World Environment Day 2022: ಪರಿಸರದ ಜೊತೆ ಸವಿಸವಿ ನೆನಪು
World Environment Day 2022: ಬದಲಾಗುತ್ತಿರುವ ಪ್ರಪಂಚದಲ್ಲಿ ವಾಹನಗಳು, ಟೆಕ್ನೋಲಜಿ, ವಿಜ್ಞಾನ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದು. ಬೇಸರದ ಸಂಗತಿಯೆಂದರೆ ವರ್ಷಕ್ಕೆ ಹೊಸ ಕಟ್ಟಡಗಳು, ಕಾರ್ಖಾನೆಗಳು ಹೆಚ್ಚುತ್ತಿದ್ದು ಗಿಡ ಮರಗಳು ಮಾತ್ರ ಕಡಿಮೆಯಾಗುತ್ತಿದೆ.
ಪರಿಸರ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಬಾಲ್ಯದಲ್ಲಿದ್ದಾಗ ಕಳೆದ ಆ ಮಧುರವಾದ ಕ್ಷಣಗಳು. ನನಗೆ ರಜಾದಿನಗಳು ಇದ್ದಾಗ ಸರ್ಕಾರಿ ಶಾಲೆಗೆ ಹೋಗುತ್ತಿದ್ದೆ ಏಕೆಂದರೆ ಅಮ್ಮ ಶಿಕ್ಷಕಿ, ಅವರ ಜೊತೆ ಪಟ್ಟಣದಿಂದ ಹಳ್ಳಿಯ ಶಾಲೆಗೆ ಹೊಗುತ್ತಿದ್ದೆ. ನನಗೆ ಇನ್ನೂ ನೆನಪಿದೆ ನಾನು ಶಾಲೆಗೆ ಹೋಗಿದ್ದಾಗ ಅಲ್ಲಿನ ಶಾಲೆಯ ಅಂಗಳದಲ್ಲಿ ಮಕ್ಕಳು ನಿರ್ಭಯವಾಗಿ ಮರಕೋತಿ ಆಟ ಮಾಡುತ್ತಿದ್ದರು. ಅವರು ಆಡುವುದನ್ನು ಕಂಡು, ನಾನು ಮರಕೋತಿ ಆಟ ಆಡೋಣ ಎಂದು ಹುಮ್ಮಸ್ಸಿನಿಂದ ನಾನು ಮೊದಲ ಬಾರಿಗೆ ಮರ ಏರಲು ಪ್ರಾರಂಭ ಮಾಡಿದಾಗ ನನಗೆ ಮರ ಎರುವುದೇ ನನಗೆ ದೊಡ್ಡ ಸಾಹಸವಾಗಿತ್ತು. ನಂತರ ಸ್ವಲ್ಪ ಭಯವಾಗಿ ಆಟಕ್ಕೆ ಪೂರ್ಣವಿರಾಮ ಹೇಳಿದೆ. ಪಟ್ಟಣದ ಹುಡುಗವಾಗಿದ್ದ ನನಗೆ ಶಾಲೆಯಲ್ಲಿ ಜಾನಿ ಜಾನಿ, ಪುಣ್ಯಕೋಟಿ ಕಥೆಗಳನ್ನು ಕೇಳಿದ್ದು ಮಾತ್ರ. ಭಾನುವಾರ, ರಜಾದಿನಗಳು ಇದ್ದಾಗ ಗೆಳೆಯರೊಂದಿಗೆ ಕ್ರಿಕೆಟ ಹಾಗೂ ಮನೆಯಲ್ಲಿ ಕ್ಯಾರಂ ಬೋರ್ಡ್,ಚೆಸ್ ಮಾತ್ರ ಆಡುತ್ತಿದ್ದ ನನಗೆ ಮರಕೋತಿಯಾಟದಲ್ಲಿ ಮರವೇರುವುದೇ ಸ್ವಲ್ಪ ಕಷ್ಟವಾಯಿತು.
ನಮ್ಮ ಮನೆಯ ಹೊರಭಾಗದಲ್ಲಿ ಮಿನಿ ಗಾರ್ಡನ್ ಇದ್ದು. ಮುಂಚೆ ಇಲ್ಲಿ ದಾಸವಾಳ, ಕಲ್ಲಂಗಡಿ, ಬೆಂಡೆಕಾಯಿ, ಮೆಣಸಿನಕಾಯಿ, ಮೆಂತೆ ಬೆಳೆಯುತ್ತಿದ್ದು ಒಂದು ರೀತಿ ಮಿನಿ ಮಾರ್ಕೆಟ್ ಆಗಿದೆ. ಸದ್ಯಕ್ಕೆ ತೆಂಗಿನ ಗಿಡ, ತುಳಸಿ, ಸ್ವಸ್ತಿಕ್, ಅಲೋವೆರಾ, ಕರಿಬೇವು ಇವೆ. ಮಿನಿ ಗಾರ್ಡನಲ್ಲಿ ಇದ್ದಾಗ ನನಗೆ ಸಮಯ ಕಳ್ಳೆದಿದ್ದೆ ಗೊತ್ತಾಗುವುದಿಲ್ಲ. ಒಮ್ಮೆ ಬಾದಾಮ ಗಿಡ ಬೆಳೆಯಲು ಪ್ರಾರಂಭವಾಗಿತ್ತು. ನಾವು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಯಾರೋ ಬಂದು ಅದನ್ನು ಗಿಡ ಮುರಿದು ಹೋಗಿದ್ದರು. ಹೀಗೆ ಎರಡು ಬಾರಿ ಬದಾಮ ಗಿಡ ಮುರಿದುರು ಮತ್ತೆ ಗಿಡ ಛಲ ಬಿಡದೆ ಬೆಳೆಯುವುದನ್ನು ಕಂಡು ನನಗೆ ಪ್ರೇರಣೆಯಾಯಿತು. ನಾವು ಕೂಡ ಜೀವನದಲ್ಲಿ ಜನ ಎಷ್ಟೇ ಕಾಲೆಳೆದರು ಕೂಡ ಅದನ್ನು ಲೆಕ್ಕಿಸದೆ ಮುಂದೆ ಸಾಗಬೇಕು ಎಂದು.
ಕೊನೆಯದಾಗಿ ಒಂದು ಮಾತು ಹೇಳುವುದಾದರೆ ಬದಲಾಗುತ್ತಿರುವ ಪ್ರಪಂಚದಲ್ಲಿ ವಾಹನಗಳು, ಟೆಕ್ನೋಲಜಿ, ವಿಜ್ಞಾನ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿದು. ಬೇಸರದ ಸಂಗತಿಯೆಂದರೆ ವರ್ಷಕ್ಕೆ ಹೊಸ ಕಟ್ಟಡಗಳು, ಕಾರ್ಖಾನೆಗಳು ಹೆಚ್ಚುತ್ತಿದ್ದು ಗಿಡ ಮರಗಳು ಮಾತ್ರ ಕಡಿಮೆಯಾಗುತ್ತಿದೆ. ನಾವು ಪರಿಸರದ ಬಗ್ಗೆ ಈಗಲೇ ಕಾಳಜಿ ವಹಿಸದಿದ್ದರೆ ಮುಂದಿನ ದಿನ ಮಾನಗಳಲ್ಲಿ ನೀರಿನ ಹಾಗೆ ಆಮ್ಲಜನಕ ಕೂಡ ಖರೀದಿಸುವ ಪರಿಸ್ಥಿತಿ ಬರಬಹುದು. ಸ್ನೇಹಿತರೆ ನಮ್ಮ ಪ್ರೀತಿ ಪಾತ್ರರ ಹುಟ್ಟುಹಬ್ಬದಂದು ನಾವು ಯಾಕೆ ಒಂದು ಗಿಡ ಉಡುಗೊರೆಯಾಗಿ ಕೊಡಬಾರದು ಒಮ್ಮೆ ಯೋಚನೆ ಮಾಡಿ.
ಲೇಖನ: ಆನಂದ ಜೇವೂರ್,ಕಲಬುರಗಿ
ಇನ್ನಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.