ಸಾಮಾನ್ಯವಾಗಿ ಸುಂದರವಾಗಿ ಕಾಣಬೇಕು ಎಂದು ಎಲ್ಲರೂ ಬಯಸುತ್ತಾರೆ, ಆದರೆ ಬಹಳಷ್ಟು ಮಂದಿಯಲ್ಲಿ ಈ ಬ್ಲ್ಯಾಕ್ ಹೆಡ್ಸ್ ಮತ್ತು ವೈಡ್ಹೆಡ್ಸ್ ಸಮಸ್ಯೆ ಕಾಡುತ್ತಿದೆ. ಹೆಚ್ಚು ಎಣ್ಣೆಯ ಪದಾರ್ಥಗಳನ್ನು ಸೇವಿಸುವುದರಿಂದ ವೈಟ್ಹೆಡ್ಸ್ ಬರುತ್ತದೆ ಎಂದು ಕೆಲವರು ಅಂದುಕೊಂಡಿದ್ದಾರೆ ಆದರೆ ಅದಕ್ಕೆ ಬೇರೆಯ ಕಾರಣಗಳು ಇವೆ, ಅವುಗಳನ್ನು ಹೋಗಲಾಡಿಸಲು ಮನೆಮದ್ದುಗಳು ಕೂಡ ಇವೆ.
ವೈಟ್ ಹೆಡ್ಸ್‌ಗೆ ಕಾರಣಗಳೇನು?
ಕೆಲವು ಕಾರಣಗಳಿಂದಾಗಿ ಸೆಬಮ್ ಎಂಬ ನೈಸರ್ಗಿಕ ಎಣ್ಣೆ ಅಧಿಕವಾಗಿ ಉತ್ಪಾದನೆಯಾಗುತ್ತದೆ. ಇದು ಕೂದಲು ಮತ್ತು ಸತ್ತ ಚರ್ಮದ ಕೋಶಗಳೊಂದಿಗೆ ಚರ್ಮದ ರಂಧ್ರವನ್ನು ಮುಚ್ಚುತ್ತದೆ. ಚರ್ಮದ ಎಪಿಡರ್ಮಿಸ್ ಮೇಲಿನ ಬ್ಯಾಕ್ಟೀರಿಯಾಗಳು ಮುಚ್ಚಿಹೋಗಿರುವ ರಂಧ್ರದಲ್ಲಿ ನೆಲೆಸುತ್ತವೆ ಮತ್ತು ಬೆಳೆಯಲು ಪ್ರಾರಂಭಿಸುತ್ತವೆ. ಇದು ಚರ್ಮದ ಉರಿಯೂತಕ್ಕೆ ಕಾರಣವಾಗುತ್ತದೆ.
ವೈಟ್ಹೆಡ್ಸ್ ಹೋಗಲಾಡಿಸುವುದು ಹೇಗೆ?
ಅರೋಗ್ಯಕರ ಆಹಾರವನ್ನು ಸೇವಿಸಿ
ನಿಮ್ಮ ಚರ್ಮವನ್ನು ಶುಚಿಯಾಗಿರಿಸಿಕೊಳ್ಳಿ, ನಂತರ ಆರೋಗ್ಯಕರ ಆಹಾರ ಸೇವಿಸಿ. ನಿಯಮಿತವಾಗಿ ವ್ಯಾಯಾಮವನ್ನು ಮಾಡಿ. ಮುಖದ ಮೇಲೆ ಇಲ್ಲ ಸಲ್ಲದ ಸೌಂದರ್ಯದ ಉತ್ಪನ್ನಗಳನ್ನು ಹಚ್ಚುವುದನ್ನು ಬಿಡಿ. ಹಾಗೆಯೇ ನಿಮ್ಮ ಕೂದಲನ್ನು ನಿಮ್ಮ ಮುಖದಿಂದ ದೂರವಿಡಿ. ಜೊತೆಗೆ ವೈಟ್ ಹೆಡ್ಸ್ ತೊಲಗಿಸಲು ನಿಮಗೆ ಸಹಾಯ ಮಾಡುವ ಅನೇಕ ಮನೆಮದ್ದುಗಳಿದ್ದು, ಅವುಗಳಲ್ಲಿ ಕೆಲವನ್ನು ನೋಡೋಣ.
ನಿಂಬೆ ರಸ
ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಮುಖದ ಮೇಲೆ ನಿಂಬೆ ರಸವನ್ನು ಹಚ್ಚುವುದರಿಂದ ಚರ್ಮ ಒಣಗುತ್ತದೆ. ನಿಂಬೆ ರಸವು ಆಮ್ಲೀಯ ಮಾತ್ರವಲ್ಲದೆ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಸಹ ಹೊಂದಿದೆ. ಆದ್ದರಿಂದ ನಿಮ್ಮ ಮುಖಕ್ಕೆ ನಿಂಬೆ ರಸವನ್ನು ನೀವು ಸುರಕ್ಷಿತವಾಗಿ ಬಳಸಬಹುದು.
ಆದರೆ ನಿಮಗಿದು ತುಂಬಾ ಸ್ಟ್ರಾಂಗ್ ಇದೆ ಎನಿಸಿದರೆ, ನಿಂಬೆ ರಸವನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ, ನಂತರ ಹತ್ತಿಯನ್ನು ಇದರಲ್ಲಿ ಅದ್ದಿ ವೈಟ್ ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ. ಅರ್ಧ ಗಂಟೆಯ ನಂತರ ತೊಳೆಯಿರಿ.
ಸ್ಟೀಂ ತೆಗೆದುಕೊಳ್ಳಿ
ನಿಮ್ಮ ಚರ್ಮವನ್ನು ಹಬೆಗೆ ಒಡ್ಡಿದಾಗ, ನಿಮ್ಮ ಮುಖದ ರಂಧ್ರಗಳು ತೆರೆದುಕೊಳ್ಳುತ್ತವೆ. ಆದ್ದರಿಂದ ಸ್ವಲ್ಪ ಕುದಿಯುವ ನೀರನ್ನು ಒಂದು ಬಟ್ಟಲಿಗೆ ಹಾಕಿರಿ. ನಂತರ ಹಬೆಗೆ ನಿಮ್ಮ ಮುಖವನ್ನು ಒಡ್ಡಿ. ಆದರೆ ನಿಮ್ಮ ಮುಖವನ್ನು ನೀರಿನ ಹತ್ತಿರ ತೆಗೆದುಕೊಂಡು ಹೋಗಬೇಡಿ. ಇದರಿಂದ ಚರ್ಮ ಮತ್ತಷ್ಟು ಸುಡುವ ಸಾಧ್ಯತೆಯಿದೆ.
ಆಪಲ್ ಸೈಡರ್ ವಿನೆಗರ್
ಕೇವಲ 2 ಚಮಚ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಈ ಮಿಶ್ರಣವನ್ನು ನೇರವಾಗಿ ನಿಮ್ಮ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯವರೆಗೆ ಬಿಡಿ. ನಂತರ ಸ್ವಚ್ಛವಾದ, ಮೃದುವಾದ ಟವೆಲ್‌ನಿಂದ ಒರೆಸಿ. ಇತ್ತೀಚಿನ ದಿನಗಳಲ್ಲಿ ಆಪಲ್ ಸೈಡರ್ ವಿನೆಗರ್ ಸುಲಭವಾಗಿ ಎಲ್ಲೆಡೆ ಲಭ್ಯವಿದೆ. ನೀವು ಇದನ್ನು ಆನ್ ಲೈನ್ ಅಥವಾ ನಿಮ್ಮ ನೆರೆಹೊರೆಯ ಕಿರಾಣಿ ಅಂಗಡಿಯಿಂದ ಖರೀದಿಸಬಹುದು.ಆಪಲ್ ಸೈಡರ್ ವಿನೆಗರ್ ಸಹ ವೈಟ್ ಹೆಡ್ಸ್ ತೊಲಗಿಸಲು ಸಹಾಯ ಮಾಡುತ್ತದೆ. ಆಸಿಡ್ ಆಸ್ಟ್ರಿಜೆಂಟ್ ಎಂದು ಕರೆಯಲ್ಪಡುವ ಆಪಲ್ ಸೈಡರ್ ವಿನೆಗರ್, ರಂಧ್ರಗಳನ್ನು ಒಣಗಿಸುತ್ತದೆ ಮತ್ತು ಕುಗ್ಗಿಸುತ್ತದೆ.
ಟೀ ಟ್ರೀ ಎಣ್ಣೆ ಸುರಕ್ಷಿತ ಮದ್ದು
ಮಾರುಕಟ್ಟೆಯಲ್ಲಿ ಮತ್ತು ಆನ್ ಲೈನ್ ಮಳಿಗೆಗಳಲ್ಲಿ ಇದು ಸುಲಭವಾಗಿ ಲಭ್ಯವಿದೆ. ಟೀ ಟ್ರೀ ಎಣ್ಣೆ ತುಂಬಾ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದ್ದು, ಈ ಎಣ್ಣೆಯನ್ನು ನಿಮ್ಮ ಚರ್ಮದ ಮೇಲೆ ವೈಟ್ಸ್ ಹೆಡ್ಸ್ ಜಾಗಕ್ಕೆ ನೇರವಾಗಿ ಹಚ್ಚಬಹುದು. ಮುಖಕ್ಕೆ ಟೀ ಟ್ರೀ ಎಣ್ಣೆ ಹಚ್ಚುವುದರಿಂದಲೂ ತುಂಬಾ ಸಹಾಯವಾಗುತ್ತದೆ.
ಜೇನುತುಪ್ಪ
ಜೇನುತುಪ್ಪ ಚರ್ಮದ ಆಳಕ್ಕೆ ಹೋಗಿ ಗುಣಪಡಿಸುವ ಶಕ್ತಿ ಹೊಂದಿದೆ. ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಕೇವಲ ಒಂದು ಚಮಚ ಜೇನುತುಪ್ಪವನ್ನು ಬಿಸಿ ಮಾಡಿ. ಆರಾಮದಾಯಕವಾದ ಬೆಚ್ಚಗಿನ ತಾಪಮಾನದಲ್ಲಿ ಇರಿಸಿ. ಮುಖವನ್ನು ಸ್ವಚ್ಛಗೊಳಿಸಿ, ಇದನ್ನು ನಿಮ್ಮ ಮುಖದ ಮೇಲೆ ನೇರವಾಗಿ ಹಚ್ಚಿ. ಸುಮಾರು 15 ನಿಮಿಷಗಳ ನಂತರ ಇದನ್ನು ತೊಳೆಯಿರಿ.
ಜೀವನಶೈಲಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Wed, 25 May 22