತ್ತು ನಮ್ಮ ಅನುಭವಗಳನ್ನು ಅವಮಾನವಾಗಿ ರೂಪಿಸಲು ಮತ್ತು ಅದನ್ನು ಹೆಚ್ಚು ನೋಯಿಸುವ ಸಲುವಾಗಿ ಆಯುಧಗಳಂತೆ ಜನರು ಬಳಕೆ ಮಾಡುತ್ತಾರೆ, ಅಂತಹ ಸಂದರ್ಭಗಳಲ್ಲಿ, ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಮಾತು ನಿಲ್ಲಿಸುವಂತೆ ಹೇಳಿ: ನಮ್ಮ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಅವರು ಮಾತಣಾಡುತ್ತಿದ್ದರೆ, ಮೊದಲು ಮಾತನ್ನು ನಿಲ್ಲಿಸುವಂತೆ ಕೇಳಿ.
ಗೌರವ: ಏಕ ವಚನದಲ್ಲಿ ಮಾತನಾಡುವುದು ಅಥವಾ ಮಾಡದ ತಪ್ಪನ್ನು ಪದೇ ಪದೇ ಹೇಳಿ, ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತಿರುವಾಗ, ನಮ್ಮ ಬಳಿ ಗೌರವದಿಂದ ವರ್ತಿಸುವಂತೆ ಕೇಳಿಕೊಳ್ಳಬೇಕು.
ದೂರ ಹೋಗುವುದು: ವಿಷಯಗಳು ಹಾದಿ ತಪ್ಪುತ್ತಿವೆ ಎಂದಾಗ ಆ ಸ್ಥಳದಿಂದಲೇ ನೀವು ದೂರ ಹೋಗುವುದು ಒಳಿತು. ಇದರಿಂದ ನಿಮ್ಮ ಮನಸ್ಸು ಬೇಸರಗೊಳ್ಳುವುದು ತಪ್ಪುತ್ತದೆ.
ವಿವರಣೆ: ವಿವರಣೆಯನ್ನು ಕೇಳುವುದು ವಾದ ಅಥವಾ ಸಂಭಾಷಣೆಯ ಬಗ್ಗೆ ಹೆಚ್ಚು ಸ್ಪಷ್ಟತೆಯನ್ನು ಪಡೆಯಲು ನಮಗೆ ಸಹಾಯ ಮಾಡುತ್ತದೆ.
ಹಾಸ್ಯಗಳು ಅವಮಾನವಾಗಬಹುದು: ಕೆಲವೊಮ್ಮೆ ಹಾಸ್ಯಗಳನ್ನು ಅವಮಾನವಾಗಿ ರೂಪುಗೊಳ್ಳಬಹುದು, ಅಂತಹ ಸಂದರ್ಭಗಳಲ್ಲಿ, ನಾವು ಕೂಡ ಹಾಸ್ಯದ ರೂಪದಲ್ಲಿಯೇ ಮಾತನಾಡಿ ಹೊರ ಬಂದುಬಿಡಬೇಕು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ