World Bamboo Day 2024 : ನೈಸರ್ಗಿಕ ಸ್ಪರ್ಶ ನೀಡಲು ಬಿದಿರಿನ ಮನೆಯ ವಿನ್ಯಾಸ ಹೀಗಿರಲಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2024 | 9:52 AM

ಬಿದಿರು ಯಾವುದೇ ಆರೈಕೆಯಿಲ್ಲದೇ ತಾನಾಗಿಯೇ ಬೆಳೆಯುತ್ತದೆ. ಈ ಬಿದಿರಿನಿಂದ ಹಲವಾರು ಪ್ರಯೋಜನಗಳಳಿವೆ. ಹೀಗಾಗಿ ಈ ಬಿದಿರು ಕಾಡುಗಳ ಸಂರಕ್ಷಣೆ ಮತ್ತು ಬಿದಿರು ಉದ್ಯಮದ ಉತ್ತೇಜನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

World Bamboo Day 2024 : ನೈಸರ್ಗಿಕ ಸ್ಪರ್ಶ ನೀಡಲು ಬಿದಿರಿನ ಮನೆಯ ವಿನ್ಯಾಸ ಹೀಗಿರಲಿ
ಸಾಂದರ್ಭಿಕ ಚಿತ್ರ ( ವಿಶ್ವ ಬಿದಿರು ದಿನ)
Follow us on

ಬಿದಿರು ಅತೀ ವೇಗವಾಗಿ ಬೆಳೆಯುವ ಸಸ್ಯಗಳಲ್ಲಿ ಒಂದು. ಇದು ಭೂಮಿಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಣ್ಣಿನ ಸವೆತವನ್ನು ತಡೆಗಟ್ಟುವಲ್ಲಿ, ಆಮ್ಲಜನಕ ಮಟ್ಟವನ್ನು ಹೆಚ್ಚಿಸುತ್ತದೆ. ಈ ಬಿದಿರಿನ ಮರವು ಇತರ ಮರಗಳಿಗಿಂತ ಶೇಕಡಾ 35 % ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡಿ ಪರಿಸರವನ್ನು ರಕ್ಷಿಸುತ್ತದೆ. ಎಲ್ಲಾ ದೃಷ್ಟಿಯಿಂದಲೂ ಪ್ರಯೋಜನಕಾರಿರುವ ಈ ಬಿದಿರಿನ ಕೃಷಿಯನ್ನು ಉತ್ತೇಜಿಸಲು ಮತ್ತು ಅದರ ವಿವಿಧ ಉಪಯೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ವಿಶ್ವ ಬಿದಿರು ದಿನದ ಹಿಂದಿನ ಇತಿಹಾಸ ಹಾಗೂ ಮಹತ್ವ:

ವಿಶ್ವ ಬಿದಿರು ದಿನವನ್ನು ವಿಶ್ವ ಬಿದಿರು ಸಂಘಟನೆಯ ಅಂದಿನ ಅಧ್ಯಕ್ಷ ಕಮಲೇಶ್ ಸಲಾಂ ಅವರು ಪ್ರಪಂಚದಾದ್ಯಂತ ತಮ್ಮ ಪ್ರತಿನಿಧಿಗಳೊಂದಿಗೆ ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಹೀಗಾಗಿ ಸೆಪ್ಟೆಂಬರ್ 18, 2009 ರಲ್ಲಿ ಬ್ಯಾಂಕಾಕ್ ನ ಥೈಲ್ಯಾಂಡ್ ನಲ್ಲಿ ನಡೆದ 8 ನೇ ವಿಶ್ವ ಬಿದಿರು ಕಾಂಗ್ರೇಸ್ ಸಮ್ಮೇಳನದಲ್ಲಿ, ವಿಶ್ವ ಬಿದಿರು ಸಂಸ್ಥೆಯು ಪ್ರತಿವರ್ಷ ಸೆಪ್ಟೆಂಬರ್ 18 ರಂದು ವಿಶ್ವ ಬಿದಿರು ದಿನವನ್ನು ಆಚರಿಸುವ ಬಗ್ಗೆ ಅಧಿಕೃತವಾಗಿ ಘೋಷಿಸಿತು. ಈ ಸಂಸ್ಥೆಯು ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರವನ್ನು ರಕ್ಷಿಸಲು, ಬಿದಿರಿನ ಸುಸ್ಥಿರ ಬಳಕೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ. ಬಿದಿರಿನ ಸಸ್ಯಗಳ ಬಳಕೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವುದು ಹಾಗೂ ಬಿದಿರಿನ ಉತ್ಪನ್ನಗಳ ತಯಾರಿಕೆ, ಮಾರಾಟದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ.

ಬಿದಿರಿನ ಮನೆಯ ವಿನ್ಯಾಸಕ್ಕಾಗಿ ಅಲಂಕಾರಿಕ ಕಲ್ಪನೆಗಳು

ಈಗಿನ ಕಾಲದಲ್ಲಿ ಮನೆಗಾಗಿ ಲಕ್ಷಾನುಗಟ್ಟಲೆ ದುಡ್ಡು ಖರ್ಚು ಮಾಡುತ್ತಾರೆ. ಆದರೆ, ಈ ಕ್ರಾಫ್ಟ್ ವರ್ಕ್‌ಗಳ ಜೊತೆಗೆ ಬಿದಿರಿನ ಫ‌ರ್ನಿಚರ್‌ಗಳು ಮನೆಯ ಅಂದ ಹೆಚ್ಚಿಸುತ್ತದೆ. ಅದಲ್ಲದೇ ಮನೆಯ ನೋಟವನ್ನು ಬದಲಾಯಿಸುವುದರೊಂದಿಗೆ ಹಳ್ಳಿ ಮನೆಯಲ್ಲಿ ಇರುವಂತೆ ಅನಿಸುತ್ತದೆ. ಹೀಗಾಗಿ ಈ ಬಿದಿರಿನ ಮನೆಯ ವಿನ್ಯಾಸವು ಪರಿಸರ ಸ್ನೇಹಿಯಾಗಿದೆ.

ಇದನ್ನೂ ಓದಿ: ಚಂದ್ರಗ್ರಹಣ ಸಮಯದಲ್ಲಿ ಗರ್ಭಿಣಿಯರು ಏನು ಮಾಡಬೇಕು, ಏನು ಮಾಡಬಾರದು?

ಬಿದಿರಿನ ಮನೆಯ ಬಾಹ್ಯ ವಿನ್ಯಾಸ :

ಬಿದಿರು ಶಾಖ ವಿರೋಧಿ ಗುಣವನ್ನು ಹೊಂದಿದ್ದು ತಂಪಾದ ವಾತಾವರಣವನ್ನು ಸೃಷ್ಟಿಸುತ್ತದೆ. ಬಿದಿರಿನ ಮನೆಯನ್ನು ವಿನ್ಯಾಸಗೊಳಿಸುವಾಗ, ರಚನೆಯನ್ನು ಗಟ್ಟಿಮುಟ್ಟಾದ ಅಡಿಪಾಯಕ್ಕೆ ಕಾಂಕ್ರಿಟ್ ಗಳನ್ನು ಹಾಕಬಹುದು. ಆಕರ್ಷಕ ನೋಟವನ್ನು ತಂದು ಕೊಡುವ ಈ ಈ ಬಿದಿರಿನ ಮನೆಯ ಬಾಹ್ಯ ವಿನ್ಯಾಸವು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಒದಗಿಸುತ್ತದೆ.

* ಬಿದಿರಿನ ಮನೆಯ ಒಳಾಂಗಣ ವಿನ್ಯಾಸ: ಮನೆಗೆ ಸೊಗಸಾದ ನೋಟವನ್ನು ನೀಡಲು ಫರ್ನಿಚರ್ ಗಳು, ವಾಲ್ ಹ್ಯಾಗಿಂಗ್ ಸೇರಿದಂಯತೆ ಇನ್ನಿತ್ತರ ಅಲಂಕಾರಿಕ ವಸ್ತುಗಳನ್ನು ಬಳಸಬಹುದು. ಈ ಬಿದಿರು ಹೆಚ್ಚಿನ ಬೆಂಕಿಯ ಪ್ರತಿರೋಧವನ್ನು ಹೊಂದಿದ್ದು, ಹೀಗಾಗಿ ಅಡುಗೆ ಮನೆಯ ವಿನ್ಯಾಸಗಳಲ್ಲಿ ಈ ವಸ್ತುಗಳನ್ನು ಸೇರಿಸಿಕೊಳ್ಳಬಹುದು. ಬಿದಿರು ನೆಲಹಾಸು ಮತ್ತು ಪೀಠೋಪಕರಣಗಳ ವಿನ್ಯಾಸಕ್ಕೆ ಸೂಕ್ತವಾದ ಆಯ್ಕೆಯಾಗಿದೆ.

* ಬಿದಿರಿನ ಮನೆಯ ಗೋಡೆಯ ವಿನ್ಯಾಸ: ಬಿದಿರಿನ ಮನೆಯನ್ನು ವಿನ್ಯಾಸಗೊಳಿಸುವಾಗ, ನೈಸರ್ಗಿಕ ಬಿದಿರನ್ನು ಗೋಡೆಗೆ ಸೇರಿಸಿಕೊಳ್ಳಬಹುದು. ಮಲಗುವ ಕೋಣೆಗಳು ಮತ್ತು ಬಾತ್ರೂಮ್‌ಗೆ ಗೂ ಬಳಸುವುದರಿಂದ ವಿಶಿಷ್ಟವಾದ ನೋಟವನ್ನು ನೀಡುತ್ತದೆ.

* ಬಿದಿರಿನ ಮೆಟ್ಟಿಲು ಹಾಗೂ ಉದ್ಯಾನವನ ವಿನ್ಯಾಸ : ಬಿದಿರಿನ ಮೆಟ್ಟಿಲುಗಳನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ನಿರ್ಮಿಸಬಹುದು. ಉದ್ಯಾನವನದಂತಹ ಹೊರಾಂಗಣ ಸ್ಥಳಗಳಿಗೆ, ಬಿದಿರಿನಿಂದ ಮಾಡಿದ ಆಸನವು ಕಲಾತ್ಮಕತೆ ಸ್ಪರ್ಶವನ್ನು ತಂದು ಕೊಡುತ್ತದೆ.

* ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚು : ಈ ಬಿದಿರಿನ ಮನೆಯ ವಿನ್ಯಾಸವು ಪರಿಸರ ಸ್ನೇಹಿಯಾಗಿದ್ದು ಸಾಂಪ್ರದಾಯಿಕ ನೋಟವನ್ನು ಒದಗಿಸುತ್ತದೆ. ಬಿದಿರಿನ ಆಲಂಕಾರಿಕ ವಸ್ತುಗಳು ಉಳಿದ ಅಲಂಕಾರಿಕ ವಸ್ತುಗಳಿಗೆ ಹೋಲಿಸಿದರೆ ಕಡಿಮೆ ಖರ್ಚಿನಲ್ಲಿ ದೊರೆಯುವುದರೊಂದಿಗೆ ಹೆಚ್ಚು ಸಮಯ ಬಾಳಿಕೆ ಬರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ