ಬಾಳೆ ಎಲೆ ಕಪ್ನಲ್ಲಿ ಇಡ್ಲಿ- ಸಾಂಬಾರ್ ತಿಂದಿದ್ದೀರಾ? ಈ ಕಪ್ ತಯಾರಿಸುವುದು ಹೇಗೆ?
ಬಾಳೆ ಎಲೆಯ ಕಪ್ಗಳಲ್ಲಿ ಬಡಿಸುವ ಈ ಮುದ್ದಾದ ಇಡ್ಲಿಗಳು ಖಂಡಿತವಾಗಿಯೂ ಪಾರ್ಟಿ ಪ್ರಿಯವಾಗಿರುತ್ತದೆ ಎಂದರೆ ತಪ್ಪಾಗಲಾರದು. ಇದೊಂದು ಟ್ರೆಂಡಿಂಗ್ ಮಾರ್ಗ ಅಂತಲೂ ಹೇಳಬಹುದು. ನಿಮಗೆ ಇಡ್ಲಿ ಸಾಂಬಾರ್ ಮಾಡಲು ಬರಬಹುದು ಆದರೆ ಈ ಸುಂದರ್ ಕಪ್ಗಳನ್ನೂ ಹೇಗೆ ತಯಾರಿಸುತ್ತಾರೆ ಎಂಬುದು ತಿಳಿದಿದೆಯಾ? ಹಾಗಾದರೆ ಈ ಸುಲಭ ವಿಧಾನವನ್ನು ತಿಳಿದುಕೊಳ್ಳಿ.
ನೀವು ಇಡ್ಲಿ, ಸಾಂಬಾರ್ ಇಷ್ಟ ಪಡುವವರಾ? ಎಲ್ಲಿಗೆ ಹೋದರೂ ಕೂಡ ಇಡ್ಲಿ ಸಾಂಬಾರ್ ಆರ್ಡರ್ ಮಾಡ್ತಿರಾ? ಹಾಗಾದರೆ ಇಲ್ಲಿ ಹೇಳುವ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು. ಇಡ್ಲಿ ಅತ್ಯಂತ ಆರೋಗ್ಯಕರ ಖಾದ್ಯ ಎಂದು ಹೇಳಲಾಗುತ್ತದೆ. ಅದು ನಿಮಗೂ ತಿಳಿದಿರಬಹುದು. ಇದೊಂದು ಆರಾಮದಾಯಕ ಆಹಾರ, ಅತ್ಯುತ್ತಮ ಉಪಾಹಾರ ಕೂಡ. ಆದರೆ ನೀವು ಎಂದಾದರೂ ಬಾಳೆ ಎಲೆಯಲ್ಲಿ ಮಾಡುವ ಇಡ್ಲಿ ಸಾಂಬರ್ ತಿಂದಿದ್ದೀರಾ? ಬಾಳೆ ಎಲೆಯ ಕಪ್ಗಳಲ್ಲಿ ಬಡಿಸುವ ಈ ಮುದ್ದಾದ ಇಡ್ಲಿಗಳು ಖಂಡಿತವಾಗಿಯೂ ಪಾರ್ಟಿ ಪ್ರಿಯವಾಗಿರುತ್ತದೆ ಎಂದರೆ ತಪ್ಪಾಗಲಾರದು. ಇದೊಂದು ಟ್ರೆಂಡಿಂಗ್ ಮಾರ್ಗ ಅಂತಲೂ ಹೇಳಬಹುದು. ನಿಮಗೆ ಇಡ್ಲಿ ಸಾಂಬಾರ್ ಮಾಡಲು ಬರಬಹುದು ಆದರೆ ಈ ಸುಂದರ್ ಕಪ್ ಗಳನ್ನೂ ಹೇಗೆ ತಯಾರಿಸುತ್ತಾರೆ ಎಂಬುದು ತಿಳಿದಿದೆಯಾ? ಹಾಗಾದರೆ ಈ ಸುಲಭ ವಿಧಾನವನ್ನು ತಿಳಿದುಕೊಳ್ಳಿ.
ಈ ಕಪ್ಗಳನ್ನು ತಯಾರಿಸುವುದು ತುಂಬಾ ಸುಲಭ, ಅದು ಹೇಗೆ?
1. ಬಾಳೆ ಎಲೆಯನ್ನು ಮಡಚಿ ಸಮಾನ ಚೌಕಾಕಾರದಲ್ಲಿ ಕತ್ತರಿಸಿಕೊಳ್ಳಿ, ಒಂದು ತುಂಡನ್ನು ಇನ್ನೊಂದರ ಮೇಲೆ ಇರಿಸಿ.
2. ಎರಡೂ ಬದಿಗಳಲ್ಲಿ ಸೀಳು ಮಾಡಿಕೊಳ್ಳಿ. ಅಂದರೆ ಬದಿಯಲ್ಲಿ ಒಂದೇ ಸಮಾನವಾಗಿ ಕತ್ತರಿಸಿಕೊಳ್ಳಿ.
3. ಆ ಬದಿಯಲ್ಲಿರುವ ಅಂಚುಗಳನ್ನು ಮಡಚಿ ಅದಕ್ಕೆ ಸ್ಟೇಪಲ್ ಮಾಡಿ. ನೀವು ಇದಕ್ಕೆ ಬಿದಿರಿನ ಕೋಲುಗಳನ್ನು ಸಹ ಬಳಸಬಹುದು.
ವಿಡಿಯೋ ಇಲ್ಲಿದೆ ನೋಡಿ:
View this post on Instagram
4. ಬಳಿಕ ಅದಕ್ಕೆ ಇಡ್ಲಿ ಹಿಟ್ಟನ್ನು ಒಂದೇ ಅಳತೆಯಲ್ಲಿ ಹಾಕಿರಿ. ಆದರೆ ನೆನಪಿಟ್ಟುಕೊಳ್ಳಿ ಹಿಟ್ಟನ್ನು ಅತಿಯಾಗಿ ಎಲೆಯ ಕಪ್ಗಳಲ್ಲಿ ತುಂಬಬೇಡಿ, ಏಕೆಂದರೆ ಸಾಂಬಾರ್ ಸೇರಿಸಲು ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ.
5. ಇಡ್ಲಿ ಬೆಂದ ಬಳಿಕ ಅದರ ಮೇಲೆ ಬಿಸಿ ಬಿಸಿ ಸಾಂಬಾರ್ ಹಾಕಿ ಇಡ್ಲಿಯನ್ನು ಆನಂದಿಸಿ.
ಇದನ್ನೂ ಓದಿ: ಇಡ್ಲಿ-ಸಾಂಬಾರ್ನಿಂದ ದೀರ್ಘಾಯುಷ್ಯ, ತಜ್ಞರ ಅಭಿಪ್ರಾಯ ಇಲ್ಲಿದೆ
ಈ ವಿಡಿಯೋವನ್ನು aruna_vijay_masterchef ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನೀವು ಕೂಡ ಮನೆಯಲ್ಲಿ ಈ ವಿಧಾನದಲ್ಲಿ ಇಡ್ಲಿ ಮಾಡಿ ಆನಂದಿಸಬಹುದು. ಇನ್ನು ಈ ವಿಡಿಯೋವನ್ನು ಸಾಕಷ್ಟು ಜನ ಇಷ್ಟ ಪಟ್ಟಿದ್ದು ಹೊಸ ಮಾದರಿ ತಿಳಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಇನ್ನು ಕೆಲವರು ಇಡ್ಲಿ, ಸಾಂಬಾರ್ ಗಿಂತಲೂ ಎಲೆಯ ಕಪ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಮತ್ತೆ ಕೆಲವರು ಮೌತ್ ಪಿಕ್ಗಳನ್ನೂ ಬಳಸಿ, ಸ್ಟೇಪಲ್ ಮಾಡಬೇಡಿ ಎಂದಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 4:12 pm, Tue, 5 December 23