ಸಾಂದರ್ಭಿಕ ಚಿತ್ರ
ಚಾಕೊಲೇಟ್ ಇಷ್ಟ ಪಡದವರು ಯಾರು ಇಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರು ಕೂಡ ಬಹಳ ಇಷ್ಟ ಪಟ್ಟೆ ಸವಿಯುತ್ತಾರೆ. ಬಾಯಿಯನ್ನು ಸಿಹಿಯಾಗಿಸುವ ಈ ಚಾಕೊಲೇಟ್, ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದಂತೆ. ಅದಲ್ಲದೇ, ನಮ್ಮ ಜೀವನದಲ್ಲಿ ಪ್ರೀತಿ ಪಾತ್ರರಿಗೆ ವಿಶೇಷ ಸಂದರ್ಭದಲ್ಲಿ ಚಾಕೋಲೇಟನ್ನು ಉಡುಗೊರೆಯಾಗಿ ನೀಡುವುದಿದೆ. ಜಾಗತಿಕ ಮಟ್ಟದಲ್ಲಿ 2009 ರ ಜುಲೈ 7 ರಂದು ಮೊದಲ ಬಾರಿಗೆ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜುಲೈ 7ರಂದು ಪ್ರಪಂಚದಾದ್ಯಂತ ಚಾಕೊಲೇಟ್ ಪ್ರೇಮಿಗಳು ಈ ದಿನವನ್ನು ಆಚರಿಸುತ್ತಾ ಬರುತ್ತಿದ್ದಾರೆ.
ವಿಶ್ವ ಚಾಕೋಲೇಟ್ ದಿನದಂದು ಶುಭಾಶಯ ಕೋರಲು ಸಂದೇಶಗಳಿವು
- ಜೀವನವು ಚಾಕೊಲೇಟ್ ಇದ್ದಂತೆ. ಚಾಕೊಲೇಟ್ ತಿನ್ನುತ್ತಾ ಹೇಗೆ ಖುಷಿ ಪಡುತ್ತೇವೋ, ಜೀವನದ ಪ್ರತಿಕ್ಷಣವನ್ನು ಖುಷಿಯಿಂದ ಆನಂದಿಸಿ. ಹ್ಯಾಪಿ ಚಾಕೊಲೇಟ್ ಡೇ.
- ಚಾಕೊಲೇಟ್ ಇಲ್ಲದೆ ಚಾಕೊಲೇಟ್ ದಿನದ ಆಚರಣೆ ಹೇಗೆ ಅಪೂರ್ಣವಾಗುತ್ತದೆಯೋ ಹಾಗೆಯೇ, ನಿಜವಾದ ಪ್ರೀತಿ, ಸ್ನೇಹವಿಲ್ಲದೇ ಹೋದರೆ ನನ್ನ ಜೀವನವು ಅಪೂರ್ಣ. ಹ್ಯಾಪಿ ಚಾಕೊಲೇಟ್ ಡೇ.
- ನಿಮಗಾಗಿ ಚಾಕೊಲೇಟ್ ಖರೀದಿಸಲು ಅಂಗಡಿಗೆ ಭೇಟಿ ನೀಡಿದೆ, ಆಗ ನನಗನಿಸಿದ್ದು ಇಷ್ಟೇ ನಿಮ್ಮ ನಗುವಿನಷ್ಟು ಸಿಹಿಯಾದ ಚಾಕೊಲೇಟ್ ಎಲ್ಲಿಯೂ ಸಿಗುವುದಿಲ್ಲವೆಂದು, ಚಾಕೊಲೇಟ್ ದಿನದ ಶುಭಾಶಯಗಳು.
- ನನ್ನ ಜೀವನದ ಪ್ರತಿ ಕ್ಷಣವನ್ನು ನೀವು ಚಾಕೊಲೇಟ್ ನಂತೆಯೇ ಮಾರ್ಧುಯ ಹಾಗೂ ಪ್ರೀತಿಯನ್ನು ತುಂಬುತ್ತಿದ್ದೀರಿ ನಿಮಗೂ ನಿಮ್ಮ ಕುಟುಂಬಕ್ಕೂ ಚಾಕೊಲೇಟ್ ದಿನದ ಶುಭಾಶಯಗಳು.
- ನಿಮ್ಮ ಜೀವನದ ಪ್ರತಿ ಕ್ಷಣವು ಚಾಕೋಲೇಟ್ ನಂತೆಯೇ ಸಿಹಿಯಾಗಿರಿ, ಜೀವನದ ಕಷ್ಟಗಳು ದೂರವಾಗಿ ಸಿಹಿಯೇ ತುಂಬಿರಲಿ ಎಂದು ಆಶಿಸುತ್ತೇನೆ. ವಿಶ್ವ ಚಾಕೊಲೇಟ್ ದಿನದ ಶುಭಾಶಯಗಳು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ