ಸಮುದ್ರದಲ್ಲಿ ಹಲವಾರು ಬಗೆಯ ಸಾಗರ ಜೀವಿಗಳಿವೆ. ಮೆದುಳು ಮತ್ತು ಹೃದಯವೇ ಇಲ್ಲದ ಈ ಜೀವಿಗಳು ಸಾಗರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹೌದು ಈ ಜೀವಿಗಳು ಸಮುದ್ರದಲ್ಲಿನ ಫಿಲ್ಟರ್ ಫೀಡರ್ ಆಗಿವೆ. ಅಂದರೆ ಇವು ಸಮುದ್ರದಲ್ಲಿ ತೇಳುತ್ತಿರುವ ಪ್ಲ್ಯಾಂಕ್ಟನ್ ಮತ್ತು ಇತರ ಜೀವಿಗಳನ್ನು ತಿನ್ನುವ ಮೂಲಕ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಜೆಲ್ಲಿ ಮೀನುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳು ವಹಿಸುವ ಪಾತ್ರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ನವೆಂಬರ್ 3 ರಂದು ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೆಲ್ಲಿ ಮೀನುಗಳಿಗೆ ಸಂಬಂಧಿಸಿದ ಕೆಲವು ಕೆಲವು ಕೂತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯಿರಿ
ಜೆಲ್ಲಿ ಫಿಶ್ ಗಳು ಹೆಚ್ಚಾಗಿ ದಕ್ಷಿಣ ಗೋಳಾರ್ಧದಲ್ಲಿನ ಸಮುದ್ರದಲ್ಲಿ ವಾಸಿಸುತ್ತವೆ. ಆದರೆ ಹವಾಮಾನವು ಬದಲಾಗುತ್ತಿದ್ದಂತೆ ಜೆಲ್ಲಿ ಫಿಶ್ಗಳು ದಕ್ಷಿಣದಿಂದ ಉತ್ತರ ಗೋಳಾರ್ಧದ ಕಡೆಗೆ ವಲಸೆ ಹೋಗುತ್ತವೆ. ದಕ್ಷಿಣ ಗೋಳಾರ್ಧ ಭಾಗದಲ್ಲಿ ನವೆಂಬರ್ ತಿಂಗಳಲ್ಲಿ ವಸಂತಕಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಆಗುವಂತಹ ಹವಮಾನ ಬದಲಾವಣೆಯ ಕಾರಣದಿಂದಾಗಿ ಜೆಲ್ಲಿ ಮೀನುಗಳು ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧದ ಸಮುದ್ರ ತೀರಕ್ಕೆ ವಲಸೆ ಹೋಗುತ್ತವೆ. ಈ ಕಾರಣದಿಂದಾಗಿ ನವೆಂಬರ್ 2014 ರಿಂದ ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಬೇಕು ಎಂದು ತೀರ್ಮಾನಿಸಲಾಯಿತು. ಮತ್ತು ಜೆಲ್ಲಿ ಮೀನುಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ ಜರ್ಮನ್ ಜೀವಶಾಸ್ತ್ರಜ್ಞ ಡಾ. ಅರ್ನ್ಸ್ಟ್ ಹೆಕೆಲ್ ಅವರ ಜನ್ಮದಿನವಾದ ನವೆಂಬರ್ 3 ನೇ ತಾರೀಕನ್ನು ಆಯ್ಕೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ನವೆಂಬರ್ ತಿಂಗಳ 3 ನೇ ತಾರೀಕಿನಂದು ಆಚರಿಸಲಾಗುತ್ತದೆ.
ಜೆಲ್ಲಿ ಮೀನುಗಳು ಸಮುದ್ರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಈ ಮೀನುಗಳು ಸಮುದ್ರದಲ್ಲಿನ ಫಿಲ್ಟರ್ ಫೀಡರ್ ಆಗಿವೆ. ಅಂದರೆ ಈ ಮೀನು ಸಮುದ್ರದಲ್ಲಿ ತೇಳುತ್ತಿರುವ ಪ್ಲ್ಯಾಂಕ್ಟನ್ ಮತ್ತು ಇತರ ಜೀವಿಗಳನ್ನು ತಿನ್ನುವ ಮೂಲಕ ಸಾಗರದ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಅಲ್ಲದೆ ಇವುಗಳು ಸಂಶೋಧನೆಗೆ ಒಳಪಡುವ ಪ್ರಮುಖ ಸಮುದ್ರ ಜೀವಿಯಾಗಿದೆ. ಹೆಚ್ಚಾಗಿ ಚೀನಾದಲ್ಲಿ ಇವುಗಳನ್ನು ಆಹಾರ ರೂಪದಲ್ಲಿ ಸೇವಿಸಲಾಗುತ್ತದೆ ಮತ್ತು ಹಲವಾರು ಸಾಂಪ್ರದಾಯಿಯ ಚಿಕಿತ್ಸೆಗಳಲ್ಲೂ ಬಳಸಲಾಗುತ್ತದೆ. ಇವುಗಳು ಮೆದುಳು ಇಲ್ಲದ ಜೀವಿಯಾಗಿದ್ದು, ಈ ಜೀವಿಯ ಬಗ್ಗೆ ಜನರಿಗೆ ಇನ್ನಷ್ಟು ತಿಳುವಳಿಕೆ ಮೂಡಿಸಲು ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ರಾತ್ರಿ ನಿದ್ರೆ ಕಡಿಮೆ ಮಾಡಿದರೆ ಬೇಗನೆ ಹೃದಯಾಘಾತವಾಗುತ್ತದೆ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Sun, 3 November 24