AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶದ ಬುಲ್ಡೋಜರ್​​ ಎಲ್ಲವನ್ನೂ ಸರಿ ಮಾಡುತ್ತದೆ: ಕೆಸಿಆರ್​​​ಗೆ ತೆಲಂಗಾಣ ಬಿಜೆಪಿ ಮುಖ್ಯಸ್ಥನ ಬೆದರಿಕೆ

ಕೆಸಿಆರ್ ಅವರೇ ರಾಜೀನಾಮೆ ನೀಡಲು ಸಿದ್ಧರಾಗಿ. ಬಿಜೆಪಿ ಸರ್ಕಾರ ತೆಲಂಗಾಣಕ್ಕೆ ₹ 2.52 ಕೋಟಿ ನೀಡಿದೆ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಮಾಡುತ್ತೇನೆ. ಒಂದು ಕುಟುಂಬದಿಂದಾಗಿ ಶ್ರೀಲಂಕಾ ಸಾಲದಲ್ಲಿ ಮುಳುಗಿದಂತೆ ಕಲ್ವಕುಂಟ್ಲ ಕುಟುಂಬದಿಂದ ಇಡೀ ತೆಲಂಗಾಣ...

ಉತ್ತರ ಪ್ರದೇಶದ ಬುಲ್ಡೋಜರ್​​ ಎಲ್ಲವನ್ನೂ ಸರಿ ಮಾಡುತ್ತದೆ: ಕೆಸಿಆರ್​​​ಗೆ ತೆಲಂಗಾಣ ಬಿಜೆಪಿ ಮುಖ್ಯಸ್ಥನ ಬೆದರಿಕೆ
ಬಂಡಿ ಸಂಜಯ್ ಕುಮಾರ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 05, 2022 | 4:57 PM

Share

ಹೈದರಾಬಾದ್: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ (Gang rape) ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರ ಶೇಖರ್ ರಾವ್ (K Chandrashekar Rao) ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್(BJP chief Bandi Sanjay Kumar), ಉತ್ತರ ಪ್ರದೇಶದಿಂದ ಬುಲ್ಡೋಜರ್ ಬರಲಿದೆ. ಅದು ಎಲ್ಲವನ್ನೂ ಸರಿ ಮಾಡುತ್ತದೆ ಎಂದು ಹೇಳಿದ್ದಾರೆ. ನಿಜವಾದ ಅಪರಾಧಿಗಳನ್ನು ಟಿಆರ್​​ಎಸ್ ಕಾಪಾಡುತ್ತಿದೆ ಎಂದು ಆರೋಪಿಸಿದ ಬಿಜೆಪಿ ಮುಖ್ಯಸ್ಥ ಕೆಸಿಆರ್ ಮತ್ತು ಅವರ ಮಗ ಕೆಟಿಆರ್ ಇಂಥಾ ಘಟನೆಗಳು ಎಲ್ಲಿಯಾದರೂ ಸಂಭವಿಸಿದರೆ ಡ್ರೋನ್ ಕ್ಯಾಮೆರಾಗಳು ಎಚ್ಚರಿಕೆ ನೀಡುತ್ತವೆ ಎಂದು ಹೇಳಿದ್ದರು. ಅದು ಈಗ ವಿಫಲವಾಯಿತೆ? ಉತ್ತರ ಪ್ರದೇಶದಿಂದ ಬುಲ್ಡೋಜರ್ ಬರಲಿದೆ. ಅದು ಇಲ್ಲಿ ಎಲ್ಲವನ್ನೂ ಸರಿ ಮಾಡುತ್ತದೆ ಎಂದಿದ್ದಾರೆ. ಕೆಸಿಆರ್ ಅವರೇ ರಾಜೀನಾಮೆ ನೀಡಲು ಸಿದ್ಧರಾಗಿ. ಬಿಜೆಪಿ ಸರ್ಕಾರ ತೆಲಂಗಾಣಕ್ಕೆ ₹ 2.52 ಕೋಟಿ ನೀಡಿದೆ ಎಂಬುದನ್ನು ಸಾಕ್ಷ್ಯ ಸಮೇತ ಸಾಬೀತು ಮಾಡುತ್ತೇನೆ. ಒಂದು ಕುಟುಂಬದಿಂದಾಗಿ ಶ್ರೀಲಂಕಾ ಸಾಲದಲ್ಲಿ ಮುಳುಗಿದಂತೆ ಕಲ್ವಕುಂಟ್ಲ ಕುಟುಂಬದಿಂದ ಇಡೀ ತೆಲಂಗಾಣ ಸಾಲದಲ್ಲಿ ಮುಳುಗಲಿದೆ. ತೆಲಂಗಾಣ ಸರ್ಕಾರಕ್ಕೆ ಹೊಸದಾಗಿ ಪಿಂಚಣಿ ಅಥವಾ ಸಂಬಳಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸಂಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಜುಬಿಲಿ ಹಿಲ್ಸ್​​ನಲ್ಲಿ ಅಪ್ರಾಪ್ತೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ತೆಲಂಗಾಣದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಶಾಸಕರ ಪುತ್ರನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ದ್ದು, ಆತನನ್ನು ಟಿಆರ್ ಎಸ್ ಸರ್ಕಾರ ಕಾಪಾಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ
Image
‘ನಮ್ಮ ಪಕ್ಷ ಎಲ್ಲ ಧರ್ಮವನ್ನು ಗೌರವಿಸುತ್ತದೆ, ಯಾವುದೇ ಧರ್ಮವನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ’: ಬಿಜೆಪಿ ಹೇಳಿಕೆ
Image
Hyderabad gangrape case ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಾಸಕನ ಮಗ ಭಾಗಿ, ವಿಡಿಯೊ ಶೇರ್​​ ಮಾಡಿದ ಬಿಜೆಪಿ ನಾಯಕ
Image
Watch ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಪ್ರತಿಭಟನೆ
Image
Hyderabad Gangrape ಹೈದರಾಬಾದ್: ಮರ್ಸಿಡೆಸ್ ಕಾರಿನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ

ಭಾನುವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಬಂಧನ ನಡೆದಿದೆ. ಈ ಪ್ರಕರಣದಲ್ಲಿ ಐವರನ್ನು ಆರೋಪಿಗಳೆಂದು ಹೆಸರಿಸಲಾಯಿತು. ಬಂಧಿತರಲ್ಲಿ ಮೂವರು ಅಪ್ರಾಪ್ತರು ಮತ್ತು 18 ವರ್ಷದ ಯುವಕ ಸೇರಿದ್ದಾರೆ. ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ಎರಡು ದಿನಗಳಲ್ಲಿ ವಿವರವಾದ ವರದಿಯನ್ನು ಕೇಳಿದ್ದಾರೆ.

ತೆಲಂಗಾಣ ಬಿಜೆಪಿ ಶಾಸಕ ರಘುನಂದನ್ ರಾವ್ ಅವರು ಎಐಎಂಐಎಂ ಮುಖಂಡರೊಬ್ಬರ ಪುತ್ರನ ಭಾಗಿಯಾಗಿರುವ ವಿಡಿಯೊ ಪುರಾವೆಗಳನ್ನು ಹಂಚಿಕೊಂಡಿದ್ದು, ಸಂತ್ರಸ್ತೆಯನ್ನು ತೋರಿಸಿದ್ದಾರೆ ಎಂದು ಕಾಂಗ್ರೆಸ್ ರಾವ್ ವಿರುದ್ಧ ಟೀಕಾಪ್ರಹಾರ ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sun, 5 June 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!