ನಕ್ಷತ್ರ ವೀಕ್ಷಣೆಯು ಒಂದು ಅದ್ಭುತ ಮತ್ತು ವಿಸ್ಮಯಕಾರಿ ಚಟುವಟಿಕೆಯಾಗಿದ್ದು, ಅದು ರಾತ್ರಿಯ ಆಕಾಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅನುವು ಮಾಡಿಕೊಡುತ್ತದೆ. ಬ್ರಹ್ಮಾಂಡದ ವಿಶಾಲತೆ ಮತ್ತು ರಾತ್ರಿಯ ಆಕಾಶದ ಸೌಂದರ್ಯವು ಯಾವಾಗಲೂ ಮಾನವನ ಕಲ್ಪನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ನಕ್ಷತ್ರ ವೀಕ್ಷಣೆಯು ಮನಸ್ಸನ್ನು ಶಾಂತಗೊಳಿಸುವ ಮತ್ತು ಧ್ಯಾನಸ್ಥ ಚಟುವಟಿಕೆಯಾಗಿದೆ. ನಕ್ಷತ್ರ ವೀಕ್ಷಣೆಯ ಒಂದೊಳ್ಳೆ ಅನುಭವವನ್ನು ಪಡೆಯಬೇಕೆಂದರೆ ನಗರ ದೀಪಗಳು ಮತ್ತು ಬೆಳಕಿನ ಸ್ಥಳಗಳಿಂದ ದೂರವಿರುವ ಸ್ಥಳಗಳನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ.
ನಕ್ಷತ್ರ ವೀಕ್ಷಣೆಯ ಚಟುವಟಿಕೆಗೆ ಯಾವ ಸ್ಥಳ ಸೂಕ್ತ, ಯಾವ ಸಮಯದಲ್ಲಿ ನಕ್ಷತ್ರ ವೀಕ್ಷಣೆ ಮಾಡುವುದು ಉತ್ತಮ ಎಂಬುದರ ಬಗ್ಗೆ ತಜ್ಞರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ನಮ್ಮ ಜೀವನ ಶೈಲಿ ಬೇರೆಯಾಗಿರಬಹುದು, ಯೋಗ ನಮ್ಮನ್ನು ಪರಸ್ಪರ ಬೆಸೆದಿದೆ: ಸಿಡ್ನಿಯಲ್ಲಿ ಮೋದಿ ಭಾಷಣ
ಸ್ಟಾರ್ ಸ್ಕೇಪ್ಸ್ ನ ಸಿಇಒ ಮತ್ತು ಸಹಸಂಸ್ಥಾಪಕರಾದ ಪಾಲ್ ಸವಿಯೊ ಅವರು ಹೆಚ್.ಟಿ. ಲೈಫ್ ಸ್ಟೈಲ್ ಸಂದರ್ಶನದಲ್ಲಿ ಭಾರತದಲ್ಲಿ ನಕ್ಷತ್ರ ವೀಕ್ಷಣೆಗೆ ಹೋಗಲು ಉತ್ತಮ ಸಮಯದ ಕುರಿತು ಹೇಳಿದರು, ನೀವು ಎಲ್ಲಿದ್ದೀರಿ ಎಂಬುದರ ಆಧಾರದ ಮೇಲೆ ಇದು ಬದಲಾಗುತ್ತದೆ. ಹಿಮಾಲಯದ ಪಟ್ಟಣಗಳಲ್ಲಿ ಬೇಸಿಗೆಯ ಸಮಯ ಸಾಮಾನ್ಯವಾಗಿ ನಕ್ಷತ್ರ ವೀಕ್ಷಣೆಗೆ ಉತ್ತಮವಾಗಿರುತ್ತದೆ. ಹಾಗೂ ಮಳೆಗಾಲದ ನಂತರ ಅದರಲ್ಲೂ ವಿಶೇಷವಾಗಿ ದೀಪಾವಳಿಯ ನಂತರ, ದೇಶಾದ್ಯಂತ ಆಕಾಶವು ಸ್ಪಷ್ಟವಾಗುತ್ತದೆ. ಈ ಚಳಿಗಾಲದ ಸಮಯವು ನಕ್ಷತ್ರ ವೀಕ್ಷಣೆಗೆ ಉತ್ತಮ ಸಮಯವಾಗಿದೆ.”
ಸ್ಪೇಸ್ ಆರ್ಕೇಡ್ ನ ಸಿ.ಇ.ಒ ನೀರಜ್ ಲಾಡಿಯಾ ಹೇಳುತ್ತಾರೆ, ಸಾಮಾನ್ಯವಾಗಿ ನೀವು ಇಡೀ ಭಾರತವನ್ನು ನೋಡಿದರೆ, ಹೆಚ್ಚಾಗಿ ಮೇ ಅಥವಾ ಜೂನ್ ಮಧ್ಯದಿಂದ ಮಳೆಗಾಲ ಶುರುವಾಗುತ್ತದೆ. ಆದ್ದರಿಂದ ಜೂನ್, ಜುಲೈ, ಆಗಸ್ಟ್ ಈ ತಿಂಗಳುಗಳು ನಕ್ಷತ್ರ ವೀಕ್ಷಣೆಗೆ ಸೂಕ್ತ ಸಮಯವಲ್ಲ. ಆದರೆ ನೀವು ಹಿಮಾಲಯ, ಸ್ಪಿತಿ ಕಣಿವೆ, ಲಡಾಖ್ ಅಥವಾ ಲೇಹ್ ನಂತಹ ಕಡಿಮೆ ಮಳೆಯಿರುವ ಪ್ರದೇಶದಲ್ಲಿದ್ದರೆ, ಅಲ್ಲಿ ಜೂನ್, ಜುಲೈ ನಕ್ಷತ್ರ ವೀಕ್ಷಣೆಗೆ ಉತ್ತಮ ಸಮಯ. ಒಟ್ಟಾರೆಯಾಗಿ ಇಡೀ ಭಾರತದ ಬಗ್ಗೆ ಮಾತನಾಡುವುದಾದರೆ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳು ನಕ್ಷತ್ರ ವೀಕ್ಷಣೆಗೆ ಉತ್ತಮ ಸಮಯವಲ್ಲ. ಆಕಾಶವು ಸ್ಪಷ್ಟವಾಗಿರುವ ಸಮಯದಲ್ಲಿ ಅಂದರೆ ಸಪ್ಟೆಂಬರ್ ನಿಂದ ಅಕ್ಟೋಬರ್ ನಕ್ಷತ್ರ ವೀಕ್ಷಣೆಗೆ ಸೂಕ್ತ ಸಮಯವಾಗಿದೆ.”
ನೀರಜ್ ಲಾಡಿಯಾ ಅವರ ಪ್ರಕಾರ, ಭಾರತದಲ್ಲಿ ಸ್ಪಷ್ಟ ಆಕಾಶವು ಲೇಹ್ ಮತ್ತು ಲಡಾಕ್ ಪ್ರದೇಶದಲ್ಲಿದೆ. ಸ್ಪಿತಿ ಕಣಿವೆ, ಲಡಾಖ್, ಲೇಹ್ ಪ್ರದೇಶಗಳು ನಕ್ಷತ್ರ ವೀಕ್ಷಣೆಗೆ ಉತ್ತಮ ಸ್ಥಳಗಳು. ಮತ್ತು ಅವರು ವಿವರಿಸಿದರು, ಕಡಿಮೆ ಜನನಿಬಿಡ ಪ್ರದೇಶಗಳಲ್ಲಿ ಆಕಾಶವು ತುಂಬಾ ಸ್ಪಷ್ಟವಾಗಿರುತ್ತವೆ. ರಾಜಸ್ಥಾನದ ಜೈಸಲ್ಮೇರ್ ಪ್ರದೇಶ ಉತ್ತಮವಾಗಿದೆ. ಇದರ ಹೊರತಾಗಿ ರಾಷ್ಟ್ರೀಯ ಉದ್ಯಾನವನಗಳು ಹಾಗೂ ಹುಲಿಸಂರಕ್ಷಿತ ಪ್ರದೇಶಗಳಲ್ಲೂ ಆಕಾಶ ಸ್ಪಷ್ಟವಾಗಿರುತ್ತದೆ. ಜನವಾಸ್ತವ್ಯವಿರದ, ನಗರಗಳಿಂದ ದೂರವಿರುವ ಆಕಾಶವು ಸ್ಪಷ್ಟವಾಗಿರುವುದರಿಂದ ಅಲ್ಲಿ ಹೋಗಿ ನಕ್ಷತ್ರ ವೀಕ್ಷಣೆಯನ್ನು ಮಾಡಬಹುದು.
ಪಾಲ್ ಸವಿಯೋ ಸಲಹೆ ನೀಡಿದರು, ಬೇರೆ ಹವ್ಯಾಸಗಳಂತೆ ಇದನ್ನು ಕೂಡಾ ಸುಲಭವಾಗಿ ಪ್ರಾರಂಭಿಸಿ. ಸುಲಭವಾಗಿ ಪ್ರವೇಶಿಸಬಹುದಾದಂತಹ ಸ್ಪಷ್ಟ ಆಕಾಶವಿರುವಂತಹ ಸ್ಥಳವನ್ನು ಆಯ್ಕೆ ಮಾಡಿ. ಸ್ಕೈಮ್ಯಾಪ್ನ್ನು ನಿಮ್ಮ ಜೊತೆಗಿರಿಸಿ, ವಿವಿಧ ನಕ್ಷತ್ರಗಳು, ನಕ್ಷತ್ರಪುಂಜಗಳು ಮತ್ತು ಗ್ರಹಗಳನ್ನು ಹೇಗೆ ಗುರುತಿಸುವುದು ಎಂದು ತಿಳಿಯಿರಿ. ಚಂದ್ರ, ಗ್ರಹಗಳು ಆಕಾಶಕಾಯಗಳನ್ನು ವೀಕ್ಷಿಸಲು ಒಂದು ಜೋಡಿ ಬೈನಾಕ್ಯುಲರ್ ನ್ನು ತೆಗೆದುಕೊಂಡು ಹೋಗುವುದು ಉತ್ತಮ.”
ನೀರಜ್ ಲಾಡಿಯಾ ಅವರು ಸಲಹೆ ನೀಡಿದರು, ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ನಕ್ಷತ್ರ ವೀಕ್ಷಣೆಗೆ ಯಾವಾಗ ಹೋಗಬೇಕೆಂಬುವುದನ್ನು ತಿಳಿದಿರಬೇಕು. ಮತ್ತು ಅಮವಾಸ್ಯೆಗೆ ಸಮೀಪವಿರುವ ದಿನಗಳಲ್ಲಿ ವೀಕ್ಷಣೆಗೆ ಹೋಗಬೇಕು. ಏಕೆಂದರೆ ಇತರ ದಿನಗಳಲ್ಲಿ ಚಂದ್ರನ ಬೆಳಕು ಪ್ರಕಾಶಮಾನವಾಗಿರುತ್ತವೆ. ಎಲ್ಲರೂ ಲಡಾಖ್ ನಂತಹ ಪ್ರದೇಶಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ನೀವು ವಾಸ್ತವ್ಯವಿರುವ ಸ್ಥಳದ ಸಮೀಪದಲ್ಲಿ ಇರುವ ನಿರ್ಜನ ಕತ್ತಲೆಯ ವಲಯಗಳಲ್ಲಿ ನಕ್ಷತ್ರ ವೀಕ್ಷಣೆ ಮಾಡಬಹುದು.”
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: