Hyderabad gangrape case ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಸಕನ ಮಗ ಭಾಗಿ, ವಿಡಿಯೊ ಶೇರ್​​ ಮಾಡಿದ ಬಿಜೆಪಿ ನಾಯಕ

ಲೈಂಗಿಕ ದೌರ್ಜನ್ಯ ನಡೆದಿರುವುದು ವಿಡಿಯೊದಲ್ಲಿ ಕಾಣುತ್ತದೆ. ಬಾಲಕಿಯ ಗುರುತು ಬಹಿರಂಗವಾಗ ಬಾರದು ಎಂದು ನಾನು ಆಕೆಯ ಮುಖ ತೋರಿಸುತ್ತಿಲ್ಲ. ಪೊಕ್ಸೊ ಕಾಯ್ದೆಗೆ ಸಂಬಧಪಟ್ಟಂತೆ ಎಲ್ಲ ಮುಂಜಾಗ್ರತೆ ವಹಿಸಿದ್ದೇನೆ.ಆರೋಪಿಗಳ ಮುಖ ಇದರಲ್ಲಿ ಕಾಣಬಹುದು. ಅವರು ಅಪ್ರಾಪ್ತರೇ ಅಲ್ಲವೋ ಹೌದೋ...

Hyderabad gangrape case ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಸಕನ ಮಗ ಭಾಗಿ, ವಿಡಿಯೊ ಶೇರ್​​ ಮಾಡಿದ ಬಿಜೆಪಿ ನಾಯಕ
ಎಂ ರಘುನಂದನ್ ರಾವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 05, 2022 | 2:56 PM

ಹೈದರಾಬಾದ್: ಹೈದರಾಬಾದ್​​ನ (Hyderabad) ಜುಬಿಲಿ ಹಿಲ್ಸ್​​ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ (gangrape case) ಪ್ರಕರಣದಲ್ಲಿ ಶಾಸಕರ ಪುತ್ರ ಭಾಗಿಯಾಗಿದ್ದಾನೆ ಎಂದು ತೋರಿಸುವ ವಿಡಿಯೊವನ್ನು  ಬಿಜೆಪಿ ಶಾಸಕ ಎಂ ರಘುನಂದನ್ ರಾವ್ (BJP MLA M Raghunandan Rao) ಪತ್ರಕರ್ತರಿಗೆ ತೋರಿಸಿದ್ದಾರೆ. ರಾವ್ ಅವರು ಶನಿವಾರ ಸಂತ್ರಸ್ತೆ , ಆರೋಪಿಯ ಚಿತ್ರ ಮತ್ತು ವಿಡಿಯೊಗಳನ್ನು ಬಿಡುಗಡೆ ಮಾಡಿದ್ದು, ಫೋಟೊದಲ್ಲಿರುವ ಹುಡುಗ ಎಐಎಂಐಎಂ ಶಾಸಕನ ಮಗನೇ ಎಂದು ಸ್ಪಷ್ಟಪಡಿಸುವಂತೆ ಪೊಲೀಸರನ್ನು ಕೇಳಿದ್ದಾರೆ. ಕಿರು ವಿಡಿಯೊ ಪ್ರದರ್ಶಿಸಿ  ತನಿಖೆ ನಡೆಸುವುದು ತನ್ನ ಕೆಲಸವಲ್ಲ ಎಂದು ಹೇಳಿದ ಅವರು, ಸಾಕ್ಷ್ಯಾಧಾರಗಳನ್ನು ನೀಡುವಂತೆ ಸವಾಲು ಹಾಕಿದ್ದರಿಂದ ನಾನು ವಿಡಿಯೊ ಮುಂದಿಟ್ಟಿದ್ದೇನೆ ಎಂದಿದ್ದಾರೆ. 10 ನಿಮಿಷದ ಆ ವಿಡಿಯೊದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಇದೆ. ಕೆಂಪು ಬಣ್ಣದ ಮರ್ಸಿಡೆಸ್ ಕಾರಿನಲ್ಲಿ ನಾಲ್ವರು ಇದ್ದರು, ಅವರನ್ನು ಪೊಲೀಸರು ಆರೋಪಿಗಳು ಎಂದು ತೋರಿಸಿಲ್ಲ ಎಂದು ಎನ್​​ಡಿಟಿವಿ ಜತೆ ಮಾತನಾಡಿದ ರಾವ್ ಹೇಳಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದಿರುವುದು ವಿಡಿಯೊದಲ್ಲಿ ಕಾಣುತ್ತದೆ. ಬಾಲಕಿಯ ಗುರುತು ಬಹಿರಂಗವಾಗ ಬಾರದು ಎಂದು ನಾನು ಆಕೆಯ ಮುಖ ತೋರಿಸುತ್ತಿಲ್ಲ. ಪೊಕ್ಸೊ ಕಾಯ್ದೆಗೆ ಸಂಬಧಪಟ್ಟಂತೆ ಎಲ್ಲ ಮುಂಜಾಗ್ರತೆ ವಹಿಸಿದ್ದೇನೆ.ಆರೋಪಿಗಳ ಮುಖ ಇದರಲ್ಲಿ ಕಾಣಬಹುದು. ಅವರು ಅಪ್ರಾಪ್ತರೇ ಅಲ್ಲವೋ ಹೌದೋ ಎಂಬುದನ್ನು ನ್ಯಾಯಾಲಯ ಅಥವಾ ಪೊಲೀಸರು ನಿರ್ಧರಿಸಲಿ. ನಾನು ಸಾಕ್ಷ್ಯಗಳನ್ನು ಪೊಲೀಸರು,ಸಾರ್ವಜನಿಕರ ಮುಂದೆ ಇರಿಸಿದ್ದೀನಿ. ಶಾಸಕರ ಮಗ ಭಾಗಿಯಾಗಿದ್ದಾನೆಯೇ ಎಂಬುದನ್ನು ಪೊಲೀಸರು ನಿರ್ಧರಿಸಲಿ ಎಂದು ರಾವ್ ಹೇಳಿದ್ದಾರೆ.

ಏತನ್ಮಧ್ಯೆ ವಿಡಿಯೊ ಶೇರ್ ಮಾಡಿದ್ದಕ್ಕೆ ರಾವ್ ವಿರುದ್ಧ ಗುಡುಗಿದ ತೆಲಂಗಾಣ ಕಾಂಗ್ರೆಸ್ ನಾಯಕ ಮಾಣಿಕಂ ಟಾಗೋರ್, ಈ ವಿಡಿಯೊ ಅವರಿಗೆ ಹೇಗೆ ಸಿಕ್ಕಿತು? ಇಂಥಾ ವಿಡಿಯೊಗಳನ್ನು ಪ್ರದರ್ಶಿಸುವ ಮೂಲಕ ಸಂತ್ರಸ್ತೆಯ ಗುರುತು ಬಹಿರಂಗ ಪಡಿಸಿದ್ದಕ್ಕಾಗಿ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದಿದ್ದಾರೆ.

ಇದನ್ನೂ ಓದಿ
Image
Hyderabad Gangrape: ಹೈದರಾಬಾದ್ ಗ್ಯಾಂಗ್​ರೇಪ್ ಪ್ರಕರಣ: ನಾಲ್ಕನೇ ಆರೋಪಿಯ ಬಂಧನ
Image
Watch ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಪ್ರತಿಭಟನೆ
Image
Hyderabad Gangrape ಹೈದರಾಬಾದ್: ಮರ್ಸಿಡೆಸ್ ಕಾರಿನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

“ತಮ್ಮ ರಕ್ತ ಸಹೋದರರಾದ ಎಂಐಎಂ+ಟಿಆರ್‌ಎಸ್‌ ಸಂಕಷ್ಟದಲ್ಲಿರುವಾಗ ಕಾಂಗ್ರೆಸ್‌ ಏಕೆ ಭಯಭೀತರಾಗುತ್ತದೆ? ಪೊಲೀಸರ ಸುಳ್ಳನ್ನು ಬೆಚ್ಚಿ ಬೀಳಿಸಲು ಮತ್ತು ಹೈದರಾಬಾದ್‌ ಅತ್ಯಾಚಾರದಲ್ಲಿ ಶಾಸಕರ ಪುತ್ರನ ಕೈವಾಡದ ಬಗ್ಗೆ ಕ್ರಮ ಕೈಗೊಳ್ಳಲು ಪುರಾವೆಗಳನ್ನು ಹಾಕಲಾಗಿದೆ” ರಘುನಂದನ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಾಣಿಕಂ ಟಾಗೋರ್, ನಮ್ಮ ಪಕ್ಷವು ‘ಅಗ್ಗದ ಟಿಆರ್‌ಪಿ’ಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ, ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಮತ್ತು ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಬಗ್ಗೆ ಕಾಳಜಿ ವಹಿಸುತ್ತದೆ. ನಿಮ್ಮಂತೆ ‘ಭಾರತ್ ಮಾತಾ ಕಿ ಜೈ’ ಕೇವಲ ಘೋಷಣೆಯಲ್ಲ. ಪ್ರತಿಯೊಬ್ಬ ಸಹೋದರಿ ಮತ್ತು ತಾಯಿ ನಮಗೆ ಭಾರತ ಮಾತೆಯೇ. ನಮ್ಮ ಹೋರಾಟ ಸತ್ಯಕ್ಕಾಗಿರುವುದಾಗಿ ಎಂದಿದ್ದಾರೆ.

“ನಿಮ್ಮ ರಾಜಕೀಯ ಲಾಭಕ್ಕಾಗಿ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನೀವು ತೆಲುಗು ಮಗಳ ಗುರುತನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಂಡಿದ್ದೀರಿ. ತೆಲಂಗಾಣದ ಮಗಳನ್ನು ಸಂಘಿಗಳು / ಟಿಆರ್‌ಎಸ್ / ಮಜ್ಲೀಸ್ ಅವಮಾನಿಸಲು ನಾವು ಬಿಡುವುದಿಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ನಾವೇನೂ ಸಂಘಿಗಳು ಅಥವಾ ಮಜ್ಲೀಸ್​​ಗಳು ಅಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ವಕೀಲನಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಬಗ್ಗೆ ನನಗೆ ತಿಳಿದಿದೆ. ವಿಡಿಯೊದಲ್ಲಿ ಅಪ್ರಾಪ್ತ ಬಾಲಕಿಯ ಗುರುತನ್ನು ಮರೆ ಮಾಚಲಾಗಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

ಬಿಜೆಪಿ ನಾಯಕ ಬಾಲಕಿಯ ವಿಡಿಯೊವನ್ನು ಹಂಚಿಕೊಂಡ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಸಂತ್ರಸ್ತೆಯನ್ನು ದೂಷಿಸಲು ಪ್ರಾರಂಭಿಸಿದರು ಎಂದು ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಕ್ರಿಶನ್  ಹೇಳಿದ್ದಾರೆ. “ಬಿಜೆಪಿ ಶಾಸಕ ರಘುನಂದನ್ ಸಂತ್ರಸ್ತೆ ಹುಡುಗನ ಜೊತೆಗಿನ ಚಿತ್ರಗಳನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ನಂತರ ಏನಾಯಿತು? ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿ ಮತ್ತು ಅವಳ ಕುಟುಂಬದ ವಿಚಾರಣೆ ಪ್ರಾರಂಭವಾಗಿದೆ.ಹುಡುಗಿಯನ್ನು ರಾಜಕೀಯಕ್ಕೆ ಎಳೆಯುವುದೇಕೆ?” ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ