Electric Jacket: ಚಳಿಗಾಲದಲ್ಲಿ ಸಖತ್​​ ಟ್ರೆಂಡ್​ ಆಗುತ್ತಿದೆ ಎಲೆಕ್ಟ್ರಿಕ್ ಜಾಕೆಟ್​​ಗಳು; ಇದರ ಬೆಲೆ ಎಷ್ಟು ಗೊತ್ತಾ?

|

Updated on: Dec 13, 2023 | 10:56 AM

ಚಳಿಯಿಂದ ದೂರವಿರಲು ಮನೆಯಲ್ಲಿ ರೂಮ್ ಹೀಟರ್ ಅಳವಡಿಸಿದಂತೆ, ಹೊರಗಡೆ ಪ್ರಯಾಣಿಸುವಾಗ ಚಳಿಯಿಂದ ದೂರವಿರಲು ಎಲೆಕ್ಟ್ರಿಕ್ ಜಾಕೆಟ್ ಖರೀದಿಸಬಹುದು. ಈ ಎಲೆಕ್ಟ್ರಿಕ್ ಜಾಕೆಟ್‌ಗಳನ್ನು ಆನ್ಲೈನ್​​​ನಲ್ಲಿ ಸಖತ್​​ ಟ್ರೆಂಡಿಂಗ್​​​​​ನಲ್ಲಿದೆ. ಇದರ ವಿಶೇಷತೆ ಏನು ಹಾಗೂ ಬೆಲೆ ಎಷ್ಟು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Electric Jacket: ಚಳಿಗಾಲದಲ್ಲಿ  ಸಖತ್​​ ಟ್ರೆಂಡ್​ ಆಗುತ್ತಿದೆ ಎಲೆಕ್ಟ್ರಿಕ್ ಜಾಕೆಟ್​​ಗಳು; ಇದರ ಬೆಲೆ ಎಷ್ಟು ಗೊತ್ತಾ?
Electric jacket
Image Credit source: Pinterest
Follow us on

ಚಳಿಗಾಲ ಬಂತೆಂದರೆ ಎಲ್ಲರೂ ಸ್ವೆಟರ್, ಜಾಕೆಟ್ ಧರಿಸಲು ಶುರು ಮಾಡುತ್ತಾರೆ ಆದರೆ ಜಾಕೆಟ್ ಹಾಕಿಕೊಂಡ ಮೇಲೂ ಚಳಿ ಅನಿಸಿದರೆ ನೀವೇ ಎಲೆಕ್ಟ್ರಿಕ್ ಜಾಕೆಟ್ ಖರೀದಿಸಬಹುದು. ಸಾಮಾನ್ಯವಾಗಿ ಚಳಿಗಾಲದಲ್ಲಿ ಮನೆಯೊಳಗೆ ರೂಮ್​​ ಹೀಟರ್​ಗಳನ್ನು ಬಳಸಿದ ರೀತಿಯಲ್ಲಿಯೇ, ನೀವು ಹೊರಗಡೆ ಹೋಗುವಾಗ ​​​ಈ ಎಲೆಕ್ಟ್ರಿಕ್ ಜಾಕೆಟ್ ಧರಿಸಬಹುದಾಗಿದೆ. ಇದು ನಿಮ್ಮ ದೇಹವನ್ನು ಚಳಿಯಲ್ಲೂ ಬೆಚ್ಚಗಾಗಿಸುತ್ತದೆ. ಚಳಿಗಾಲದಲ್ಲಿ ಉಪಯುಕ್ತವಾಗಿರುವ ಈ ಎಲೆಕ್ಟ್ರಿಕ್ ಜಾಕೆಟ್ 5 ಹೀಟಿಂಗ್ ಝೋನ್‌ಗಳನ್ನು ಹೊಂದಿದೆ ಅಂದರೆ ಈ ಜಾಕೆಟ್ ನಿಮಗೆ ಐದು ವಿಭಿನ್ನ ಸ್ಥಳಗಳಿಂದ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಇದಲ್ಲದೆ, ಈ ಜಾಕೆಟ್‌ನಲ್ಲಿ ತಾಪಮಾನ ಸೆಟ್ಟಿಂಗ್ ಆಯ್ಕೆಯೂ ಲಭ್ಯವಿದೆ. ಈ ಎಲೆಕ್ಟ್ರಿಕ್ ಜಾಕೆಟ್‌ಗಳನ್ನು ಆನ್ಲೈನ್​​​ನಲ್ಲಿ ಖರೀದಿಸಬಹುದಾಗಿದೆ. ಇದರ ವಿಶೇಷತೆ ಏನು ಹಾಗೂ ಬೆಲೆ ಎಷ್ಟು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಎಲೆಕ್ಟ್ರಿಕ್ ಜಾಕೆಟ್​​ನ ವಿಶೇಷತೆ ಏನು?

ಈ ಎಲೆಕ್ಟ್ರಿಕ್ ಜಾಕೆಟ್ ನೀವು ಆನ್ಲೈನ್​​​​ನಲ್ಲಿ ಖರೀದಿ​ ಮಾಡಬಹುದು. ಜೊತೆಗೆ ಚಳಿಗಾಲದಲ್ಲಿ ವಿಶೇಷ ಆಫರ್​​ಗಳೊಂದಿಗೆ ನೀವಿದನ್ನು ಖರೀದಿಸಬಹುದಾಗಿದೆ. ಸಾಕಷ್ಟು ಬ್ರಾಂಡ್​ಗಳಲ್ಲಿ ಈ ಜಾಕೆಟ್​​​​​​ ಲಭ್ಯವಿದೆ. ಈ ಎಲೆಕ್ಟ್ರಿಕ್ ಜಾಕೆಟ್‌ನ ಮುಂಭಾಗ ಮತ್ತು ಹಿಂಭಾಗದಲ್ಲಿ ಒಟ್ಟು 5 ಕಾರ್ಬನ್ ಫೈಬರ್ ಹೀಟಿಂಗ್ ಪ್ಯಾಡ್‌ಗಳನ್ನು ಒದಗಿಸಲಾಗಿದ್ದು ಅದು ನಿಮ್ಮನ್ನು ಬೆಚ್ಚಗಾಗಿಸುತ್ತದೆ. ತಾಪನ ಮಟ್ಟವನ್ನು ಸರಿಹೊಂದಿಸಲು, ಮೂರು ತಾಪಮಾನ ಸೆಟ್ಟಿಂಗ್ಗಳನ್ನು ಸಹ ಒದಗಿಸಲಾಗಿದೆ, ಜಾಕೆಟ್ನಲ್ಲಿ ನೀಡಲಾದ ಎಲ್ಇಡಿ ಬಟನ್ ಅನ್ನು ನಿಮಗೆ ಬೇಕಾದಷ್ಟು ತಾಪಮಾನದಲ್ಲಿ ಇಟ್ಟುಕೊಳ್ಳಬಹುದು. ಜೊತೆಗೆ ಈ ಜಾಕೆಟನ್ನು ಸುಲಭವಾಗಿ ನೀರಿನಿಂದ ತೊಳೆಯಬಹುದಾಗಿದೆ.

ಇದನ್ನೂ ಓದಿ: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದೆಯಾ? ಇಂದೇ ಬಿಟ್ಟು ಬಿಡಿ

ಎಲೆಕ್ಟ್ರಿಕ್ ಜಾಕೆಟ್​​​ನ ಬೆಲೆ ಎಷ್ಟು?

ವಿವಿಧ ಬ್ರಾಂಡ್​​ಗಳಲ್ಲಿ ಜಾಕೆಟ್​​ಗಳು ಲಭ್ಯವಿರುವುದರಿಂದ ಗುಣಮಟ್ಟಗಳಿಗೆ ಅನುಗುಣವಾಗಿ ಬೆಲೆಯು ಭಿನ್ನವಾಗಿರುತ್ತದೆ. ಈಗ ಆನ್ಲೈನ್​​ ಮಾರುಕಟ್ಟೆಗಳಲ್ಲಿ ನೀವು ರಿಯಾಯಿತಿಯ ದರದಲ್ಲಿ ಖರೀದಿಸಬಹುದಾಗಿದೆ. ಈ ಜಾಕೆಟ್​​​ ಬ್ರಾಂಡ್​​ಗಳಿಗೆ ಅನುಗುಣವಾಗಿ 10,000 ದಿಂದ ಪ್ರಾರಂಭವಾಗಿ 25,000 ರೂಪಾಯಿಗಳ ವರೆಗೆ ಬೆಲೆಯನ್ನು ಹೊಂದಿದೆ.

ಗಮನಿಸಿ: ಈ ಲೇಖನವು ಮಾಹಿತಿಗಾಗಿ ಮಾತ್ರ, ಯಾವುದೇ ಆನ್ಲೈನ್​​ ಮಾರುಕಟ್ಟೆಯಿಂದ ಎಲೆಕ್ಟ್ರಿಕ್ ಜಾಕೆಟ್ ಖರೀದಿಸುವ ಮೊದಲು, ಜಾಕೆಟ್ ಬಗ್ಗೆ ಜನರು ನೀಡಿದ ವಿಮರ್ಶೆಗಳನ್ನು ಖಂಡಿತವಾಗಿ ಓದಿ. ವಿಮರ್ಶೆಯನ್ನು ಓದಿದ ನಂತರ  ಜಾಕೆಟ್ ಖರೀದಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: