ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ

ಆರೋಗ್ಯ ಚೆನ್ನಾಗಿರ್ಬೇಕಂದ್ರೆ ಆಹಾರ ಪದ್ಧತಿ ಸಮರ್ಪಕವಾಗಿರಬೇಕು. ಹಾಗೆಯೇ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದು ಕೂಡ ತುಂಬಾನೇ ಮುಖ್ಯ. ಪ್ರತಿಯೊಬ್ಬರೂ ಬೆಳಗ್ಗಿನ ಉಪಹಾರವನ್ನು 10 ಗಂಟೆಯೊಳಗೆ ಮಾಡಿ ಮುಗಿಸುತ್ತಾರೆ. ಅದೇ ರೀತಿ ರಾತ್ರಿ ಊಟವನ್ನು ಕೂಡ ಒಂದು ನಿಗದಿತ ಸಮಯದೊಳಗೆ ಮಾಡಿ ಮುಗಿಸಬೇಕಂತೆ. ಹಾಗಿದ್ರೆ ರಾತ್ರಿ ಊಟ ಮಾಡಲು ಬೆಸ್ಟ್‌ ಸಮಯ ಯಾವುದು ಎಂಬುದನ್ನು ನೋಡೋಣ.

ಆರೋಗ್ಯ ಚೆನ್ನಾಗಿರಬೇಕಂದ್ರೆ, ರಾತ್ರಿ ಈ ನಿಗದಿತ ಸಮಯದೊಳಗೆ ಊಟ ಮಾಡುವುದು ಸೂಕ್ತವಂತೆ
ಸಾಂದರ್ಭಿಕ ಚಿತ್ರ
Image Credit source: Pexels

Updated on: Dec 06, 2025 | 5:17 PM

ಆರೋಗ್ಯಕರವಾಗಿರಲು ಆರೋಗ್ಯಕರ, ಪೌಷ್ಟಿಕಾಂಶಯುಕ್ತ ಆಹಾರವನ್ನು (food) ಸೇವನೆ ಮಾಡುವುದು ಎಷ್ಟು ಮುಖ್ಯವೋ, ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡುವುದು ಕೂಡ ಅಷ್ಟೇ ಮುಖ್ಯ. ಹೌದು ಬೆಳಗ್ಗೆ ಒಂದು ನಿಗದಿತ ಸಮಯದೊಳಗೆ ಉಪಹಾರ ಸೇವನೆ ಮಾಡ್ಬೇಕು ಎಂದು ಹೇಳುವಂತೆ, ರಾತ್ರಿಯ ಊಟವನ್ನು ಸಹ ನಿಗದಿತ ಸಮಯದೊಳಗೆ ಮಾಡಿ ಮುಗಿಸಬೇಕು. ಬಹುತೇಕರು ರಾತ್ರಿ ತಡವಾಗಿ ಆಹಾರ ಸೇವನೆ ಮಾಡುತ್ತಾರೆ, ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಆರೋಗ್ಯವಂತರಾಗಿರಲು ಈ ನಿಗದಿತ ಸಮಯದೊಳಗೆ ಊಟ ಮಾಡಿ ಮುಗಿಸಬೇಕು.

ರಾತ್ರಿ ಊಟ ಮಾಡಲು ಸರಿಯಾದ ಸಮಯ ಯಾವುದು?

ಹೆಚ್ಚಿನವರು  ರಾತ್ರಿ 9 ಗಂಟೆಯ ನಂತರವೇ ಊಟ ಮಾಡುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಂಜೆ 6 ರಿಂದ ರಾತ್ರಿ 8 ಗಂಟೆಯ ಒಳಗೆ ರಾತ್ರಿಯ ಊಟವನ್ನು ಮಾಡಬೇಕಂತೆ. ಈ ಅಭ್ಯಾಸವು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ.

ಇದನ್ನೂ ಓದಿ: ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು ಸೇವಿಸಿ ಪಾನೀಯ

ರಾತ್ರಿ ಹೊತ್ತು ಬೇಗ ಊಟ ಮಾಡುವುದರ ಪ್ರಯೋಜನಗಳೇನು?

  • ರಾತ್ರಿ ಬೇಗ ಊಟ ಮಾಡುವುದರಿಂದ ದೇಹವು ಮಲಗುವ ಮುನ್ನ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಇದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
  • ನಾವು ಮಲಗುವ 2 ರಿಂದ 3 ಗಂಟೆಗಳ ಮೊದಲು ಊಟ ಮಾಡಿದಾಗ ದೇಹಕ್ಕೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ. ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ. ಅದೇ ತಡವಾಗಿ ತಿನ್ನುವುದರಿಂದ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ, ಇದು ನಿದ್ರೆಗೂ ಅಡ್ಡಿಪಡಿಸುತ್ತದೆ.
  • ರಾತ್ರಿ ಗೊತ್ತು ಬೇಗ ಊಟ ಮಾಡುವ ಅಭ್ಯಾಸ ತೂಕ ನಿರ್ವಹಣೆಗೂ ತುಂಬಾನೇ ಸಹಕಾರಿ.
  • ಸಂಜೆ 6 ರಿಂದ 8 ಗಂಟೆಯ ಒಳಗೆ ಭೋಜನ ಮಾಡುವುದರಿಂದ ಮೆಲಟೋನಿನ್‌ ಮತ್ತು ಕಾರ್ಟಿಸೋಲ್‌ನಂತಹ ಹಾರ್ಮೋನುಗಳು ಸಮತೋಲನದಲ್ಲಿರುತ್ತದೆ. ಇದು ದೇಹದ ಸಿರ್ಕಾಡಿಯಲ್‌ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
  • ರಾತ್ರಿ ಬೇಗ ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Sat, 6 December 25