World Environment Day: ಮಣ್ಣಿನ ಫಲವತ್ತತೆ ಕಾಪಾಡಲು ಈ 5 ವಿಷಯಗಳಿಗೆ ಒತ್ತು ನೀಡುವಂತೆ ಮೋದಿ ಕರೆ
World Environment Day: ವಿಶ್ವದ ದೊಡ್ಡ ದೇಶಗಳು ಸಂಪನ್ಮೂಲಗಳನ್ನು ನಾಶಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ( Narendra Modi)ಆರೋಪಿಸಿದ್ದಾರೆ.
ವಿಶ್ವದ ದೊಡ್ಡ ದೇಶಗಳು ಸಂಪನ್ಮೂಲಗಳನ್ನು ನಾಶಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ( Narendra Modi)ಆರೋಪಿಸಿದ್ದಾರೆ. ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ‘ಮಣ್ಣು ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಧಾನಿ ಮೋದಿ ಪ್ರಸ್ತುತ ಮಣ್ಣು ಉಳಿಸಿ ಆಂದೋಲನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಹಿಂದೆ ನಮ್ಮ ದೇಶದ ರೈತನಿಗೆ ನಾವು ಬಳಸುವ ಮಣ್ಣು ಯಾವ ರೀತಿಯದ್ದು, ಮಣ್ಣಿನಲ್ಲಿರುವ ಕೊರತೆ ಏನು ಎಂಬ ಬಗ್ಗೆ ಮಾಹಿತಿಯ ಕೊರತೆ ಇತ್ತು, ಈ ಸಮಸ್ಯೆಯನ್ನು ಹೋಗಲಾಡಿಸಲು, ದೇಶದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂದರು.
ಪರಿಸರ ಸಂರಕ್ಷಣೆಯಲ್ಲಿ ಭಾರತದ ಪ್ರಯತ್ನಗಳು ಬಹುಮುಖವಾಗಿವೆ ಎಂದು ಹೇಳಿದರು. ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ನಗಣ್ಯವಾಗಿರುವಾಗ ಭಾರತ ಈ ಪ್ರಯತ್ನ ಮಾಡುತ್ತಿದೆ. ಪ್ರಪಂಚದ ದೊಡ್ಡ ಆಧುನಿಕ ದೇಶಗಳು ಭೂಮಿಯ ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ನಾಶಮಾಡುವುದು ಮಾತ್ರವಲ್ಲ, ಬದಲಿಗೆ, ಹೆಚ್ಚಿನ ಇಂಗಾಲದ ಹೊರಸೂಸುವಿಕೆಗಳು ಹೆಚ್ಚಾಗುತ್ತಿದೆ.
ಮಣ್ಣು ಉಳಿಸಿ ಆಂದೋಲನವು ಜಾಗತಿಕ ಉಪಕ್ರಮವಾಗಿದೆ, ಇದರ ಉದ್ದೇಶವು ಮಣ್ಣಿನ ಹದಗೆಡುತ್ತಿರುವ ಆರೋಗ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಅದನ್ನು ಸುಧಾರಿಸುವ ಪ್ರಯತ್ನಗಳನ್ನು ಉತ್ತೇಜಿಸುವುದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಣ್ಣು ಉಳಿಸಲು ಐದು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲು ಕರೆ ನೀಡಿದ್ದಾರೆ. -ಮಣ್ಣನ್ನು ರಾಸಾಯನಿಕ ಮುಕ್ತ ಮಾಡುವುದು ಹೇಗೆ ಎಂಬುದಕ್ಕೆ ಮೊದಲು ಒತ್ತು ನೀಡಬೇಕು.
-ಮಣ್ಣಿನಲ್ಲಿರುವ ಜೀವರಾಶಿಯನ್ನು ಉಳಿಸಿ, ಮಣ್ಣಿನ ತೇವಾಂಶ ಕಾಪಾಡುವ ಕುರಿತು ಮಾತನಾಡಿದರು. -ಅಂತರ್ಜಲ ಕಡಿಮೆಯಾಗಿ ಮಣ್ಣಿಗೆ ಆಗುತ್ತಿರುವ ಹಾನಿಯನ್ನು ಹೇಗೆ ಹೋಗಲಾಡಿಸಬೇಕು ಎಂಬುದನ್ನೂ ಚಿಂತಿಸಬೇಕು.
-ಯಾವ ವಸ್ತುಗಳಿಂದ ಮಣ್ಣಿಗೆ ಹಾನಿಯಾಗುತ್ತಿದೆ ಎಂಬುದಕ್ಕೆ ಹೆಚ್ಚು ಒತ್ತು ನೀಡಬೇಕು
-ಅಲ್ಲದೆ, ಅರಣ್ಯ ಪ್ರದೇಶವನ್ನು ಕಡಿಮೆಗೊಳಿಸುವುದರಿಂದ ಮಣ್ಣಿನ ನಿರಂತರ ಸವೆತವನ್ನು ಹೇಗೆ ನಿಲ್ಲಿಸುವುದು ಎಂಬುದರ ಕುರಿತು ಹೆಚ್ಚಿನ ಗಮನವಹಿಸಬೇಕು ಎಂಬುದಾಗಿ ತಿಳಿಸಿದರು.
ಸದ್ಗುರು 100 ದಿನದ ಅಭಿಯಾನ: ಅಳಿವಿನಂಚಿನಲ್ಲಿರುವ ಮಣ್ಣನ್ನು ಉಳಿಸಲು ಸದ್ಗುರು ಜಾಗತಿಕ ಅಭಿಯಾನ ನಡೆಸುತ್ತಿದ್ದಾರೆ. ಸದ್ಗುರು ಅವರು 100 ದಿನಗಳ ‘ಮಣ್ಣು ಉಳಿಸಿ’ ಬೈಕ್ ರಾಲಿ ಅಭಿಯಾನವನ್ನು ಕಳೆದ ಮಾರ್ಚ್‌ಲ್ಲಿ ಲಂಡನ್‌ನ ಸಂಸತ್ ಚೌಕದಲ್ಲಿ ಆರಂಭಿಸಿದ್ದರು. ಬಳಿಕ 27 ದೇಶ ಸುತ್ತಿ ಅಲ್ಲೆಲ್ಲ ಮಣ್ಣಿನ ಫಲವತ್ತತೆಯ ಅರಿವು ಮೂಡಿಸಿ ಭಾರತಕ್ಕೆ ಇತ್ತೀಚೆಗೆ ಪ್ರವೇಶಿಸಿದ್ದಾರೆ. ‘ಆಜಾದಿ ಕಾ ಅಮೃತ ಮಹೋತ್ಸವ’ ಭಾಗವಾಗಿ ಭಾನುವಾರ ರಾಜಧಾನಿ ದೆಹಲಿಗೆ ಸದ್ಗುರು ತೆರಳಿದ್ದಾರೆ. ಜೂನ್ 5 ಅವರ ಅಭಿಯಾನ 75ನೇ ದಿನಕ್ಕೆ ಕಾಲಿಟ್ಟಿದೆ.
ದೇಶಕ್ಕೆ ಸಂಬಂಧಿಸಿದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ