ಚಳಿಗಾಲ ಶುರುವಾಗುತ್ತಿದ್ದಂತೆ ಸೋಂಕುಗಳು ವೇಗವಾಗಿ ಹರಡುತ್ತವೆ. ಜೊತೆಗೆ ಸೊಳ್ಳೆಗಳ ಕಾಟವು ಹೆಚ್ಚು. ಇದಲ್ಲದೇ ವಿಶೇಷವಾಗಿ ಚಳಿಗಾಲದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತದೆ. ದೇಹವು ಶುಷ್ಕವಾಗುತ್ತದೆ ಮತ್ತು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಕೂದಲು ಕೂಡ ಉದುರುತ್ತದೆ ಮತ್ತು ಕಿರಿಕಿರಿಯಾಗುತ್ತದೆ. ಆದರೆ ಚಳಿಗಾಲದ ಆರೋಗ್ಯ ಸಮಸ್ಯೆಗಳಿಂದ ನೀವು ದೂರವಿರಬೇಕಾದರೆ ಕೆಲವೊಂದಿಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ವಿಶೇಷವಾಗಿ ಆಹಾರದ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ಈಗ ಚಳಿಗಾಲದಲ್ಲಿ ಯಾವ ರೀತಿಯ ಆಹಾರಗಳನ್ನು ಸೇವಿಸುವುದು ಒಳ್ಳೆಯದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಆವಕಾಡೊ:
ಶೀತ ಋತುವಿನಲ್ಲಿ ಚರ್ಮವು ಒಣಗುತ್ತದೆ. ಆದರೆ ಶುಷ್ಕ ತ್ವಚೆಗೆ ದುಬಾರಿ ಬೆಳೆಯ ಕ್ರೀಮ್ಗಳನ್ನು ಬಳಸುವ ಬದಲಾಗಿ ಆಹಾರ ಕ್ರಮದಲ್ಲಿಯೇ ಚಳಿಗಾಲದಲ್ಲಿ ಚ,ರ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕೆಲವೊಮ್ಮೆ ನೀವು ಚರ್ಮದ ಮೇಲೆ ಹಚ್ಚುವ ಕ್ರೀಮ್ಗಳು ತುರಿಕೆ, ದದ್ದು ಮುಂತಾದ ಚರ್ಮದ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಆವಕಾಡೊ ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಕೊಬ್ಬುಗಳು ಮತ್ತು ಖನಿಜಗಳು ಹೆಚ್ಚು ಇಡುತ್ತವೆ. ಇದರಲ್ಲಿರುವ ಪ್ರೊಟೀನ್ ಗಳು ಚರ್ಮ ಕುಗ್ಗದಂತೆ ನೋಡಿಕೊಳ್ಳುತ್ತದೆ.
ಒಮೆಗಾ 3 ಕೊಬ್ಬಿನಾಮ್ಲಗಳು:
ಶೀತ ಋತುವಿನಲ್ಲಿ ಚರ್ಮವು ಕಾಂತಿಯನ್ನು ಕಳೆದುಕೊಳ್ಳುತ್ತದೆ. ಒಮೆಗಾ 3 ಕೊಬ್ಬಿನಾಮ್ಲಗಳು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇರುವಂತೆ ನೋಡಿಕೊಳ್ಳಿ.
ಬಾಯಾರಿಕೆ ಆಗದಿದ್ದರೂ ನೀರು ಕುಡಿಯಿರಿ:
ಅನೇಕ ಜನರು ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯುವುದಿಲ್ಲ. ವಾತಾವರಣ ತಂಪಾಗಿದ್ದರಿಂದ ಬಾಯಾರಿಕೆ ಆಗುವುದು ಕಡಿಮೆ. ಈ ಕಾರಣದಿಂದಾಗಿ, ದೇಹದಲ್ಲಿನ ನೀರಿನ ಶೇಕಡಾವಾರು ಪ್ರಮಾಣವು ಕಡಿಮೆಯಾಗುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಿ ಚರ್ಮವೂ ಹಾಳಾಗುತ್ತದೆ. ಹಾಗಾಗಿ ಯಾವುದೇ ಸಮಯದಲ್ಲಿ ಬೇಕಾದಷ್ಟು ನೀರು ಕುಡಿಯಿರಿ ಎನ್ನುತ್ತಾರೆ ತಜ್ಞರು.
ಶೀತ ಕಾಲದಲ್ಲಿ ವಿಟಮಿನ್ ಎ ಮತ್ತು ಸಿ ಆಹಾರಗಳನ್ನು ಹೆಚ್ಚು ತೆಗೆದುಕೊಳ್ಳಬೇಕು. ಇವು ಚರ್ಮ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಸಿಹಿ ಗೆಣಸು, ಮೀನು, ಕ್ಯಾರೆಟ್ ಇತ್ಯಾದಿಗಳನ್ನು ಆಹಾರದ ಭಾಗವಾಗಿಸಬೇಕು.