Winter Care: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದೆಯಾ? ಇಂದೇ ಬಿಟ್ಟು ಬಿಡಿ

|

Updated on: Dec 05, 2023 | 12:08 PM

ಹೆಚ್ಚಾಗಿ ಮಳೆಗಾಲ, ಚಳಿಗಾಲದಲ್ಲಿ ಮನೆಯೊಳಗೆ ಫ್ಯಾನ್ ಆನ್ ಮಾಡಿ ಬಟ್ಟೆಗಳನ್ನು ಒಣಗಿಸುವ ಅಭ್ಯಾಸವನ್ನು ಸಾಕಷ್ಟು ಜನರು ಹೊಂದಿರುತ್ತಾರೆ. ಆದರೆ ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

Winter Care: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದೆಯಾ? ಇಂದೇ ಬಿಟ್ಟು ಬಿಡಿ
Indoor Laundry
Follow us on

ಚಳಿಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆ ಜೊತೆಗೆ ಶೀತ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಬಂದು ಬಿಡುತ್ತದೆ. ಆದರೆ ನಿಮ್ಮ ಮನೆಯಲ್ಲಿ ವೇಗವಾಗಿ ಚಳಿಗಾಲದ ಸೋಂಕುಗಳು ಹರಡಲು ಒದ್ದೆ ಬಟ್ಟೆಗಳು ಕೂಡ ಕಾರಣವಾಗಬಹುದು. ಹೆಚ್ಚಾಗಿ ಮಳೆಗಾಲ, ಚಳಿಗಾಲದಲ್ಲಿ ಮನೆಯೊಳಗೆ ಫ್ಯಾನ್ ಆನ್ ಮಾಡಿ ಬಟ್ಟೆಗಳನ್ನು ಒಣಗಿಸುವ ಅಭ್ಯಾಸವನ್ನು ಸಾಕಷ್ಟು ಜನರು ಹೊಂದಿರುತ್ತಾರೆ. ಮನೆಯೊಳಗೆ ಬಟ್ಟೆಗಳನ್ನು ಒಣಗಿಸುವುದರಿಂದ ಹೊರಗಡೆಗಿಂತ ವೇಗವಾಗಿ ಒಣಗುತ್ತವೆ ಎಂಬ ನಂಬಿಕೆ. ಆದರೆ ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಮನೆಯೊಳಗೆ ಒದ್ದೆ ಬಟ್ಟೆಯನ್ನು ಒಣಗಿಸುವ ಅಭ್ಯಾಸ ಫಂಗಸ್ ಸೇರಿದಂತೆ ಹಲವು ರೀತಿಯ ಸೋಂಕುಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಮ್ಯಾಂಚೆಸ್ಟರ್‌ನ ರಾಷ್ಟ್ರೀಯ ಆಸ್ಪರ್‌ಜಿಲೊಸಿಸ್ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ ‘ಮನೆಯೊಳಗೆ ಒದ್ದೆ ಬಟ್ಟೆಯನ್ನು ಒಣಗಿಸುವ ಅಭ್ಯಾಸ ಸೈನಸ್ ಮತ್ತು ಅಲರ್ಜಿಗಳು ಮಕ್ಕಳಲ್ಲಿ ನ್ಯುಮೋನಿಯಾವನ್ನು ಉಂಟುಮಾಡಬಹುದು. ಇದಲ್ಲದೇ ಶ್ವಾಸಕೋಶದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ತಿಳಿದುಬಂದಿದೆ.

ಮನೆಯಲ್ಲಿ ಬಟ್ಟೆಗಳನ್ನು ಒಣಗಿಸುವುದು ಕೋಣೆಯಲ್ಲಿ ತೇವಾಂಶವನ್ನು 30 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಇದು ಆರ್ಸ್ಪೆಜಿಲ್ಲಸ್ ಫ್ಯೂಮಿಗೇಟಸ್ ಎಂಬ ಶಿಲೀಂಧ್ರದ ಬೀಜಕಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಉಸಿರಾಟದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಚಳಿಗಾಲದ ಸೋಮಾರಿತನ ನಿಮ್ಮ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗುತ್ತಿದೆಯಾ? ಹಾಗಾದರೆ ಹೀಗೆ ಮಾಡಿ

ಮನೆಯೊಳಗೆ ಬಟ್​ಟೆಗಳನ್ನು ಒಣಗಿಸುವುದು ಅಗತ್ಯವಿದ್ದರೆ, ಈ ಕ್ರಮಗಳನ್ನು ಅನುಸರಿಸಿ:

ನಿಮ್ಮ ಒದ್ದೆಯಾದ ಬಟ್ಟೆಗಳನ್ನು ಮನೆಯಲ್ಲಿಯೇ ಒಣಗಿಸಬೇಕಾದರೆ, ಕೆಲವು ಸಲಹೆಗಳನ್ನು ಅನುಸರಿಸಬೇಕು. ನೀರನ್ನು ಸಂಪೂರ್ಣವಾಗಿ ಹಿಂಡಿದ ನಂತರವೇ ಒಣಗಿಸಬೇಕು. ಇದಲ್ಲದೇ ಬಟ್ಟೆ ಒದ್ದೆಯಾಗಿರುವಾಗ ಅವುಗಳ ತೇವಾಂಶವನ್ನು ಕಡಿಮೆ ಮಾಡಲು ಉಪ್ಪು ಉತ್ತಮ ಮಾರ್ಗವಾಗಿದೆ. ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದು ಶಿಲೀಂಧ್ರವನ್ನು ನಿಯಂತ್ರಿಸುತ್ತದೆ. ಮನೆಯಲ್ಲಿ ಬಟ್ಟೆ ಒಣಗಿಸಿದಾಗ ದುರ್ವಾಸನೆ ಬರದಿರಲು, ಬಟ್ಟೆ ತೊಳೆಯುವಾಗ ನೀರಿನಲ್ಲಿ 2 ಚಮಚ ವಿನೆಗರ್ ಸೇರಿಸಿ. ಇದರಿಂದ ಮನೆ ಕೆಟ್ಟ ವಾಸನೆ ಬರದಂತೆ ನೋಡಿಕೊಳ್ಳುತ್ತದೆ. ಇದು ಬಟ್ಟೆಗೆ ಮೃದುತ್ವವನ್ನೂ ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: