Skin Care: ಚಳಿಗಾಲದಲ್ಲೂ ಯಾಕೆ ಸನ್​ಸ್ಕ್ರೀನ್ ಲೋಷನ್ ಹಚ್ಚಬೇಕು?

ಮಳೆಗಾಲ ಮತ್ತು ಚಳಿಗಾಲದಲ್ಲಿ ಸೂರ್ಯನ ಬಿಸಿಲು ಹೆಚ್ಚು ಪ್ರಖರವಾಗಿರುವುದಿಲ್ಲ. ಹೀಗಾಗಿ, ಆ ಸಮಯದಲ್ಲಿ ಸನ್​ಸ್ಕ್ರೀನ್ ಲೋಷನ್​ನ ಅಗತ್ಯವಿಲ್ಲ ಎಂಬುದು ಹಲವರ ತಪ್ಪುಕಲ್ಪನೆ. ಆದರೆ, ಚಳಿಗಾಲದಲ್ಲಿ ಕೂಡ ನಮ್ಮ ತ್ವಚೆಗೆ ಸನ್​ಸ್ಕ್ರೀನ್ ಲೋಷನ್ ಅತ್ಯಗತ್ಯ. ಅದಕ್ಕೆ ಕಾರಣ ಇಲ್ಲಿದೆ.

Skin Care: ಚಳಿಗಾಲದಲ್ಲೂ ಯಾಕೆ ಸನ್​ಸ್ಕ್ರೀನ್ ಲೋಷನ್ ಹಚ್ಚಬೇಕು?
ಸನ್​ಸ್ಕ್ರೀನ್ ಲೋಷನ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 28, 2023 | 7:00 PM

ಬಿಸಿಲಿನಲ್ಲಿ ಸೂರ್ಯನ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಸನ್​ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಅಗತ್ಯ. ಹೀಗಾಗಿ, ಬೇಸಿಗೆಯಲ್ಲಿ ಮನೆಯಿಂದ ಹೊರಹೋಗುವಾಗ ಮಾತ್ರ ಹಲವರು ಸನ್​ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುತ್ತಾರೆ. ಆದರೆ, ಇದು ಬೇಸಿಗೆಗೆ ಮಾತ್ರ ಸೀಮಿತವಲ್ಲ. ಚಳಿಗಾಲದಲ್ಲಿ ಕೂಡ ಸನ್​ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಅಷ್ಟೇ ಮುಖ್ಯ. ಮಳೆಗಾಲ ಮತ್ತು ಚಳಿಗಾಲದಲ್ಲಿ ಸೂರ್ಯನ ಬಿಸಿಲು ಹೆಚ್ಚು ಪ್ರಖರವಾಗಿರುವುದಿಲ್ಲ. ಹೀಗಾಗಿ, ಆ ಸಮಯದಲ್ಲಿ ಸನ್​ಸ್ಕ್ರೀನ್ ಲೋಷನ್​ನ ಅಗತ್ಯವಿಲ್ಲ ಎಂಬುದು ಹಲವರ ತಪ್ಪುಕಲ್ಪನೆ. ಆದರೆ, ಚಳಿಗಾಲದಲ್ಲಿ ಕೂಡ ನಮ್ಮ ತ್ವಚೆಗೆ ಸನ್​ಸ್ಕ್ರೀನ್ ಲೋಷನ್ ಅತ್ಯಗತ್ಯ. ಅದಕ್ಕೆ ಕಾರಣ ಇಲ್ಲಿದೆ.

ಸೂರ್ಯನ ನೇರಳಾತೀತ (ಯುವಿ) ವಿಕಿರಣವು ವರ್ಷಪೂರ್ತಿ ಇರುತ್ತದೆ. ಚಳಿಗಾಲದಲ್ಲಿ ಸೂರ್ಯನ ಹಾನಿಕಾರಕ ನೇರಳಾತೀತ (UV) ವಿಕಿರಣವು ಕಡಿಮೆಯಾಗುತ್ತದೆ ಎಂಬುದು ಒಂದು ಸಾಮಾನ್ಯ ತಪ್ಪು ಕಲ್ಪನೆ. ಈ ಯುವಿ ಕಿರಣಗಳು ಮೋಡ ಕವಿದ ದಿನಗಳಲ್ಲಿಯೂ ಇರುತ್ತವೆ. ಚಳಿಗಾಲದಲ್ಲಿ UVB ಕಿರಣಗಳ ತೀವ್ರತೆಯು ಕಡಿಮೆಯಾಗಿರಬಹುದು. UVA ಕಿರಣಗಳು ಚರ್ಮದೊಳಗೆ ಆಳವಾಗಿ ತೂರಿಕೊಳ್ಳುತ್ತವೆ ಮತ್ತು ದೀರ್ಘಾವಧಿಯ ಹಾನಿಯನ್ನುಂಟುಮಾಡುತ್ತವೆ. ಈ ಕಿರಣಗಳಿಗೆ ದೀರ್ಘಕಾಲ ನಮ್ಮ ಚರ್ಮವನ್ನು ಒಡ್ಡಿಕೊಳ್ಳುವುದರಿಂದ ಅಕಾಲಿಕ ವಯಸ್ಸಾಗುವಿಕೆ, ಸನ್​ಬರ್ನ್ ಮತ್ತು ಚರ್ಮದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ಒಣ ಚರ್ಮದವರು ಮುಖಕ್ಕೆ ಒಮ್ಮೆ ಈ ಫೇಸ್​ಪ್ಯಾಕ್ ಹಚ್ಚಿ ನೋಡಿ

ಚಳಿಗಾಲದಲ್ಲಿ ಒಳಾಂಗಣ ತಾಪಮಾನ ಕಡಿಮೆ ಇರುತ್ತದೆ. ಚಳಿಗಾಲದಲ್ಲಿ ಶುಷ್ಕ ಹವೆ ಇರುವುದರಿಂದ ಮತ್ತು ನಿರ್ಜಲೀಕರಣ ಇರುವುದರಿಂದ ಒಣ ಚರ್ಮ ಉಂಟಾಗಬಹುದು. ಅದಕ್ಕೆ ಸನ್‌ಸ್ಕ್ರೀನ್ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಅದು ನಿಮ್ಮನ್ನು UV ಹಾನಿಯಿಂದ ರಕ್ಷಿಸುತ್ತದೆ, ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?

ಸನ್‌ಸ್ಕ್ರೀನ್‌ನ ನಿರಂತರ ಬಳಕೆ, ಚಳಿಗಾಲದಲ್ಲಿಯೂ ಸಹ ಚರ್ಮದ ಮೇಲಿನ ಸೂರ್ಯನ ಹಾನಿಯನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ. ಕಾಲ ಕಳೆದಂತೆ ಈ ಹಾನಿಯು ಸುಕ್ಕುಗಳು, ಸೂಕ್ಷ್ಮ ರೇಖೆಗಳು ಮತ್ತು ಚರ್ಮದ ಬಣ್ಣ ಬದಲಾಗಲು ಕಾರಣವಾಗಬಹುದು. ಪ್ರತಿದಿನ ಸನ್‌ಸ್ಕ್ರೀನ್ ಅನ್ನು ಹಚ್ಚುವುದರಿಂದ ದೀರ್ಘಾವಧಿಯಲ್ಲಿ ನಿಮ್ಮ ಚರ್ಮದ ಆರೋಗ್ಯ ಮತ್ತು ತಾರುಣ್ಯವನ್ನು ಕಾಪಾಡಿಕೊಳ್ಳಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್