
ಪ್ರತಿಯೊಬ್ಬರೂ ಕನಸು ಕಾಣುತ್ತಾರೆ, ಆದರೆ ಹೆಚ್ಚಿನವರಿಗೆ ಈ ಕನಸುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಕನಸುಗಳು ಮನಸ್ಸಿನೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದೆ. ಹೀಗಾಗಿ ಈ ಇಂದ್ರಿಯಗಳು ಎಚ್ಚರದ ಸ್ಥಿತಿಗಿಂತ ಕನಸಿನ ಸ್ಥಿತಿಯಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಆದರೆ ಕೆಲವು ಸಲ ಚಿತ್ರ ವಿಚಿತ್ರ ಕನಸುಗಳಿಂದ ಕಂಗಾಲಾಗಿ ಬಿಡುವುದಿದೆ. ಕೆಲವೊಮ್ಮೆ ಕನಸಿನಲ್ಲಿ ಕಂಡ ದೃಶ್ಯಗಳೇ ಕಣ್ಣ ಮುಂದೆ ಬಂದಂತಾಗುತ್ತದೆ. ಹೆಚ್ಚಿನವರಿಗೆ ಎಷ್ಟು ಯೋಚಿಸಿದರೂ ಕನಸುಗಳು ನೆನಪಿನಲ್ಲಿ ಉಳಿಯುವುದೇ ಇಲ್ಲ. ಜನರಿಗೆ ಬೀಳುವ ಈ ಕನಸಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಕನಸಿನ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ಕನಸಿನ ದಿನವನ್ನು 2012 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದ ಶಿಕ್ಷಣತಜ್ಞ ಮತ್ತು ಪರಿವರ್ತನಾ ತಂತ್ರಜ್ಞ ಓಜಿಯೋಮಾ ಎಗ್ವುನ್ವು ಆಚರಿಸಲು ಮುಂದಾದರು. ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 25 ರಂದು ವಿಶ್ವ ಕನಸಿನ ದಿನವನ್ನಾಗಿ ಆಚರಿಸಲಾಗುತ್ತದೆ. ಜನರಲ್ಲಿ ಕನಸಿನ ಬಗ್ಗೆ ಜಾಗೃತಿ ಮೂಡಿಸುವುದು. ಅನೇಕ ಬಾರಿ, ಒಳ್ಳೆಯ ಮತ್ತು ಕೆಟ್ಟ ಕನಸುಗಳನ್ನು ನೋಡುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ತಿಳಿಸುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ವಿವಿಧೆಡೆ ಕಾರ್ಯಾಗಾರ ಹಾಗೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ