World Health Day 2022: ವಿಶ್ವ ಆರೋಗ್ಯ ದಿನದ ವಿಶೇಷತೆ ಏನು? ಉತ್ತಮ ಆರೋಗ್ಯಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ

| Updated By: shivaprasad.hs

Updated on: Apr 07, 2022 | 12:36 PM

ಆರೋಗ್ಯವು ದೈಹಿಕ ಸ್ವಾಸ್ಥ್ಯದೊಂದಿಗೆ, ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನೂ ಒಳಗೊಂಡಿದೆ. ಸಾಮಾಜಿಕ ಸ್ವಾಸ್ಥ್ಯವೆಂದರೆ ಸಾಮಾಜಿಕವಾಗಿ ಉತ್ತಮ ನಡತೆಯನ್ನು ಹೊಂದಿರುವುದು. ಒಬ್ಬ ವ್ಯಕ್ತಿಯು ಈ ಮೂರನ್ನೂ ಹೊಂದಿದ್ದರೆ ಅವನು ಅಥವಾ ಅವಳು ಆರೋಗ್ಯವಂತರು ಎಂದು ಹೇಳಲಾಗುತ್ತದೆ.

World Health Day 2022: ವಿಶ್ವ ಆರೋಗ್ಯ ದಿನದ ವಿಶೇಷತೆ ಏನು? ಉತ್ತಮ ಆರೋಗ್ಯಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ
ಪ್ರಾತಿನಿಧಿಕ ಚಿತ್ರ
Follow us on

ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾನೆ ಎಂದು ಹೇಳುವುದು ಹೇಗೆ? ಕೇವಲ ದೈಹಿಕವಾಗಿ ಆರೋಗ್ಯವಾಗಿದ್ದರೆ ಸಾಕೆ? ಅಥವಾ ಕೇವಲ ಮಾನಸಿಕವಾಗಿ ನೆಮ್ಮದಿಯಿಂದಿದ್ದರೆ ಸಾಕೆ? ಅಥವಾ ಇವೆರಡು ಇದ್ದರೆ ಸಾಕೆ? ಇಲ್ಲ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಆರೋಗ್ಯವು ದೈಹಿಕ ಸ್ವಾಸ್ಥ್ಯದೊಂದಿಗೆ, ಮಾನಸಿಕ (Mental Health) ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನೂ (Social Well being) ಒಳಗೊಂಡಿದೆ. ಹೌದು, ವೈಯಕ್ತಿಕ ಆರೋಗ್ಯದ ಜತೆಗೆ ಸಾಮಾಜಿಕ ಸ್ವಾಸ್ಥ್ಯವನ್ನೂ ಆರೋಗ್ಯವೆಂದೇ ಪರಿಗಣಿಸಲಾಗುತ್ತದೆ. ಸಾಮಾಜಿಕ ಸ್ವಾಸ್ಥ್ಯವೆಂದರೆ ಸಾಮಾಜಿಕವಾಗಿ ಉತ್ತಮ ನಡತೆಯನ್ನು ಹೊಂದಿರುವುದು. ಒಬ್ಬ ವ್ಯಕ್ತಿಯು ಈ ಮೂರನ್ನೂ ಹೊಂದಿದ್ದರೆ ಅವನು ಅಥವಾ ಅವಳು ಆರೋಗ್ಯವಂತರು ಎಂದು ಹೇಳಲಾಗುತ್ತದೆ. ಮಾನವನ ಸಂತೋಷದ ಜೀವನಕ್ಕೆ ಆರೋಗ್ಯವು ಅವಶ್ಯಕವಾಗಿದೆ. ಆರೋಗ್ಯವಂತ ವ್ಯಕ್ತಿಗಳು ಹೆಚ್ಚು ಕಾಲ ಬದುಕುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ಜತೆಗೆ ಉತ್ತಮ ಆರೋಗ್ಯ ಆರ್ಥಿಕವಾಗಿಯೂ ಸಹಕಾರಿ ಎನ್ನುತ್ತವೆ ವರದಿಗಳು. ಇಂದು (ಏ.7) ವಿಶ್ವ ಆರೋಗ್ಯ ದಿನ. ‘ನಮ್ಮ ಗ್ರಹ, ನಮ್ಮ ಆರೋಗ್ಯ’ ಎನ್ನುವ ಆಶಯದೊಂದಿಗೆ ಈ ಬಾರಿ ಆರೋಗ್ಯ ದಿನವನ್ನು (World Health Day) ಆಚರಿಸಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಏನೆಲ್ಲಾ ಬೇಕು? ಆರೋಗ್ಯ ದಿನದ ವಿಶೇಷವೇನು? ಇಲ್ಲಿದೆ ನೋಡಿ.

  1. ಪ್ರಪಂಚದಾದ್ಯಂತ ಲಕ್ಷಾಂತರ ಜನರು ವಿವಿಧ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ಪ್ರತಿ ವರ್ಷ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
  2. ಪ್ರತಿ ವರ್ಷ ಏಪ್ರಿಲ್ 7 ರಂದು ನಮ್ಮ ವೈದ್ಯಕೀಯ ಸಂಶೋಧನೆಯ ಹಲವಾರು ಸಾಧನೆಗಳನ್ನು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಯಶಸ್ಸನ್ನು ಪ್ರಶಂಸಿಸಲು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
  3. ‘ನಮ್ಮ ಗ್ರಹ, ನಮ್ಮ ಆರೋಗ್ಯ’ ಎಂಬುದು ‘ವಿಶ್ವ ಆರೋಗ್ಯ ದಿನ 2022’ರ ಆಶಯವಾಗಿದೆ. ನಮ್ಮ ಗ್ರಹದ ಸುಸ್ಥಿರ ಆರೋಗ್ಯದ ಜತೆಗೆ ವಿಶ್ವದ ಜನರ ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ಬಾರಿಯ ಉದ್ದೇಶ.
  4. 1948 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಮೊದಲ ವಿಶ್ವ ಆರೋಗ್ಯ ಸಭೆಯನ್ನು ನಡೆಸಿತ್ತು. ಅಲ್ಲಿ ‘ವಿಶ್ವ ಆರೋಗ್ಯ ದಿನ’ವನ್ನು ರೂಪಿಸಲು ಒತ್ತಾಯಿಸಲಾಗಿತ್ತು.
  5. ಉತ್ತಮ ಆರೋಗ್ಯಕ್ಕೆ ದಿನಚರಿಯಲ್ಲಿ ವ್ಯಾಯಾಮವನ್ನು ತಪ್ಪದೇ ಅಳವಡಿಸಿಕೊಳ್ಳಿ. ಇದು ಒತ್ತಡ ನಿವಾರಣೆಗೂ ಸಹಕಾರಿ ಎನ್ನುತ್ತದೆ ಅಧ್ಯಯನ. ದೀರ್ಘಕಾಲದ ಉತ್ತಮ ಆರೋಗ್ಯಕ್ಕೆ ವ್ಯಾಯಾಮ, ವಾಕಿಂಗ್, ನೃತ್ಯ ಮೊದಲಾದ ಮಾದರಿಯಲ್ಲಿ ದೇಹವನ್ನು ದಂಡಿಸಿ, ಫಿಟ್​ ಆಗಿರಬಹುದು.
  6. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಪ್ರಮುಖ ಅಂಶ. ಇದು ಕೊಬ್ಬಿನ ವಿಘಟನೆಗೆ ಸಹಾಯ ಮಾಡುವುದಲ್ಲದೇ ವ್ಯಾಯಾಮದ ಸಮಯದಲ್ಲಿ ಬೆವರಿನ ಮೂಲಕ ನಮ್ಮಿಂದ ಹೊರಹೋದ ನೀರನ್ನು ದೇಹಕ್ಕೆ ಮತ್ತೆ ನೀಡಿ ಚೈತನ್ಯವಾಗಿರಿಸುತ್ತದೆ. ಹೆಚ್ಚು ನೀರು ಕುಡಿಯುವುದು ನಮ್ಮನ್ನು ಲವಲವಿಕೆಯಿಂದಿರಿಸುತ್ತದೆ.
  7. ದೇಹಕ್ಕೆ ಅಗತ್ಯ ನಿದ್ರೆ ಬೇಕೇ ಬೇಕು. ಆದ್ದರಿಂದ ದಿನಚರಿಯಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಹಾಗೂ ವ್ಯಾಯಾಮಗಳು ದೇಹವನ್ನು ಚೈತನ್ಯಶಾಲಿಯಾಗಿಸುತ್ತವೆ.
  8. ನೀವು ನಿಮ್ಮ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚು ಗಂಭೀರವಾಗಿಲ್ಲದಿದ್ದರೆ ಈ ಆರೋಗ್ಯ ದಿನದಂದು ಅದರ ಬಗ್ಗೆ ಚಿಂತಿಸಲು ಸಕಾಲ.

ಇದನ್ನೂ ಓದಿ: ಶೇಂಗಾ ಚಿಕ್ಕಿ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು..!

Summer Teas: ಬೇಸಿಗೆಯಲ್ಲಿ ಈ ಐದು ವಿಧದ ಟೀ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು ತಿಳಿಯಿರಿ..!