ವರದಕ್ಷಿಣೆ ಕಿರುಕುಳದ ಜೊತೆಗೆ ಅನಿಷ್ಟವೆಂದು ನಿಂದಿಸಿದಕ್ಕೆ ಫ್ಯಾನ್ಗೆ ನೇಣುಬಿಗಿದುಕೊಂಡು ಮಹಿಳೆ ಸೂಸೈಡ್
ವರದಕ್ಷಿಣೆ ಕಿರುಕುಳದಿಂದಾಗಿ ಗರ್ಭಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆದಿದೆ.
ನೆಲಮಂಗಲ: ಅನಿಷ್ಟವೆಂದು ನಿಂದಿಸಿದಕ್ಕೆ ಫ್ಯಾನ್ಗೆ ನೇಣುಬಿಗಿದುಕೊಂಡು ಮಹಿಳೆ ಸೂಸೈಡ್ ಮಾಡಿಕೊಂಡಿರುವಂಹತ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವಿವರ್ಸ್ ಬಡವಾಣೆಯಲ್ಲಿ ನಡೆದಿದೆ. ಕುಣಿಗಲ್ ಮೂಲದ ಪೂಜಾ(22)ಮೃತ ದುರ್ದೈವಿ. ಪತಿ ಮಂಜುನಾಥ, ಅತ್ತೆ ಶ್ಯಾಮಲಾ, ವರದಕ್ಷಿಣೆ ಕಿರುಕುಳದ ಜೊತೆ ನಿಂದನೆ ಆರೋಪ ಮಾಡಿದ್ದು, ಹುಟ್ಟಿದ 6 ತಿಂಗಳಲ್ಲೇ ಮಗು ಸಾವು ಮತ್ತೊಂದು ಅಬಾಷನ್, ಎರಡು ಮಕ್ಕಳ ಸಾವಾಗಿದ್ದು, ಈ ಘಟನೆ ನೆಪದಲ್ಲಿ ಪಾಪದವಳು, ಅನಿಷ್ಟವೆಂದು ದಿನನಿತ್ಯ ನಿಂದಿಸಲಾಗುತ್ತಿತ್ತು. ಅತ್ತೆಯ ವಿಪರೀತ ಕಿರುಕುಳಕ್ಕೆ ಮೃತ ಪೂಜಾ ಕುಟುಂಬಸ್ಥರು ಬಾಡಿಗೆ ಮನೆ ಮಾಡಿದ್ದರು. ನಿನ್ನೆಯಷ್ಟೇ ಆ ಮನೆಯ ಹಾಲು ಉಕ್ಕಿಸಿ ಹೊಸ ಜೀವನ ಸಾಗಿಸುವ ಕನಸು ಕಂಡಿದ್ದ ಮೃತ ಪೂಜಾ. ಪೂಜೆ ಮುಗಿಯುತ್ತಿದ್ದಂತೆ ರಾಕ್ಷಸಿ ರೀತಿಯಲ್ಲಿ ಅತ್ತೆ ಶ್ಯಾಮಲಾ ಎಂಟ್ರಿ ಕೊಟ್ಟಿದ್ದಾಳೆ.
ಇದನ್ನೂ ಓದಿ: Migraine: ಅರ್ಧ ತಲೆನೋವಿನಿಂದ ಬಳಲುತ್ತಿದ್ದರೆ ಹೀಗೆ ಮಾಡಿ
ಒಬ್ಬನೇ ಮಗನ ಬಾಳಿಗೆ ಅನಿಷ್ಟವಾದೆಯೆಂದು ಪತಿ ಮುಂದೆಯೇ ವಿಪರೀತ ಬೈದಿದ್ದು, ಪತಿ ಹಾಗೂ ಅತ್ತೆ ಹೊರ ಬರುತ್ತಿದ್ದಂತೆ ಸೂಸೈಡ್ ಮಾಡಿಕೊಂಡಿದ್ದಾಳೆ. ಏಪ್ರಿಲ್ 26,2022ರಂದು ಸೋಮೇಶ್ವರ ದೇವಾಲಯದಲ್ಲಿ ಮದುವೆಯಾಗಿದ್ದು, ಕೋವಿಡ್ ಹಿನ್ನೆಲೆ ಸಾಕಷ್ಟು ಚಿನ್ನಾಭರಣಗಳನ್ನ ಕೊಟ್ಟು ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ಆರೋಪಿ ಪತಿ ಮಂಜ ಹಾಗೂ ಅತ್ತೆ ಶ್ಯಾಮಲಾ ಬಂಧನ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಪೂಜಾ ತಂದೆ ಪದ್ಮನಾಭ, ತಾಯಿ ನಳಿನ, ಅಕ್ಕ ಗಾಯತ್ರಿ ಶವಗಾರದ ಬಳಿ ಗೋಳಾಡಿದ್ದಾರೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ
ಬೆಂಗಳೂರು: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆಯಾಗಿರುವಂತಹ ಘಟನೆ ಸುಬ್ರಹ್ಮಣ್ಯ ನಗರದ ಮನೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೋಳನಹಳ್ಳಿ ನಿವಾಸಿ ಅಂಜು(26) ಮೃತ ಗೃಹಿಣಿ. ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ ಅಂಜು, 4 ತಿಂಗಳ ಹಿಂದೆ ಅಂಜನ್ ಕಣಿಯಾರ್(28) ಜತೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದು, ಅಂಜನ್ ಪೋಷಕರು ಅಂಜುಗೆ ಕಿರುಕುಳ ನೀಡುತ್ತಿದ್ದ ಆರೋಪ ಮಾಡಲಾಗಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆ ಶವಾಗಾರದಲ್ಲಿರುವ ಅಂಜು ಮೃತದೇಹ ಇರಿಸಲಾಗಿದೆ. ಅಂಜು ಪೋಷಕರಿಂದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮೃತ ಅಂಜು ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಕಳೆದ 5 ವರ್ಷಗಳಿಂದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 9 ವರ್ಷ ಪ್ರೀತಿ ಮಾಡಿ ಮದುವೆಯಾಗಿದ್ದ ಅಂಜು ಮತ್ತು ಅಂಜನ್, 2013 ರಲ್ಲಿ ಪರಸ್ಪರ ಪ್ರೀತಿಸಲು ಶುರುಮಾಡಿದ್ರು. 2022 ರ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಒಂದು ಪುಟದ ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದು, ಹಾಗಾದ್ರೆ ಅಂಜು ಬರೆದ ಡೆತ್ ನೋಟ್ನಲ್ಲಿ ಏನಿದೆ ಅಂತ ನೋಡುವುದಾದರೆ, ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿ ಇಲ್ಲ. ಏನು ಮಾಡ್ತಿದಿನಿ ಗೊತ್ತಾಗ್ತಿಲ್ಲ ಅಂಜನ್. (I DONT KNOW WHAT IAM DOING) ಐ ಡೋಂಟ್ ನೋ ವಾಟ್ ಐಆ್ಯಮ್ ಡೂಯಿಂಗ್. ನನಗೆ ಬ್ಯಾಕ್ ಪೇನ್ ಇದೆ. ಆದರೂ ಹೇಳಿಕೊಳ್ಳಲು ಆಗ್ತಿಲ್ಲ. ಕೋಪ ಹಠ ಮಾಡ್ಕೊತಿದ್ದೆ. ನನಗೆ ಹರ್ಟ್ ಆಗ್ತಿತ್ತು. ನನ್ನ ಜೊತೆ ಇದ್ರೂ ದೂರ ಇದ್ದಿಯಾ ಅಂತಾ ಅನ್ನಿಸ್ತಿದೆ. ಏನು ಗೊತ್ತಾಗ್ತಿಲ್ಲ ಬರಿಯೋದಕ್ಕೆ. ಬಾಯ್ ಇನ್ಯಾವತ್ತು ನಿನಗೆ ಹಿಂಸೆ ಕೊಡೋದಕ್ಕೆ ಬರೋದಿಲ್ಲ. ಅಮ್ಮಾ ಐ ಲವ್ ಯೂ, ಹಠ ಮಾಡಿಕೊಂಡು ಇಲ್ಲಿಗೆ ಬಂದೆ. ಹಠ ಮಾಡಿಕೊಂಡು ಹೋಗ್ತಿದಿನಿ. ಅಮ್ಮಾ ನನ್ನ ಕ್ಷಮಿಸು SORRY ಎಂದು ಬರೆದುಕೊಂಡಿದ್ದಾರೆ.
ವಿಷ ಸೇವಿಸಿ ಗರ್ಭಿಣಿ ಆತ್ಮಹತ್ಯೆ
ಮೈಸೂರು: ವರದಕ್ಷಿಣೆ ಕಿರುಕುಳದಿಂದಾಗಿ ಗರ್ಭಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ನಡೆದಿದೆ. ಕಿತ್ತೂರಿನ ಬಸವರಾಜು ಜತೆ ಶ್ವೇತಾ ಮದುವೆ ಮಾಡಿಕೊಡಲಾಗಿತ್ತು. 100 ಗ್ರಾಂ ಚಿನ್ನ, ಒಂದು ಲಕ್ಷ ನಗದು ವರದಕ್ಷಿಣೆ ನೀಡಲಾಗಿದ್ದು, ಮತ್ತಷ್ಟು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಆರೋಪಿಸಲಾಗಿದೆ. 3 ತಿಂಗಳ ಹಿಂದೆ ನಾಲೆಗೆ ಹಾರಿ ಶ್ವೇತಾ ಆತ್ಮಹತ್ಯೆಗೆ ಯತ್ನಿಸಿದ್ದರು. ಘಟನೆ ನಂತರ ಗ್ರಾಮದಿಂದ ಪತಿ, ಅತ್ತೆ, ನಾದಿನಿ ಪರಾರಿಯಾಗಿದ್ದು, ಮೂವರ ವಿರುದ್ಧ ದೂರು ನೀಡಲಾಗಿದೆ. ವರದಕ್ಷಿಣೆ ಕಿರುಕುಳ ಆರೋಪದಡಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:25 am, Sun, 5 June 22