ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲಾ ಗಡಿಯಾರಗಳು 10:10 ಸಮಯವನ್ನು ತೋರಿಸುವುದು ಏಕೆ?

| Updated By: ನಯನಾ ರಾಜೀವ್

Updated on: Sep 12, 2022 | 12:31 PM

ದೊಡ್ಡ ಶೋರೂಂ ಇರಲಿ, ಚಿಕ್ಕ ಅಂಗಡಿಯೇ ಇರಲಿ, ಮಾರಾಟಕ್ಕಿಟ್ಟಿರುವ ವಾಚ್​ಗಳು, ಗಡಿಯಾರದ ಮುಳ್ಳುಗಳು 10:10ಕ್ಕೆ ಇರುವುದನ್ನು ಕೆಲವೊಮ್ಮೆ ನೀವು ಗಮನಿಸಿರಬಹುದು.

ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ಎಲ್ಲಾ ಗಡಿಯಾರಗಳು 10:10 ಸಮಯವನ್ನು ತೋರಿಸುವುದು ಏಕೆ?
Time
Follow us on

ದೊಡ್ಡ ಶೋರೂಂ ಇರಲಿ, ಚಿಕ್ಕ ಅಂಗಡಿಯೇ ಇರಲಿ, ಮಾರಾಟಕ್ಕಿಟ್ಟಿರುವ ವಾಚ್​ಗಳು, ಗಡಿಯಾರದ ಮುಳ್ಳುಗಳು 10:10ಕ್ಕೆ ಇರುವುದನ್ನು ಕೆಲವೊಮ್ಮೆ ನೀವು ಗಮನಿಸಿರಬಹುದು. ಗಡಿಯಾರದ ಅಂಗಡಿಗಳಷ್ಟೇ ಅಲ್ಲ, ವಾಚ್‌ನ ಜಾಹೀರಾತುಗಳಲ್ಲಿಯೂ ನೀವು ಇದನ್ನು ನೋಡುತ್ತೀರಿ ಆದರೆ ಅದರ ಹಿಂದಿನ ಕಾರಣ ಏನು. ಈ ನಿರ್ದಿಷ್ಟ ಸಮಯದಲ್ಲಿ ಗಡಿಯಾರವನ್ನು ಹೊಂದಿಸುವುದರ ಹಿಂದೆ ಅನೇಕ ಪ್ರಸಿದ್ಧ ಕಥೆಗಳಿವೆ.

ನಗು ಮುಖ
ಟೈಮೆಕ್ಸ್ ಮತ್ತು ರೋಲೆಕ್ಸ್‌ನಂತಹ ಹಿಂದಿನ ಪ್ರಸಿದ್ಧ ಕಂಪನಿಗಳು ತಮ್ಮ ಗಡಿಯಾರದ ಸಮಯವನ್ನು 8.20 ಕ್ಕೆ ಇಡುತ್ತಿದ್ದವು, ಇದರಿಂದಾಗಿ ತಮ್ಮ ಕಂಪನಿಯ ಹೆಸರು ಗ್ರಾಹಕರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಆದರೆ, ಅಂಗಡಿಯವರನ್ನೇ ಕೇಳಿದರೂ ಉತ್ತರ ಸಿಗುವುದಿಲ್ಲ. ಗಡಿಯಾರದ ಸಮಯ 10.10 ಎಂದು ತೋರಿಸುತ್ತಿದ್ದರೆ ಅದೊಂದು ರೀತಿ ಮಂದಹಾಸದ ಮುಖದಂತಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

10.10 ರ ಬದಲಾಗಿ ಅದಕ್ಕೆ ವಿರುದ್ಧವಾದ 8.20 ರ ಸಮಯವನ್ನು ಗಡಿಯಾರದಲ್ಲಿ ನಿಲ್ಲಿಸಿದರೆ ಅದು ಬೇಸರದ ಮುಖಭಾವವನ್ನು ಸೂಚಿತ್ತದೆಯಂತೆ. ಬಹಳಷ್ಟು ಜನರ ಮುಂದೆ ಬೇರೆ ಬೇರೆ ಸಮಯ ತೋರುವ ಗಡಿಯಾರ ಹಿಡಿದು ತೋರಿಸಿದಾಗ ಹೆಚ್ಚಿನ ಪಾಲು ಜನ 10.10 ರ ಸಮಯದ ಗಡಿಯಾರ ಹೆಚ್ಚು ಆಕರ್ಷಕವಾಗಿದೆ ಹೇಳಿದ್ದರಂತೆ.

8.20 ಅನ್ನು ನಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಿದ ಕಂಪನಿಗಳು ಇದನ್ನು ಬದಲಾಯಿಸಲು ನಿರ್ಧರಿಸಿದವು ಮತ್ತು ಅದರ ಬದಲಾಗಿ 10.10 ರ ಸಮಯವನ್ನು ಅದರ ರಿವರ್ಸ್ ಆಗಿ ಆರಿಸಿಕೊಂಡವು. ಗಮನಿಸಿದರೆ ನಗುವ ಮುಖದಂತೆ ಕಾಣಿಸುತ್ತದೆ.

ಈ ಸಮಯದಿಂದ ವಿಜಯದ ಗುರುತು ಮಾಡಲಾಗಿದೆ, ಗಡಿಯಾರವು ಹತ್ತಕ್ಕಿಂತ ಹತ್ತು ನಿಮಿಷಗಳು ಇದ್ದಾಗ, ಗಂಟೆ ಮತ್ತು ನಿಮಿಷದ ಮುದ್ರೆಗಳ ಸ್ಥಾನವು ಇಂಗ್ಲಿಷ್‌ನ V ಅಕ್ಷರದ ಗುರುತು ಮಾಡುತ್ತದೆ. ಈ ವಿ ವಿಜಯದ ಸಂಕೇತವನ್ನು ಸೂಚಿಸುತ್ತದೆ. ನಿರ್ದಿಷ್ಟ ಸಮಯದಲ್ಲಿ ಗಡಿಯಾರವನ್ನು ಹೊಂದಿಸುವುದರ ಹಿಂದೆ ಇದೂ ಒಂದು ಕಾರಣವಾಗಿರಬಹುದು.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:29 pm, Mon, 12 September 22