ಆಹಾರ ಕ್ರಮ ಸರಿಯಾಗಿದ್ದರೆ ಅರ್ಧ ತಲೆನೋವು ಬರಲ್ಲ. ಬೆಳಿಗ್ಗೆ ತಿಂಡಿ 8 ರಿಂದ 9 ಗಂಟೆ, ಮಧ್ಯಾಹ್ನದ ಊಟ 1ರಿಂದ 1.30, ರಾತ್ರಿ ಊಟ 8 ಗಂಟೆಗೆ ಮಾಡಿದರೆ ಕೆಲ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು.
1 / 6
ಪ್ರಾಣಾಯಾಮ ಕೂಡಾ ಅರ್ಧ ತಲೆನೋವಿಗೆ ಮದ್ದಿನಂತೆ. ಪ್ರತಿದಿನ ಬೆಳಿಗ್ಗೆ ಬೇಗನೇ ಎದ್ದು ಅರ್ಧ ಗಂಟೆ ವ್ಯಾಯಾಮ ಮಾಡಿ. ಇದರ ಜೊತೆ ಪ್ರಾಣಾಯಾಮ ಮಾಡಿದರೆ ಮನಸ್ಸು ಉಲ್ಲಾಸವಾಗಿರುತ್ತದೆ.
2 / 6
ಅರ್ಧ ತಲೆನೋವಾದಾಗ ಶುಂಠಿ ಕಾಫಿ ಕುಡಿಯಿರಿ. ಇದು ವಾಕರಿಕೆಯನ್ನು ಕಡಿಮೆ ಮಾಡುತ್ತದೆ.
3 / 6
ತಲೆನೋವು ಕಾಣಿಸಿಕೊಂಡಾಗ ಕುತ್ತಿಗೆ ಹಿಂಭಾಗಕ್ಕೆ ಐಸ್ ಕ್ಯೂಬ್ನಿಂದ ಮಸಾಜ್ ಮಾಡಿ. ಹೀಗೆ ಮಾಡಿದರೆ ಮಂಜುಗಡ್ಡೆಯಿಂದ ಬರುವ ಶೀಥ ತಲೆನೋವಿಗೆ ಕಾರಣವಾಗುವ ಉರಿಯುತವನ್ನು ಕಡಿಮೆ ಮಾಡುತ್ತದೆ.
4 / 6
ಹೇರಳ ಔಷಧಿ ಗುಣವನ್ನು ಹೊಂದಿರುವ ತುಳಸಿ ಎಲೆಯನ್ನು ನೀರಿನೊಂದಿಗೆ ಸೇರಿಸಿ ಕುದಿಸಿ. ಇದಕ್ಕೆ ಜೇನುತಪ್ಪ ಹಾಕಿ ಕುಡಿಯಿರಿ. ಇದರಿಂದ ಅರ್ಧ ತಲೆನೋವು ನಿವಾರಣೆಯಾಗುತ್ತದೆ.
5 / 6
ನಿದ್ರೆ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಿದ್ದಂತೆ. 8 ಗಂಟೆಗಳ ಕಾಲ ನಿದ್ರೆ ಮಾಡಿದರೆ ತಲೆನೋವು ದೂರವಾಗುತ್ತದೆ.